ದೇಶದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದೆ. ಕೊರೊನಾಸುರನ ನಿಯಂತ್ರಕ್ಕಾಗಿ ದೇಶವನ್ನು ಲಾಕ್ ಡೌನ್ ಮಾಡಲಾಗಿದೆ. ಇದರಿಂದ ದೇಶದ ವ್ಯಾಪಾರ ವಹಿವಾಟು ಬಂದ್ ಆಗಿವೆ. ಹಾಗಾಗಿ ಸಾಕಷ್ಟು ಜನರ ಉದ್ಯೋಗಕ್ಕೆ ಕತ್ತರಿ ಬೀಳುವ ಸಾಧ್ಯತೆ ಹೆಚ್ಚಾಗಿತ್ತು. ಆದ್ದರಿಂದ ಸಣ್ಣ, ಮಧ್ಯಮ ಕಂಪನಿಗಳ ಆರ್ಥಿಕ ಉತ್ತೇಜನಕ್ಕೆ ಆರ್, ಬಿ.ಐ ಪ್ಯಾಕೇಜ್ ಘೋಷಣೆ ಮಾಡಿದೆ. ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ, ಆರ್ ಬಿ ಐ ಗವರ್ನರ್ ಶಕ್ತಿಕಾಂತ್ ದಾಸ್, ಉದ್ಯೋಗ ವಲಯದ ಮೇಲೆ ಕೋರೋನಾ ಭಾರಿ ಹೊಡೆತ ನೀಡಿದೆ. 1 ಲಕ್ಷ ಕೋಟಿ ರೂಪಾಯಿ ಪ್ಯಾಕೇಜನ್ನು ಆರ್.ಬಿ.ಐ ಘೋಷಣೆ ಮಾಡಿದೆ. ನಬಾರ್ಡ ಗೆ 25,000 ಕೋಟಿ ರೂ., ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ 50,000 ಕೋಟಿ ರೂ. ಮೀಸಲಿಡಲಾಗಿದೆ. ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಮಂಡಳಿಗೆ 15,000 ಕೋಟಿ ರೂ.,ನ್ಯಾಷನಲ್ ಹೌಸಿಂಗ್ ಬ್ಯಾಂಕಿಗೆ 10,000 ಕೋಟಿ ರೂ. ಕಾಯ್ದಿರಿಸಲಾಗಿದೆ. ಗ್ರಾಮೀಣ ಮತ್ತು ಸಹಕಾರ ಬ್ಯಾಂಕುಗಳಿಗೆ ನೆರವು ನೀಡಲಿದೆ. ಉದ್ಯಮ ವಲಯಕ್ಕೆ ಸಾಲ ಸೌಲಭ್ಯ ಕಲ್ಪಿಸಲಿದೆ. ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೂ ನೆರವು ನೀಡಲಾಗುವುದು ಎಂದು ಶಕ್ತಿಕಾಂತ್ ದಾಸ ಹೇಳಿದರು.
ಆರ್. ಬಿ.ಐ ನಿಂದ ಆಗಿರುವ ಘೋಷಣೆಗಳು :
• ಕೊರೊನಾ ವಿರುದ್ಧ ಹೋರಾಟಕ್ಕೆ ರಾಜ್ಯಗಳಿಗೆ ಶೇ.60ರಷ್ಟು ಹೆಚ್ಚುವರಿ ಹಣ
• ರಿಸರ್ವ್ ರೆಪೋ ದರ ಶೇ.3.75ರಷ್ಟು ಇಳಿಕೆ
• ಇದರಿಂದ ಆರ್.ಬಿ.ಐನಿಂದ ಬ್ಯಾಂಕ್ ಗಳಿಗೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ
• ಬ್ಯಾಂಕ್ ಗಳು ಲಾಭದ ಅಂಶವನ್ನು ಘೋಷಣೆ ಮಾಡುವ ಅಗತ್ಯವಿಲ್ಲ
• 3 ತಿಂಗಳ ಕಾಲ ಎನ್ ಪಿ.ಎ ನಿಯಮ ಅನ್ವಯಿಸುವುದಿಲ್ಲ
• ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ 50 ಸಾವಿರ ಕೋಟಿ ಮೀಸಲು
• ನಬಾರ್ಡ್ ಗೆ 25 ಸಾವಿರ ಕೋಟಿ ನೀಡಲಾಗುತ್ತಿದೆ
• ನಬಾರ್ಡ್ 25 ಸಾವಿರ ಕೋಟಿ ಮೀಸಲಿಡಲಾಗಿದೆ
• ಸಿಐಡಿಬಿಐ- ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಮಂಡಳಿಗೆ 15 ಸಾವಿರ ಕೋಟಿ ಮೀಸಲು
• ನ್ಯಾಶನಲ್ ಹೌಸಿಂಗ್ ಬ್ಯಾಂಕ್ ಗೆ 10 ಸಾವಿರ ಕೋಟಿ ಮೀಸಲು








