ತಂಗಿಯ ಮೇಲೆ ಅಕ್ಕನಿಂದಲೇ ನಿರಂತರ ಅತ್ಯಾಚಾರ : ಇಷ್ಟಕ್ಕೇ ನಿಂತಿಲ್ಲ ಈ ಪಾಪಿಯ ಕ್ರೂರತೆ..!
ಮಧ್ಯಪ್ರದೇಶ: ತಂಗಿ ಅಥವ ತಮ್ಮ ತಪ್ಪು ಮಾಡಿದ್ರೆ ಅವರನ್ನ ತಿದ್ದಿ ಬುದ್ದಿ ಹೇಳಬೇಕಾಗಿರೋರು ಅಕ್ಕ ಅಥವ ಅಣ್ಣ.. ಆದ್ರೆ ಇಲ್ಲೊಬ್ಬ ನೀಚ ಅಕ್ಕ ತನ್ನ ತಂಗಿಯ ಜೀವನವನ್ನ ಯಾವ ರೀತಿ ಸರ್ವಾನಾಶ ಮಾಡಿದ್ದಾಳೆ ನೋಡಿ..
5 ದಿನದಲ್ಲಿ 2 ಮದ್ವೆಯಾದ ಟೆಕ್ಕಿ : 6ನೇ ದಿನಕ್ಕೆ ನಾಪತ್ತೆ..!
ಮಧ್ಯಪ್ರದೇಶದ ಭೋಪಾಲ್ ನಲ್ಲಿ 20 ವರ್ಷದ ಯುವತಿಯೊಬ್ಬಳು ನಿರಂತರವಾಗಿ ತನ್ನ ತಂಗಿಯ ಮೇಲೆ ಅತ್ಯಾಚಾರವೆಸಗಿದ್ದಾಳೆ. ತಂಗಿಯನ್ನ ಬಲವಂತವಾಗಿ ಮಾದಕ ವ್ಯಸನಿಯನ್ನಾಗಿಸಿ ಬಳಿಕ ಆಕೆಯ ಮೇಲೆ ಎರಡು ವರ್ಷಗಳ ಕಾಲ ನಿರಂತರವಾಗಿ ಅತ್ಯಾಚಾರ ಮಾಡಿದ್ದಾಳೆ.
ಅಂದ್ಹಾಗೆ ಈಕೆ ಇಂದೋರ್ನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ತನ್ನ 15 ವರ್ಷದ ತಂಗಿಯನ್ನು ಮೊದಲು ಮಾದಕ ವ್ಯಸನಿಯನ್ನಾಗಿ ಮಾಡಿದ್ದ ಈಕೆ ಬಳಿಕ ಆಕೆಯ ಮೇಲೆ ಅತ್ಯಾಚಾರ ಮಾಡಿದ್ದಾಳೆ. ಅಷ್ಟಕ್ಕೇ ಸುಮ್ಮನಾಗದ ಈ ನೀಚೆ ತನ್ನ ತಂಗಿಯ ಮೇಲೆ ಇತರಿಂದಲೂ ಅತ್ಯಾಚಾರ ಮಾಡಿಸಿ ವಿಕೃತಿ ಮೆರೆದಿದ್ದಾಳೆ.
ಸಿದ್ದರಾಮಯ್ಯ ಡಿಸಿಎಂ, ಸಿಎಂ ಆಗುವ ಮಟ್ಟಕ್ಕೆ ಬೆಳೆದಿದ್ದೇ ನನ್ನ ಶ್ರಮದಿಂದ: ಹುಲಿಯಾಗೆ ದಳಪತಿ ಡಿಚ್ಚಿ..!
ಸಂತ್ರಸ್ತೆಯು 10ನೇ ತರಗತಿ ವಿದ್ಯಾರ್ಥಿನಿಯಾಗಿದ್ದು, ಅಕ್ಕನ ಕರಾಳ ಮುಖವಾಡವನ್ನ ಪೊಲೀಸರ ಬಳಿ ಕಳಚಿದ್ದಾಳೆ. ಮೊದಲಿಗೆ ಆಕೆಯ ಅಕ್ಕ ಆಕೆಯನ್ನ ಮನೆಯ ಟೆರೆಸ್ ಮೇಲೆ ಕರೆದೊಯ್ದು ಸಿಗರೇಟ್ ಸೇದಿದ್ದಾಳೆ. ಬಳಿಕ ಬಲವಂತವಾಗಿ ಆಕೆಗೂ ಸಿಗರೇಟ್ ಸೇದುವುದನ್ನ ಅಭ್ಯಾಸ ಮಾಡಿಸಿದ್ದಾಲೆ. ನಂತರ ಗಾಂಜಾ, ಮದ್ಯಪಾನ ಮತ್ತು ಡ್ರಗ್ಸ್ ತೆಗೆದುಕೊಳ್ಳೋದನ್ನ ರೂಡಿ ಮಾಡಿಸಿದ್ದಾಳೆ. ಬಳಿಕ ಆಕೆಯ ಮೇಲೆ ಅತ್ಯಾಚಾರವೆಸಗುತ್ತಿದ್ದಳು. ಅಷ್ಟೇ ಅಲ್ಲ ಬೇರೆಯವರಿಗೆ ಆಕೆಯನ್ನ ಪೂರೈಕೆ ಮಾಡುತ್ತಿದ್ದಳು ಎಂದು ಸಂತ್ರಸ್ತೆ ತಿಳಿಸಿದ್ದಾರೆ.
KGF-2 ಕ್ಲೈಮಾಕ್ಸ್ ಶೂಟಿಂಗ್ ಕಂಪ್ಲೀಟ್ ..! ಕುಂಬಳಕಾಯಿ ಒಡೆದ ಟೀಂ..!
ಸದ್ಯ ಈ ಸಂಬಂಧ ಗಾಂಧಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಂತ್ರಸ್ತ ಬಾಲಕಿಗೆ ಕಳೆದ 2 ತಿಂಗಳಿಂದ ಆಪ್ತ ಸಮಾಲೋಚನೆಯನ್ನು ಕೊಡಿಸಲಾಗಿದೆ. ಸಂತ್ರಸ್ತೆಯ ಅಕ್ಕನನ್ನು ಬಂಧಿಸಲಾಗಿದೆ. ಜೊತೆಗೆ ಈ ಜಾಲದಲ್ಲಿ ತೊಡಗಿಕೊಂಡಿರುವ ನಾಲ್ವರನ್ನು ಸಹ ವಶಕ್ಕೆ ಪಡೆಯಲಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel







