ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ – 5 ಲಕ್ಷದ ವರೆಗೂ ಶೈಕ್ಷಣಿಕ ಸಾಲ ಸೌಲಭ್ಯ..!
ಸರ್ಕಾರವು ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದೆ. ಅರಿವು ಶೈಕ್ಷಣಿಕ ಸಾಲ ಯೋಜನೆಯಡಿ ವಿದ್ಯಾರ್ಥಿಗಳಿಗೆ 5 ಲಕ್ಷದ ವರೆಗೂ ಶೈಕ್ಷಣಿಕ ಸಾಲ ಸೌಲಭ್ಯ ನೀಡಲು ಸರ್ಕಾರ ಮುಂದಾಗುವ ಮೂಲಕ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವಾಗಲು ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ.
2020-21ನೇ ಸಾಲಿನಲ್ಲಿ ಈ ಯೋಜನೆ ಅನುಷ್ಠಾನಕ್ಕೆ ಬಂದಿತ್ತು. ಶೈಕ್ಷಣಿಕ ಸಾಲ ಯೋಜನೆಯಲ್ಲಿ ಪ್ರವರ್ಗ 2ಎ ರ ಮಡಿವಾಳ ಮತ್ತು ಅದರ ಉಪ ಜನಾಂಗಕ್ಕೆ ಸೇರಿದ ವಿದ್ಯಾರ್ಥಿಗಳು ಸಾಮಾನ್ಯ ಪ್ರವೇಶ ಪರೀಕ್ಷೆ ಮೂಲಕ ಪ್ರವೇಶ ಪಡೆದು ವಿದ್ಯಾಭ್ಯಾಸ ಮಾಡುವ ಕೋರ್ಸ್ ಗಳಿಗೆ ಅನುಗುಣವಾಗಿ ಸಾಲ ನೀಡಲಾಗುತ್ತೆ.
ಆಗ್ನೇಯ ಮಧ್ಯ ರೈಲ್ವೆ (SECR) – ಟ್ರೇಡ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಇನ್ನೂ ವಾರ್ಷಿಕವಾಗಿ 1 ಲಕ್ಷ ರೂಪಾಯಿಗಳಂತೆ ಕೋರ್ಸ್ ನ ಅವಧಿಗೆ ಗರಿಷ್ಠ 4 ಲಕ್ಷದಿಂದ 5 ಲಕ್ಷ ರೂಪಾಯಿಗಳ ವರೆಗೂ ವಾರ್ಷಿಕ ಶೇ. 2ರ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡಲಾಗುತ್ತಿದೆ. ಇನ್ನೂ ಎಂಬಿಬಿಎಸ್ , ಬಿಇ, ಬಿಯುಎಂಎಸ್ , ಎಂಬಿಎ, ಎಂಟೆಕ್, ಎಂಇ, ಎಂಡಿ, ಪಿಹೆಚ್ ಡಿ, ಬಿಸಿಎ, ನರ್ಸಿಂಗ್ , ಬಿಎಸ್ ಸಿ, ಬಿ ಫಾರ್ಮ್ , ಬಿಎಸ್ ಸಿ , ಪ್ಯಾರಾ ಮೆಡಿಕಲ್ , ಬಿಟೆಕ್ ಹೀಗೆ ಇನ್ನೂ ಹಲವು ಕೋರ್ಸ್ ಗಳನ್ನ ತೆಗೆದುಕೊಂಡಿರುವ ವಿದ್ಯಾರ್ಥಿಗಳಿಂದ ಈ ಯೋಜನೆಯಡಿ ಅರ್ಜಿ ಆಹ್ವಾನಿಸಲಾಗಿದೆ.
ಈ ಸಂಬಂಧ ಇನ್ನಷ್ಟು ಮಾಹಿತಿಗಳಿಗಾಗಿ ಅಧಿಕೃತ ವೆಬ್ ಸೈಟ್ www.dbcdc.karnataka.govi.in ನಲ್ಲಿ ತಿಳಿದುಕೊಳ್ಳಬಹುದು. ಇದೇ ವೆಬ್ ಸೈಟ್ ಮೂಲಕವೇ ಆಸಕ್ತರು ಅರ್ಜಿ ಸಲ್ಲಿಸಬಹುದು.








