Eng Vs Ind 1st ODI : ಏಕದಿನ ಸಮರಕ್ಕೆ ಟೀಂ ಇಂಡಿಯಾ ಸಜ್ಜು..!
ಇಂದಿನಿಂದ ಟೀಂ ಇಂಡಿಯಾ ಮತ್ತು ಇಂಗ್ಲೆಂಡ್ ನಡುವೆ ಏಕದಿನ ಕ್ರಿಕೆಟ್ ಸಮರ ಶುರುವಾಗಲಿದೆ.
ಸತತ ಚುಟುಕು ಕ್ರಿಕೆಟ್ ಮತ್ತು ಆಗಾಗ ಟೆಸ್ಟ್ ಕ್ರಿಕೆಟ್ ಆಡಿದ್ದ ಟೀಂ ಇಂಡಿಯಾ ಇದೀಗ ಹಲವು ದಿನಗಳ ಬಳಿಕ ಏಕದಿನ ಪಂದ್ಯವನ್ನಾಡಲು ಸಜ್ಜಾಗುತ್ತಿದೆ.
ರೋಹಿತ್ ಶರ್ಮಾ ಟೀಂ ಇಂಡಿಯಾದ ನಾಯಕತ್ವ ವಹಿಸಿಕೊಂಡ ಬಳಿಕ ವಿದೇಶದಲ್ಲಿ ಆಡುತ್ತಿರುವ ಮೊದಲ ಏಕದಿನ ಸರಣಿ ಇದಾಗಿದೆ.
ಹೀಗಾಗಿ ರೋಹಿತ್ ಕ್ಯಾಪ್ಟನ್ಸಿ ಬಗ್ಗೆ ಎಲ್ಲರಲ್ಲೂ ಕುತೂಹಲವಿದೆ.
ಟೀಂ ಇಂಡಿಯಾಗೆ ಗಬ್ಬರ್ ಶಿಖರ್ ಧವನ್ ವಾಪಸ್ ಆಗಿರುವುದರಿಂದ ನಾಯಕ ರೋಹಿತ್ ಶರ್ಮಾ ಜೊತೆಗೆ ಇನ್ನಿಂಗ್ಸ್ ಆರಂಭಿಸೋದು ಪಕ್ಕಾ ಆಗಿದೆ. ಧವನ್‌ಗೆ ಇದು ಕಂ ಬ್ಯಾಕ್ ಮ್ಯಾಚ್.
ವಿರಾಟ್ ಕೊಹ್ಲಿ ತಂಡದ ಬ್ಯಾಟಿಂಗ್ ಬೆನ್ನೆಲುಬಾಗಿದ್ದರೂ ಸದ್ಯ ಅವರು ಫಾರ್ಮ್ ಕೊರತೆ ಎದುರಿಸುತ್ತಿದ್ದಾರೆ. ಜೊತೆಗೆ ಅವರು ಇಂಜೂರಿಯಾಗಿದ್ದಾರೆ ಅನ್ನುವ ಮಾತುಗಳು ಕೂಡ ಕೇಳಿಬಂದಿದೆ.
ಹೀಗಾಗಿ ಅವರು ಇಂದಿನ ಪಂದ್ಯವನ್ನು ಮಿಸ್ ಮಾಡಿಕೊಳ್ಳಲಿದ್ದಾರೆ. ಮಿಡಲ್ ಆರ್ಡರ್ ನಲ್ಲಿ ನಾಲ್ಕನೇ ಸ್ಥಾನಕ್ಕೆ ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್ ನಡುವೆ ಪೈಪೋಟಿ ಆರಂಭವಾಗಿದೆ.
ಸದ್ಯ ಫಾರ್ಮ್ ನೋಡಿದ್ರೆ ಸೂರ್ಯಕುಮಾರ್ ಯಾದವ್ ಗೆ ರೋಹಿತ್ ಶರ್ಮಾ ಮಣೆಹಾಕಬಹುದು. ವಿಕೆಟ್ ಕೀಪರ್ ಆಗಿ ರಿಷಬ್ ಪಂತ್, ಐದನೇ ಸ್ಥಾನದಲ್ಲಿ ಹಾರ್ದಿಕ್ ಪಾಂಡ್ಯ ಕಣಕ್ಕಿಳಿದರೇ ನಂತರ ರವೀಂದ್ರ ಜಡೇಜಾ ಬಳಿಕ ಶರ್ದೂಲ್ ಠಾಖೂರ್ ಕಾಣಿಸಿಕೊಳ್ಳಬಹುದು. ಆಗ ಟೀಂ ಇಂಡಿಯಾಗೆ ಬೌಲಿಂಗ್ ಆಪ್ಷನ್ ಗಳು ಹೆಚ್ಚಾಗಿ ಸಿಗಲಿವೆ.

ವೇಗಿಗಳ ವಿಭಾಗದಲ್ಲಿ ಮೊಹಮ್ಮದ್ ಶಮಿ ಜೊತೆ ಕನ್ನಡಿಗ ಪ್ರಸಿಧ್ ಕೃಷ್ಣ ಬೌಲಿಂಗ್ ಆರಂಭಿಸಬಹುದು. ಮೊಹಮ್ಮದ್ ಸಿರಾಜ್ ಬಗ್ಗೆಯೂ ಚರ್ಚೆ ಇದೆ. ಯಜುವೇಂದ್ರ ಚಹಲ್ ಸ್ಪೆಷಲಿಸ್ಟ್ ಸ್ಪಿನ್ನರ್ ಆಗಿ ಕಣಕ್ಕಿಳಿಯಬಹುದು.
ಇತ್ತ ಇಂಗ್ಲೆಂಡ್ ಗೆ ಇದು ಸೇಡಿನ ಸಮರವಾಗಿದೆ. ಟಿ 20 ಸರಣಿಯಲ್ಲಿ ಸೋತ ಇಂಗ್ಲೆಂಡ್ ತಂಡ ಏಕದಿನ ಸರಣಿಯನ್ನು ಗೆಲ್ಲುವ ಲೆಕ್ಕಾಚಾರದಲ್ಲಿದೆ. ಇಯಾನ್ ಮಾರ್ಗನ್ ನಿವೃತ್ತಿ ಹೇಳಿರುವುದರಿಂದ ಜೋಸ್ ಬಟ್ಲರ್ ಹೆಗಳಿಗೆ ನಾಯಕತ್ವ ಜವಾಬ್ದಾರಿ ಹೋಗಿದೆ. ಇಂಗ್ಲೆಂಡ್ ತಂಡದಲ್ಲಿ ಬಿಗ್ ಹಿಟ್ಟರ್ ಗಳ ದಂಡೇ ಇದ್ದು, ಅವರು ಕ್ರೀಸ್ ಗೆ ಕಚ್ಚಿ ನಿಂತರೇ ಎದುರಾಳಿ ಬೌಲರ್ ಗಳು ಧೂಳಿಪಟ ಆಗೋದು ಗ್ಯಾರಂಟಿ.
ಓವಲ್ ಪಿಚ್ ಬೌಲರ್ ಸ್ಪರ್ಧಾತ್ಮಕ ಪಿಚ್ ಅನ್ನುವ ಬಗ್ಗೆ ಸಂಶಯವಿಲ್ಲ. ಆರಂಭದಲ್ಲಿ ಸ್ವಿಂಗ್ ಬೌಲರ್‌ಗಳಿಗೆ ಕೊಂಚ ಹೆಚ್ಚಿನ ನೆರವು ಸಿಗಲಿದೆ. ಹೀಗಾಗಿ ಹೊಸ ಚೆಂಡಿನಲ್ಲಿ ಬೌಲರ್‌ಗಳನ್ನು ಎದುರಿಸುವಾಗ ಹೆಚ್ಚು ಜಾಗೃತೆಯಾಗಿರಬೇಕು.
ಟೀಮ್ ಇಂಡಿಯಾ ಸಂಭಾವ್ಯ XI
ರೋಹಿತ್ ಶರ್ಮಾ, ಶಿಖರ್ ಧವನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯಾ, ರಿಷಬ್ ಪಂತ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಪ್ರಸಿಧ್ ಕೃಷ್ಣ, ಶಾರ್ಧೂಲ್ ಥಾಕೂರ್, ಯಜುವೇಂದ್ರ ಚಹಲ್
ಇಂಗ್ಲೆಂಡ್ ಸಂಭಾವ್ಯ XI
ಜೇಸನ್ ರಾಯ್, ಜಾನಿ ಬೇರ್ ಸ್ಟೋವ್, ಹ್ಯಾರಿ ಬ್ರೂಕ್, ಜೋಸ್ ಬಟ್ಲರ್, ಲಿಯಂ ಲಿವಿಂಗ್ ಸ್ಟೋನ್, ಬೆನ್ ಸ್ಟೋಕ್ಸ್, ಮೊಯಿನ್ ಅಲಿ, ಸ್ಯಾಮ್ ಕರ್ರನ್, ರೀಸ್ ಟಾಪ್ಲೆ, ಕ್ರೆಗ್ ಓವರ್ಟನ್, ಮ್ಯಾಟ್ ಪರ್ಕಿನ್ಸನ್