ಉದಯೋನ್ಮುಖ ತಂಡಗಳ ಟಿ20 ಏಷ್ಯಾಕಪ್ ಟೂರ್ನಿಯ ವೇಳಾಪಟ್ಟಿ ಪ್ರಕಟವಾಗಿದೆ. ಒಮಾನ್ ನಲ್ಲಿ ನಡೆಯಲಿರುವ ಈ ಟೂರ್ನಿಯು ಅಕ್ಟೋಬರ್ 18 ರಿಂದ ಆರಂಭವಾಗಲಿದೆ.
ಫೈನಲ್ ಪಂದ್ಯವು ಅ. 27ರಂದು ನಡೆಯಲಿದೆ. ಈ ಬಾರಿಯ ಟೂರ್ನಿಯಲ್ಲಿ ಒಟ್ಟು 8 ತಂಡಗಳು ಭಾಗವಹಿಸಲಿವೆ. ಈ ಎಂಟು ತಂಡಗಳನ್ನು ಎರಡು ಗ್ರೂಪ್ ಗಳಲ್ಲಿ ವಿಂಗಡಿಸಲಾಗಿದ್ದು, ಅದರಂತೆ ಮೊದಲ ಸುತ್ತಿನಲ್ಲಿ ಗುಂಪುಗಳಲ್ಲಿನ ತಂಡಗಳ ನಡುವೆ ಪೈಪೋಟಿ ನಡೆಯಲಿದೆ.
ಎ ಗುಂಪಿನಲ್ಲಿ ಶ್ರೀಲಂಕಾ ಎ, ಬಾಂಗ್ಲಾದೇಶ್ ಎ, ಅಫ್ಘಾನಿಸ್ತಾನ್ ಎ, ಹಾಂಗ್ ಕಾಂಗ್ ಎ ತಂಡಗಳು ಸ್ಥಾನ ಪಡೆದಿವೆ. ಇನ್ನು ಗ್ರೂಪ್ ಬಿನಲ್ಲಿ ಭಾರತ ಎ, ಪಾಕಿಸ್ತಾನ್ ಎ, ಯುಎಇ ಎ, ಒಮಾನ್ ಎ ತಂಡಗಳು ಸ್ಥಾನ ಪಡೆದಿವೆ. ಎಮರ್ಜಿಂಗ್ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ್ ತಂಡಗಳು ಗುಂಪು ಹಂತದಲ್ಲಿ ಮುಖಾಮುಖಿಯಾಗಲಿವೆ. ಅಕ್ಟೋಬರ್ 19 ರಂದು ಭಾರತ ತಂಡವು ಬದ್ಧ ವೈರಿಯೊಂದಿಗೆ ಸೆಣಸಾಟ ನಡೆಸಲಿದೆ.








