ಬೆಳ್ಳಂಬೆಳಿಗ್ಗೆ ಎಲ್ ಟಿಟಿ ಕಮಾಂಡರ್ ನನ್ನು ಭೇಟೆಯಾಡಿದ ಭದ್ರತಾ ಪಡೆ
ಜಮ್ಮು-ಕಾಶ್ಮೀರ : ಶನಿವಾರ ಬೆಳ್ಳಂ ಬೆಳಿಗ್ಗೆಯಿಂದ ಭದ್ರತಾ ಪಡೆಗಳು ಮತ್ತು ಉಗ್ರರ ಮಧ್ಯೆ ಗುಂಡಿ ಚಕಮಕಿ ಪ್ರಾರಂಭವಾಗಿದ್ದು, ಓರ್ವ ಉಗ್ರಗ್ರಾಮಿಯನ್ನ ಭದ್ರತಾ ಪಡೆಗಳು ಹೊಡೆದುರುಳಿಸಿದ್ದಾರೆ.
ದಕ್ಷಿನ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಸಿರ್ಹಾಮಾ ಪ್ರದೇಶದಲ್ಲಿ ಜಮ್ಮು ಕಾಶ್ಮೀರ್ ಪೊಲೀಸ್, ರಾಷ್ಟ್ರೀಯ ರೈಫಲ್ಸ್ ಮತ್ತು ಸಿಆರ್ಪಿಎಫ್ನ ಜಂಟಿ ತಂಡವು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ. ಕಾರ್ಯಾಚರಣೆಯಲ್ಲಿ ಲಷ್ಕರ್ ಎ ತೋಯ್ಬಾ ಉಗ್ರಗ್ರಾಮಿ ಸಂಘಟನೆಯ ಕಮಾಡಂರ್ ನ್ನು ಹತ್ಯೆ ಮಾಡಿಲಾಗಿದೆ ಎಂದು ಕಾಶ್ಮೀರ ವಲಯ ಪೊಲೀಸರು ಟ್ವೀಟ್ ಮಾಡಿದ್ದಾರೆ.
https://twitter.com/KashmirPolice/status/1512616888144396289?ref_src=twsrc%5Etfw%7Ctwcamp%5Etweetembed%7Ctwterm%5E1512616888144396289%7Ctwgr%5E%7Ctwcon%5Es1_&ref_url=https%3A%2F%2Fwww.etvbharat.com%2Fkannada%2Fkarnataka%2Fbharat%2Fencounter-in-anantnag-area-at-jammu-kashmir%2Fka20220409063116824
ಭದ್ರತಾ ಪಡೆಗಳು ಶಂಕಿತರು ಇರುವ ಸ್ಥಳವನ್ನು ಸಮೀಪಿಸಿದ ತಕ್ಷಣ, ಉಗ್ರರು ಅವರ ಮೇಲೆ ಗುಂಡು ಹಾರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳೂ ಗುಂಡು ಹಾರಿಸಿವೆ.
ಮುನ್ನೆಚ್ಚರಿಕೆ ಕ್ರಮವಾಗಿ ಅನಂತ್ನಾಗ್ ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಅಂತರ್ಜಾಲವನ್ನು ಕಡಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕುಲ್ಗಾಮ್ ಜಿಲ್ಲೆಯ ಚಾಕಿಸಮದ್, ಡಿಎಚ್ ಪೋರಾ ಪ್ರದೇಶದಲ್ಲಿ ಮತ್ತೊಂದು ಎನ್ಕೌಂಟರ್ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.