ವಾಹನಗಳ ಮೇಲೆ ದಾಳಿ ಮಾಡಿದ ಗಜಪಡೆ – 2 ಕಾರು ಜಖಂ…
ಆನೆಗಳು ಹಿಂಡು ದಾಳಿ ಮಾಡಿ ಕಾರುಗಳನ್ನ ಜಖಂ ಗೊಳಿಸಿರುವ ಘಟನೆ ಚಾಮರಾಜನಗರ-ತಮಿಳುನಾಡು ಗಡಿಭಾಗ ಆಸನೂರು ಸಮೀಪ ಶನಿವಾರ ಸಂಜೆ ನಡೆದಿದೆ.
ಬೆಂಗಳೂರು-ದಿಂಡಿಗಲ್ ರಾಷ್ಟೀಯ ಹೆದ್ದಾರಿ ಹಾದುಹೋಗುವ ಮಾರ್ಗದಲ್ಲಿ ದಿಢೀರ್ ರಸ್ತೆ ಮಧ್ಯೆ ಬಂದ ಎರಡು ಆನೆಗಳು ಎದುರಿಗೆ ಬಂದ ವಾಹನಗಳ ಮೇಲೆ ದಾಳಿ ಮಾಡಲು ಮುಂದಾಗಿವೆ. ಪೊಲೀಸ್ ಜೀಪೊಂದು ದಾಳಿಯಿಂದ ತಪ್ಪಿಸಿಕೊಂಡರೆ, ಅದರ ಹಿಂದಿದ್ದ ಎರಡು ಕಾರುಗಳು ಜಖಂಗೊಂಡಿವೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಘಟನೆಯಿಂದ ಅರ್ಧತಾಸಿಗೂ ಹೆಚ್ಚು ಕಾಲ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. ಬೈಕ್ ಹಾಗು ಇತರೆ ವಾಹನ ಸವಾರರು ಕೆಲಕಾಲ ಆತಂಕಕ್ಕೆ ಒಳಗಾಗಿದ್ದರು. ಅರಣ್ಯ ಇಲಾಖೆ ಸಿಬ್ಬಂದಿ ಆನೆಗಳನ್ನು ಕಾಡಿಗಟ್ಟಿದ ಬಳಿಕ ಸಂಚಾರ ಆರಂಭವಾಗಿದೆ.








