ನವದೆಹಲಿ: ಏಪ್ರಿಲ್ ನಲ್ಲಿ ರಾಜ್ಯಸಭೆಯ 55 ಸ್ಥಾನಗಳು ಖಾಲಿಯಾಗಲಿದ್ದು, ಅವುಗಳ ಭರ್ತಿಗೆ ಮಾರ್ಚ್ 26ರಂದು ಚುನಾವಣೆ ನಡೆಸಲಾಗುವುದು ಎಂದು ಚುನಾವಣಾ ಆಯೋಗ ಘೋಷಿಸಿದೆ. ಹದಿನೇಳು ರಾಜ್ಯಗಳನ್ನು ಪ್ರತಿನಿಧಿಸುವ ಈ ಸ್ಥಾನಗಳು ಏಪ್ರಿಲ್ ನ ವಿವಿಧ ದಿನಾಂಕಗಳಲ್ಲಿ ಖಾಲಿ ಆಗಲಿವೆ. ಈ ಚುನಾವಣೆಗೆ ಸಂಬಂಧಿಸಿದ ಅಧಿಸೂಚನೆಯನ್ನು ಮಾರ್ಚ್ 6ರಂದು ಪ್ರಕಟಿಸಲಾಗುವುದು. ನಾಮಪತ್ರ ಸಲ್ಲಿಕೆಗೆ ಮಾರ್ಚ್ 13 ಕೊನೇ ದಿನವಾಗಿ ಇರಲಿದೆ. ಅದೇ ರೀತಿ ಮತದಾನ ಮಾರ್ಚ್ 26ರಂದು ನಡೆಯಲಿದ್ದು ಅಂದೇ ಮತದಾನ ಮುಗಿದು ಒಂದು ಗಂಟೆಯ ನಂತರದಲ್ಲಿ ಮತ ಎಣಿಕೆ ಕಾರ್ಯ ನಡೆದು ಫಲಿತಾಂಶ ಪ್ರಕಟವಾಗಲಿದೆ ಎಂದು ಆಯೋಗ ತಿಳಿಸಿದೆ.
ರಾಜ್ಯಸಭೆಯಲ್ಲಿ ಅವಧಿಪೂರ್ಣ ಗೊಳಿಸಿ ನಿವೃತ್ತರಾಗುತ್ತಿರುವವರ ಪೈಕಿ ಎನ್ ಸಿಪಿ ನಾಯಕ ಶರದ್ ಪವಾರ್, ಕೇಂದ್ರ ಸಚಿವ ರಾಮದಾಸ್ ಅಠವಳೆ, ಕಾಂಗ್ರೆಸ್ ನ ಹಿರಿಯ ನೇತಾರ ಮೋತಿಲಾಲ್ ವೋರಾ, ಮಾಜಿ ಕೇಂದ್ರ ಸಚಿವ, ಬಿಜೆಪಿ ವಿಜಯ್ ಗೋಯೆಲ್ ಪ್ರಮುಖರಾಗಿದ್ದಾರೆ.
ರುಚಿಯಾದ ಮೈಸೂರು ಬೋಂಡಾ
ರುಚಿಯಾದ ಮೈಸೂರು ಬೋಂಡಾ ಬೇಕಾಗುವ ಸಾಮಗ್ರಿಗಳು 1 ಕಪ್ ಮೈದಾ ಹಿಟ್ಟು ಅಥವಾ ಗೋಧಿ ಹಿಟ್ಟು 1/4 ಕಪ್ ಅಕ್ಕಿ ಹಿಟ್ಟು (ಬೋಂಡಾವನ್ನು ಗರಿಗರಿಯಾಗಿಸಲು) 1/2 ಚಮಚ...