ಇಬ್ಬರು ಉಗ್ರರನ್ನು ಹೊಡೆದುರಳಿಸಿದ ಭದ್ರತಾ ಪಡೆ
ಜಮ್ಮು-ಕಾಶ್ಮೀರ: ಇಂದು ನಸಕಿನ ಜಾವ ಭದ್ರತಾ ಪಡೆಗಳು ಉಗ್ರರನ್ನು ಭೇಟೆಯಾಡಿದ್ದು, ಈ ಭೇಟೆಯಲ್ಲಿ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ್ದಾರೆ.
ಹಳೆ ಶ್ರೀನಗರದ ರೈನಾವಾರಿ ಪ್ರದಶದಲ್ಲಿ ಈ ಕಾರ್ಯಾಚಾರಣೆ ನಡೆದಿದ್ದು, ಹತ್ಯೆಯಾದವರ ಪೈಕಿ ಓರ್ವ ನಿಷೇಧಿತ ಭಯೋತ್ಪಾದಕ ಸಂಘಟನೆ ಎಲ್‌ಇಟಿ ಸದಸ್ಯನಾಗಿದ್ದು, ಮತ್ತೊಬ್ಬ ಉಗ್ರ ಮಾಧ್ಯಮದ ಗುರುತಿನ ಚೀಟಿ (ಐಡಿ)ಯನ್ನು ದುರ್ಬಳಕೆ ಮಾಡಿಕೊಂಡಿದ್ದವನನ್ನು ಸಂಹಾರ ಮಾಡಿದ್ದಾರೆ. ಇದು ಮಾಧ್ಯಮದ ದುರ್ಬಳಕೆಯ ಸ್ಪಷ್ಟ ಪ್ರಕರಣ ಸೂಚಿಸುತ್ತದೆ ಎಂದು ಕಾಶ್ಮೀರ ವಲಯ ಪೊಲೀಸರು ಟ್ವೀಟ್ ಮಾಡಿದ್ದಾರೆ.
#SrinagarEncounterUpdate: 02 #terrorists killed. #Incriminating materials including #arms & ammunition recovered. Search going on. Further details shall follow. @JmuKmrPolice https://t.co/GnlEfXEXM1
— Kashmir Zone Police (@KashmirPolice) March 29, 2022
ಇನ್ನೂಎನ್‌ಕೌಂಟರ್ ಸ್ಥಳದಲ್ಲಿ ಶಸ್ತ್ರಾಸ್ತ್ರಗಳು ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಪ್ರದೇಶದಲ್ಲಿ ಕಾರ್ಡನ್ ಮತ್ತು ಶೋಧ ಕಾರ್ಯಾಚರಣೆ ಮುಂದುವರೆದಿದೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.
One of the killed categorised local #terrorists of proscribed #terror outfit LeT was carrying Identity Card (ID) of media. It indicates a clear case of misuse of media: IGP Kashmir@JmuKmrPolice pic.twitter.com/av3cnyRA8f
— Kashmir Zone Police (@KashmirPolice) March 29, 2022
ಈ ಮೊದಲು ಇದೇ ತಿಂಗಳು ಎರಡನೇ ವಾರದಲ್ಲಿ ಪುಲ್ವಾಮಾ ಜಿಲ್ಲೆಯ ನೈನಾ ಗ್ರಾಮದಲ್ಲಿ ಮೊದಲ ಎನ್‌ಕೌಂಟರ್ ನಡೆದಿತ್ತು. ಗುಂಡಿನ ಚಕಮಕಿಯಲ್ಲಿ ಇಬ್ಬರು ಎಲ್‌ಇಟಿ ಉಗ್ರರನ್ನು ಹೊಡೆದುರುಳಿಸಿದರೆ ಮತ್ತೊಂದು ಘಟನೆಯಲ್ಲಿ ಪಾಕಿಸ್ತಾನಿ ನಿವಾಸಿಯಾಗಿದ್ದ ಮತ್ತೊಬ್ಬ ಉಗ್ರನನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು.