ಸ್ಟಾರ್ ಡೈರೆಕ್ಟರ್ ಪ್ರೇಮ್ ನಿರ್ದೇಶನದ ಬಹುನಿರೀಕ್ಷಿತ ‘ಏಕ್ ಲವ್ ಯಾ..’ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಪ್ರೇಮಿಗಳ ದಿನಾಚರಣೆ ಹಿನ್ನೆಲೆ ಚಿತ್ರದ ಟೀಸರ್ ಬಿಡುಗಡೆಗೊಳಿಸಲಾಗಿದೆ. ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಸಕತ್ ವೈರಲ್ ಆಗಿದ್ದು, ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಎಕ್ಸ್ಕ್ಯೂಸ್ಮಿ ಚಿತ್ರದ ಬಳಿಕ ಅಂತಹದ್ದೇ ಮ್ಯೂಸಿಕಲ್ ಸಿನಿಮಾ ಮಾಡಲು ಪ್ರೇಮ್ ಮುಂದಾಗಿದ್ದು, ಅಭಿಮಾನಿಗಳಲ್ಲಿ ಕ್ಯೂರಿಯಾಸಿಟಿ ಹೆಚ್ಚಿದ್ದಾರೆ.
ಚಿತ್ರಕ್ಕೆ ರಕ್ಷಿತಾ ಪ್ರೇಮ್ ಬಂಡವಾಳ ಹಾಕಿದ್ದು, ತನ್ನ ತಮ್ಮ ರಾಣಾನನ್ನೇ ಚಿತ್ರದ ನಾಯಕನನ್ನಾಗಿ ಮಾಡಿದ್ದಾರೆ. ರಾಣಾ ಜತೆ ರೀಷ್ಮಾ ನಾಣಯ್ಯ ಹಾಗೂ ಡಿಂಪಲ್ ಕ್ವೀನ್ ರಚಿತಾರಾಂ ಹೆಜ್ಜೆ ಹಾಕಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಮ್ಯೂಜಿಕ್ ಕಂಪೋಸ್ ಮಾಡಿದ್ದಾರೆ. ಈಗಾಗಲೇ ಏಕ್ ಲವ್ ಯಾ ಚಿತ್ರ ಬಿಟ್ವೊಂದು ಸಿನಿರಸಿಕರ ಮನತಣ್ಣಿಸಿದ್ದು, ಚಿತ್ರದ ಹಾಡುಗಳ ಬಗ್ಗೆ ಭಾರೀ ನಿರೀಕ್ಷೆ ಮೂಡಿಸಿದೆ.
ಚಿತ್ರದಲ್ಲಿ ರಚಿತಾ ರಾಮ್ ಬೋಲ್ಡಾಗಿ ಕಾಣಿಸಿಕೊಂಡಿರುವುದು ಅಭಿಮಾನಿಗಳಲ್ಲಿ ಕುತೂಹಲವನ್ನ ಕೆರಳಿಸಿದೆ. ಚಿತ್ರದ ದೃಶ್ಯಗಳನ್ನ ಸುಂದರ ತಾಣಗಳಲ್ಲಿ ಚಿತ್ರೀಕರಣ ಮಾಡಿರುವುದು ಸಿನಿಮಾ ನೋಡುಗರ ಕಣ್ಣುತಂಪಾಗಿಸುವುದರಲ್ಲಿ ಡೌಟೇಯಿಲ್ಲ ಎನ್ನಲಾಗಿದೆ. ಚಿತ್ರದಲ್ಲಿ ನಾಯಕ್ ರಾಣಾ ರಗಡ್ ಆಗಿ ಕಾಣಿಸಿಕೊಂಡಿರುವುದು ಪಡ್ಡೆಗಳ ಮನದಲ್ಲಿ ಗಟ್ಟಿಸ್ಥಾನ ಪಡೆಯಲಿದ್ದಾರೆ ಎನ್ನಲಾಗಿದೆ. ಮೊದಲ ಸಿನಿಮಾದಲ್ಲೇ ರಾಣಾ ಅನುಭವಿ ನಾಯಕನಂತೆ ಕಾಣಿಸಿಕೊಂಡಿರುವುದು ಪ್ರೇಮ್ ಅವರ ಕಲಾಕೌಶಲ್ಯಕ್ಕೆ ಕನ್ನಡಿ ಹಿಡಿದಿದೆ. ಅದ್ದೂರಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಏಕ್ ಲವ್ ಯಾ ಸಿನಿಮಾ ಸೌತ್ ಇಂಡಿಯಾದಲ್ಲಿ ಸಂಚಲನ ಕ್ರಿಯೆಟ್ ಮಾಡುವುದರ ಜೊತೆಗೆ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಲಿದೆ ಎಂದು ಟೀಸರ್ ವೀಕ್ಷಿಸಿದ ಸಿನಿಪರಿಣಿತರ ಲೆಕ್ಕಾಚಾರವಾಗಿದೆ.