ಅಮೆರಿಕಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ ಟ್ರಂಪ್..!

1 min read

ಅಮೆರಿಕಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ ಟ್ರಂಪ್..!

ಅಮೆರಿಕ: ಜೋ ಬಿಡೆನ್ ಅವರು ಜನವರಿ 20ರಂದು‌ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಇದರ ನಡುವೆಯೇ ನಿರ್ಗಮಿತ ಅಧ್ಯಕ್ಷ  ಡೊನಾಲ್ಡ್ ಟ್ರಂಪ್ ಅವರು ಇದೀಗ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದಾರೆ. ಜನವರಿ 24ರ ವರೆಗೆ ವಾಷಿಂಗ್ಟನ್‌ ಡಿ.ಸಿಯಲ್ಲಿ ತುರ್ತು ಪರಿಸ್ಥಿತಿ ಹೇರಲಾಗಿದೆ. ಜೋ ಬಿಡೆನ್ ಅಧಿಕಾರ ಸ್ವೀಕಾರದ ವೇಳೆ ಟ್ರಂಪ್‌ ಬೆಂಬಲಿಗರಿಂದ ಭಾರೀ ಹಿಂಸಾಚಾರ ನಡೆಯುವ ಸಾಧ್ಯತೆ ಇರುವುದರಿಂದ ಎರಡು ವಾರಗಳ ಕಾಲ ತುರ್ತು ಪರಿಸ್ಥಿತಿ ಘೋಷಣೆ ಮಾಡಿದೆ.

ಅಮೆರಿಕಾ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ದೋಷಾರೋಪಣೆ ಇಲ್ಲ.

ಇನ್ನು ವಾಷಿಂಗ್ಟನ್‌ನ ತುರ್ತು ಪರಿಸ್ಥಿತಿ ವೇಳೆ ಜನರಿಗೆ ತೊಂದರೆಯಾಗದಂತೆ, ಆಸ್ತಿಗಳಿಗೆ ಹಾನಿಯಾಗದಂತೆ ನೋಡಿಕೊಳ್ಳಲು ಆಂತರಿಕ ಭದ್ರತಾ ವಿಭಾಗ ಹಾಗೂ ಫೆಡರಲ್‌ ಎಮರ್ಜೆನ್ಸಿ ಮ್ಯಾನೇಜ್‌ಮೆಂಟ್‌ ಏಜೆನ್ಸಿಗೆ ಸೂಚನೆ ನೀಡಲಾಗಿದೆ. ಜೋ ಬೈಡೆನ್ ಅಧಿಕಾರ ಸ್ವೀಕಾರದ ವೇಳೆ ಭದ್ರತಾ ದೃಷ್ಟಿಯಿಂದ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ.

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd