ಕಾಡಿನಿಂದ ನಾಡಿಗೆ ಬಂದ ಗಜರಾಜ ರಂಪಾಟ Elephant mysore saaksha tv
ಮೈಸೂರು: ಕಾಡಿನಿಂದ ನಾಡಿಗೆ ಬಂದ ಆನೆಯೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಆಕ್ರೋಶ ಹೊರಹಾಕಿದೆ.
ಹುಣಸೂರು-ಎಚ್.ಡಿ ರಸ್ತೆಯಲ್ಲಿರುವ ಗುರುಪುರ ಟಿಬೆಟ್ ಕ್ಯಾಂಪ್ ರಸ್ತೆಗೆ ನಾಗರಹೊಳೆ ಅರಣ್ಯದಿಂದ ಬಂದ ಕಾಡಾನೆಯೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ.
ಡಿಕ್ಕಿ ಹೊಡೆದ ರಭಸಕ್ಕೆ ವಿದ್ಯುತ್ ಕಂಬದಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಅಲ್ಲದೇ, ಜನರ ಮೇಲೂ ದಾಳಿ ಮಾಡಲು ಯತ್ನಿಸಿದೆ.
ಸಾರ್ವಜನಿಕರು ಆನೆಯ ರಂಪಾಟವನ್ನು ಅರಣ್ಯ ಇಲಾಖೆಗೆ ತಿಳಿಸಿದ್ದಾರೆ.
ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಆನೆಯನ್ನ ಕಾಡಿಗೆ ಅಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.









