Ukraine : ಐಫೆಲ್ ಟವರ್ನಲ್ಲಿ ಉಕ್ರೇನ್ ರಾಷ್ಟ್ರೀಯ ವರ್ಣದ ದೀಪಾಲಂಕಾರ – ‘ಉಕ್ರೇನ್ ಜೊತೆಗಿದ್ದೇವೆ’….!!!
ಫ್ಯಾರಿಸ್ : ಉಕ್ರೇನ್ ಮೇಲೆ ಆಕ್ರಮಣ ನಡೆಸುತ್ತಿರುವ ರಷ್ಯಾ ನಡೆಗೆ ವಿಶ್ವಾದ್ಯಂತ ಬಹುತೇಕ ದೇಶಗಳು ವಿರೋಧ ವ್ಯಕ್ತಪಡಿಸುತ್ತಿವೆ.. ಇದೀಗ ಪ್ಯಾರಿಸ್ ನಲ್ಲಿನ ಐಫೆಲ್ ಟವರ್ನಲ್ಲಿ ಉಕ್ರೇನ್ ರಾಷ್ಟ್ರೀಯ ವರ್ಣವನ್ನು ವಿದ್ಯುತ್ ದೀಪಾಲಂಕಾರದಿಂದ ಬೆಳಗಿಸುವ ಮೂಲಕ ರಷ್ಯಾ ಯುದ್ಧವನ್ನು ಫ್ರಾನ್ಸ್ ವಿರೋಧಿಸಿದೆ. ಉಕ್ರೇನ್ ಬೆಂಬಲಿಸಿದೆ.
ಪ್ಯಾರಿಸ್ ಮೇಯರ್ ಆನ್ನೆ ಹಿಡಾಲ್ಗೊ ಅವರ ಕೋರಿಕೆಯ ಮೇರೆಗೆ ಐಫೆಲ್ ಟವರ್ ಶುಕ್ರವಾರ ಉಕ್ರೇನ್ನ ರಾಷ್ಟ್ರೀಯ ನೀಲಿ ಮತ್ತು ಹಳದಿ ಬಣ್ಣಗಳಲ್ಲಿ ಬೆಳಗಿತು. ರಷ್ಯಾದ ದಾಳಿಯ ಹಿನ್ನೆಲೆಯಲ್ಲಿ ಉಕ್ರೇನ್ ಜನರೊಂದಿಗೆ ಒಗ್ಗಟ್ಟನ್ನು ಸೂಚಿಸುವ ಸಂಕೇತ ಇದು ಎಂದು ಮೇಯರ್ ತಿಳಿಸಿದ್ದಾರೆ. ಉಕ್ರೇನ್ ಮಿಲಿಟರಿ ಮೇಲೆ ನಿಯಂತ್ರಣ ಸಾಧಿಸಲು ರಷ್ಯಾ ನಡೆಸುತ್ತಿರುವ ಈ ಯುದ್ಧವನ್ನ ಅಮೆರಿಕ ಸೇರಿ ಅನೇಕ ಪಾಶ್ಚಿಮಾತ್ಯ ರಾಷ್ಟ್ರಗಳು ವಿರೋಧ ವ್ಯಕ್ತಪಡಿಸಿವೆ.