ಏಕ್ ಲವ್ ಯಾ ಟೀಸರ್ ಬಿಡುಗಡೆ, ಪ್ರೇಮ್ ಶೈಲಿಯ ಪ್ರಚಾರ..
ಪ್ರೇಮ್ ನಿರ್ದೇಶನದ ಏಕ್ ಲವ್ ಯಾ ಸಿನಿಮಾದ ಬಿಡುಗಡೆಗೆ ಇನ್ನೂ ಕೆಲವೇ ದಿನಗಳಿವೆ, ಈಗಾಗಲೇ ಚಿತ್ರದ ಪ್ರಚಾರವನ್ನ ಭರ್ಜರಿಯಾಗಿ ಮಾಡಿಕೊಂಡು ಬರಲಾಗುತ್ತಿದೆ. ಪ್ರೇಮ್ ಚಿತ್ರ ಅಂದರೆ ಅಲ್ಲಿ ಪ್ರಚಾರಕ್ಕೆ ಕೊರತೆ ಇರುವುದಿಲ್ಲ ಅಷ್ಟು ಅಬ್ಬರವನ್ನ ಸಿನಿಮಾ ಬಿಡುಗಡಗೂ ಮುನ್ನವೇ ಕ್ರಿಯೇಟ್ ಮಾಡ್ತಾರೆ.
ಏಕ್ ಲವ್ ಯಾ ಸಿನಿಮಾ ಪ್ರಚಾರಾರ್ಥವಾಗಿ ಕೇವಲ 12 ಸೆಕೆಂಡ್ ಗಳ ಟೀಸರ್ ಅನ್ನ ಪ್ರೇಮ್ ಬಿಡುಗಡೆ ಮಾಡಿದ್ದಾರೆ. ಈ ಮೂಲಕ ಚಿತ್ರದ ಕುತೂಹಲವನ್ನ ದುಪ್ಪಟ್ಟುಗೊಳಿಸಿದ್ದಾರೆ. ಚಿತ್ರದ ಟೀಸರ್ ನ ಒಟ್ಟು ಸಮಯ 26 ಸೆಕೆಂಡ್ ಆದರೆ ಅದರಲ್ಲಿ ಚಿತ್ರದ ವಿಶ್ಯುವಲ್ ಇರೋದು ಕೇವಲ 12 ಸೆಕೆಂಡ್ ಇದರಲ್ಲಿ ಹೀರೋ ಮಾಸ್ ಅವತಾರವನ್ನ ತೋರಿಸಲಾಗಿದೆ.ಏಕ್ ಲವ್ ಯಾ ಟೀಸರ್ ಬಿಡುಗಡೆ, ಪ್ರೇಮ್ ಶೈಲಿಯ ಪ್ರಚಾರ..
ಡಿಂಪಲ್ ಕ್ವೀನ್ ರಚಿತಾ ರಾಮ್ ಜೊತೆಗೆ ಇದೆ ಮೊದಲ ಭಾರಿಗೆ ನಾಯಕನಾಗಿ ನಟಿಸುತ್ತಿರುವ ರಾಣಾ ನಟಿಸುತ್ತಿದ್ದಾರೆ. ಈಗಾಗಲೇ ಹಾಡಗಳ ಮೂಲಕ ಪ್ರೇಕ್ಷಕರನ್ನ ಸೆಳೆದಿರುವ ಚಿತ್ರ ಟೀಸರ್ ಮೂಲಕ ಕುತುಹೂಲ ಹೆಚ್ಚಿಸಿದೆ.
ಫೆಬ್ರವರಿ 21 ರಂದು ರಿಲೀಸ್ ಆಗಿರುವ ಟೀಸರ್ ಒಂದೇ ಅಲ್ಲ ಇದೇ ರೀತಿ ಇನ್ನೂ ಎರಡು ಚಿಕ್ಕ ಚಿಕ್ಕ ಟೀಸರ್ ಗಳು ರಿಲೀಸ್ ಆಗಲಿವೆ. ಫೆಬ್ರವರಿ 24 ರಂದು ಕರ್ನಾಟಕದ 300 ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ಚಿತ್ರ ರಿಲೀಸ್ ಆಗಲಿದೆ. ಅಲ್ಲದೆ ವಿದೇಶಗಲ್ಲೂ ಏಕಕಾಲಕ್ಕೆ ರಿಲೀಸ್ ಆಗಲಿದೆ.