KGF-2 ಕ್ಲೈಮಾಕ್ಸ್ ಶೂಟಿಂಗ್ ಕಂಪ್ಲೀಟ್ ..! ಕುಂಬಳಕಾಯಿ ಹೊಡೆದ ಟೀಂ..!
ಕನ್ನಡ ಸಿನಿಮಾರಂಗವಷ್ಟೇ ಅಲ್ಲ ಇಡೀ ಭಾರತೀಯ ಸಿನಿಮಾರಂಗವೇ ಜಾತಕ ಪಕ್ಷಿಯಂತೆ ಕಾಯುತ್ತಿರುವ ಸಿನಿಮಾ ಅಂದ್ರೆ ಅದು ಕೆಜೆಎಫ್ 2. ಕೆಜಿಎಫ್ ಚಾಪ್ಟರ್ 1 ಗರುಡನ ಕೊಲೆಯಲ್ಲಿ ಅಂತ್ಯವಾಗಿತ್ತು. ಅದಾದ ಬಳಿಕ 2 ವರ್ಷಗಳೇ ಕಳೆದುಹೋಗಿದ್ದು, ಕೆಜಿಎಫ್ ಚಾಪ್ಟರ್ 2 ಯಾವಾಗ ಬರಲಿದೆ ಅಂತ ಅಭಿಮಾನಿಗಳು ಕಾಯುತ್ತಿದ್ದಾರೆ. ಇತ್ತೀಚೆಗಷ್ಟೇ ಸಿನಿಮಾ ತಂಡ ಅಭಿಮಾನಿಗಳಿಗೆ ಭರ್ಜರಿ ಗುಡ್ ನ್ಯೂಸ್ ನೀಡಿತ್ತು. ಸಿನಿಮಾದ ಟೀಸರ್ ಅನ್ನ ಜನವರಿ 8 ಅಂದ್ರೆ ರಾಕಿಂಗ್ ಸ್ಟಾರ್ ಯಶ್ ಅವರರ ಜನ್ಮದಿನದಂದೇ ಟೀಸರ್ ರಿಲೀಸ್ ಮಾಡೋದಾಗಿ ನಿರ್ದೇಶಕ ಪ್ರಸಾಂತ್ ನೀಲ್ ಅವರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಅಷ್ಟೇ ಅಲ್ಲ ಚಿತ್ರದ ಹೊಸ ಪೋಸ್ಟರ್ ಸಹ ರಿಲೀಸ್ ಶೇರ್ ಮಾಡಿದ್ದರುಯ. ಈ ಮೂಲಕ ಯಶ್ ಅಭಿಮಾನಿಗಳ ಹಾರ್ಟ್ ಬೀಟ್ ಹೆಚ್ಚಿಸಿದ್ದಾರೆ.
ಸೋಲು ಒಪ್ಪೋ ಮಾತೇ ಇಲ್ಲ : ಚುನಾವಣಾ ಫಲಿತಾಂಶದ ವಿರುದ್ಧ ಹೋರಾಟ ಮುಂದುವರೆಸಿದ ಟ್ರಂಪ್..!
ಅಂದ್ಹಾಗೆ ಸುಮಾರು 2 ವರ್ಷಗಳ ಕಾಲ ಶೂಟಿಂಗ್ ನಡೆಸಿರುವ ಸಿನಿಮಾತಂಡ ಇದೀಗ ಯಶಸ್ವಿಯಾಗಿ ಚಿತ್ರೀಕರಣವನ್ನ ಮುಗಿಸಿದೆ. ಕ್ಲೈಮಾಕ್ಸ್ ಚಿತ್ರೀಕರಣ ಮುಗಿಸಿರುವ ಸಿನಿಮಾ ತಂಡ ಕಕುಂಬಳ ಕಾಯಿ ಹೊಡೆದಿದೆ. ಈ ವಿಚಾರವನ್ನ ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದೆ. ಎಲ್ಲಾ ಅಂದುಕೊಂಡಂತೆ ಆಗಿದಿದ್ದರೆ ಇಷ್ಟೊತ್ತಿಗಾಗಲೇ ಸಿನಿಮಾ ರಿಲೀಸ್ ಆಗಿ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಬೇಕಾಗಿತ್ತು. ಆದ್ರೆ ಕೊರೊನಾ ಹಾವಳಿ ಲಾಕ್ ಡೌನ್ ನಿಂದಾಗಿ ಶೂಟಿಂಗ್ ತಡವಾಯಿತು. ಇತ್ತ ಸಿನಿಮಾದಲ್ಲಿ ಅತ್ಯಂತ ಕುತೂಹಲಕಾರಿ ಪಾತ್ರವಾದ ಅಧೀರ ಪಾತ್ರಧಾರಿ ಸಂಜುಬಾಬಾ ಸಹ ಅನಾರೋಗ್ಯದಿಂದ ಆಸ್ಪತ್ರೆ ಸೇರಬೇಕಾಗಿತ್ತು. ಬಳಿಕ ಗುಣಮುಖರಾದ ನಂತರ ಶೂಟಿಂಗ್ ಸೆಟ್ ಗೆ ಮರಳಿದ್ದರು. ಇದೀಗ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳಷ್ಟೇ ಬಾಕಿಯಿದೆ.
ಅಂದ್ಹಾಗೆ ಕೆಜೆಎಫ್ ಚಾಪ್ಟರ್ 1 ರಲ್ಲಿ ಪಾಪಿಗಳ ಸಾಮ್ರಾಜ್ಯಕ್ಕೆ ನುಗ್ಗಿದ್ದ ರಾಖಿ ಭಾಯ್ ಗರುಡನ ಸಂಹಾರ ಮಾಡಿದ್ದ ಇಲ್ಲಿಗೆ ಸಿನಿಮಾ ಅಂತ್ಯವಾಗಿತ್ತು. ಆದ್ರೆ ಅಸಲಿ ಕಥೆ ಶುರುವಾಗೋದೆ ಕೆಜೆಎಫ್ ಚಾಪ್ಟರ್ 2 ನಲ್ಲಿ. ಚಾಪ್ಟರ್ 2 ನಲ್ಲಿ ರಾಖಿ ಭಾಯ್ ಹಾಗೂ ಅತಿ ಭಯಂಕರ ಅಧೀರ ಮುಖಾಮುಖಿಯಾಗಲಿದ್ದಾರೆ. ಅಧೀರನ ವಿರುದ್ಧ ರಾಖಿ ಭಾಯ್ ಹೋರಾಡಬೇಕಿದೆ. ಇವರಿಬ್ಬರಿನ ನಡುವಿನ ರೋಚಕ ಫೈಟ್ ಸೀನ್ ಆಕ್ಷನ್ ಸಿನಿಮಾ ಕಥೆ ಹೇಗಿರಲಿದೆ ಎಂಬ ಕ್ಯೂರಿಯಾಸಿಟಿ ಅಭಿಮಾನಿಗಳಲ್ಲಿ ಇದೆ. ಇನ್ನೂ ಸಿನಿಮಾ ಯಾವಾಗ ರಿಲೀಸ್ ಆಗಲಿದೆ ಅಂತ ಕುತೂಹಲದಿಂದ ಕನ್ನಡ ಅಷ್ಟೇ ಅಲ್ಲ ಪರಭಾಷೆಯ ಸಿನಿಪ್ರಿಯರು ಸಹ ಕಾಯುತ್ತಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel