ಹೊಸ ತಂಡ ಖರೀದಿಗೆ ಶಾರೂಕ್, ಮುಂಬೈ ಇಂಡಿಯನ್ಸ್ ಆಸಕ್ತಿ
ಎಮಿರೇಟ್ಸ್ ಕ್ರಿಕೆಟ್ ಮಂಡಳಿಯು ಹೊಸದಾಗಿ ಪ್ರಾರಂಭಿಸಿರುವ ಟಿ20 ಲೀಗ್ನಲ್ಲಿ ಕೆಕೆಆರ್ ಸಹ ಮಾಲೀಕರಾದ ನಟ ಶಾರೂಖ್ ಖಾನ್ ತಂಡ ಖರೀದಿಸುವ ಚಿಂತನೆಯಲ್ಲಿದ್ದಾರಂತೆ. ಈ ಕುರಿತು ಎಮಿರೇಟ್ಸ್ ಕ್ರಿಕೆಟ್ ಮಂಡಳಿ ಅಧಿಕಾರಿಗಳ ಜೊತೆ ಶಾರೂಕ್ ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
ಕೇವಲ ಶಾರೂಕ್ ಮಾತ್ರವಲ್ಲೇ ಐದು ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ಕೂಡ ಟಿ20 ಲೀಗ್ನಲ್ಲಿ ತಂಡಗಳನ್ನು ಖರೀದಿಸಲು ಆಸಕ್ತಿ ಹೊಂದಿದೆ ಎಂದು ವರದಿಯಾಗಿದೆ.
ಇದಲ್ಲದೇ ನಾಲ್ಕು ಬಾರಿ ಐಪಿಎಲ್ ಚಾಂಪಿಯನ್ ಆಗಿರುವ ಸಿಎಸ್ ಕೆ ಆರಂಭದಲ್ಲಿ ಆಸಕ್ತಿ ತೋರಿತ್ತಾದರೂ ಇತ್ತೀಚೆಗಷ್ಟೇ ಹಿಂದೆ ಸರಿದಿದ್ದಾರೆ ಎಂದು ತಿಳಿದುಬಂದಿದೆ.
ಕೇವಲ ಐಪಿಎಲ್ ಮಾತ್ರವಲ್ಲದೇ ಬಿಗ್ ಬ್ಯಾಷ್ ಲೀಗ್ ನ ಸಿಡ್ನಿ ಸಿಕ್ಸರ್ಸ್ ತಂಡ ಕೂಡ ಎಮಿರೇಟ್ಸ್ ಕ್ರಿಕೆಟ್ ಲೀಗ್ ನಲ್ಲಿ ತಂಡ ಖರೀಸುವ ಪ್ಲಾನ್ ನಲ್ಲಿದೆಯಂತೆ.
ಆಗಸ್ಟ್ನಲ್ಲಿ, ಎಮಿರೇಟ್ಸ್ ಕ್ರಿಕೆಟ್ ಮಂಡಳಿಯು ಪ್ರೀಮಿಯರ್ ಲೀಗ್ ಟಿ20 ಹೆಸರಿನಲ್ಲಿ ಕ್ರಿಕೆಟ್ ಲೀಗ್ ಅನ್ನು ರಿಜಿಸ್ಟರ್ ಮಾಡಿದೆ. ಇದಕ್ಕ ಲೋಗೋ ಯುಎಇಯ ರಾಷ್ಟ್ರೀಯ ಚಿಹ್ನೆಯಾದ ಫಾಲ್ಕನ್ನ ಸಂಕೇತವಾಗಿದೆ.
ಇದು ಪ್ರತಿ ವರ್ಷ ಜನವರಿ-ಫೆಬ್ರವರಿಯಲ್ಲಿ ಪಂದ್ಯಾವಳಿಯನ್ನು ನಡೆಸಲು ಯೋಜಿಸಿದೆ. ಒಟ್ಟು ಆರು ತಂಡಗಳು ಇರುತ್ತವೆ.