ENG vs IND : ಕಪಿಲ್ ದಾಖಲೆ ಮುರಿದ ಬುಮ್ರಾ..!
ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಅಂತಿಮ ಟೆಸ್ಟ್ ನಲ್ಲಿ ಸ್ಟಾಂಡಿಂಗ್ ಕ್ಯಾಪ್ಟನ್ ಜಸ್ಪ್ರೀತ್ ಬುಮ್ರಾ ಹೊಸ ದಾಖಲೆ ನಿರ್ಮಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸಿರೀಸ್ ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್ ಎಂಬ ದಾಖಲೆಯನ್ನ ಬುಮ್ರಾ ಸೃಷ್ಟಿಸಿದ್ದಾರೆ.
ಈ ಸೀರಿಸ್ ನಲ್ಲಿ ಬುಮ್ರಾ 23 ವಿಕೆಟ್ ಗಳನ್ನು ಪಡೆದುಕೊಂಡಿದ್ದಾರೆ.

ಇದಕ್ಕೂ ಮೊದಲು 1981 – 82 ರ ಇಂಗ್ಲೆಂಡ್ ಸಿರೀಸ್ ನಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್ ದೇವ್ ಇಂಗ್ಲೆಂಡ್ ವಿರುದ್ಧ 22 ವಿಕೆಟ್ ಗಳನ್ನು ಪಡೆದುಕೊಂಡಿದ್ದರು.
ಇದು ಇಲ್ಲಿಯವರೆಗಿನ ದಾಖಲೆಯಾಗಿತ್ತು. ಇದೀಗ ತಾಜಾ ಸಿರೀಸ್ ನಲ್ಲಿ ಜಸ್ಪ್ರಿತ್ ಬುಮ್ರಾ ಕಪಿಲ್ ದೇವ್ ದಾಖಲೆ ಮುರಿದಿದ್ದಾರೆ.
ಇನ್ನು ಇಂಗ್ಲೆಂಡ್ ವಿರುದ್ಧ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್ ಗಳ ಪಟ್ಟಿಯಲ್ಲಿ ಬುಮ್ರಾ ಮೊದಲ ಸ್ಥಾನದಲ್ಲಿದ್ದರೇ, ಕಪಿಲ್ ದೇವ್ ಎರಡನೇ ಸ್ಥಾನದಲ್ಲಿ, ಭುವನೇಶ್ವರ್ ಕುಮಾರ್ ಮೂರನೇ ಸ್ಥಾನದಲ್ಲಿದ್ದಾರೆ.