ENG vs IND: ಚರಿತ್ರೆ ಸೃಷ್ಠಿಸಿದ ಹಾರ್ದಿಕ್ ಪಾಂಡ್ಯ.. ಮೊದಲ ಭಾರತೀಯ ಆಟಗಾರ
ಮ್ಯಾಂಚೇಸ್ಟರ್ ವೇದಿಕೆಯಾಗಿ ಇಂಗ್ಲೆಂಡ್ ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಐದು ವಿಕೆಟ್ ಗಳಿಂದ ಗೆಲುವು ಸಾಧಿಸಿದೆ.
ಇದರೊಂದಿಗೆ ಮೂರು ಪಂದ್ಯಗಳ ಏಕದಿನ ಪಂದ್ಯಗಳ ಸರಣಿಯನ್ನು ಟೀಂ ಇಂಡಿಯಾ 2 – 1 ರ ಅಂತರದೊಂದಿಗೆ ವಶಪಡಿಸಿಕೊಂಡಿದೆ.
ಈ ಗೆಲುವಿನಲ್ಲಿ ರಿಬಷ್ ಪಂತ್, ಹಾರ್ದಿಕ್ ಪಾಂಡ್ಯ ಪ್ರಮುಖ ಪಾತ್ರ ವಹಿಸಿದ್ದು.ಪಂತ್ ಶತಕ ಬಾರಿಸಿದ್ದು, ಹಾರ್ದಿಕ್ ಅರ್ಧಶತಕ ಸಿಡಿಸಿ ಮಿಂಚಿದರು.
ಬೌಲಿಂಗ್ ನಲ್ಲಿ ಕೇವಲ 24 ರನ್ ಗಳನ್ನು ನೀಡಿ ನಾಲ್ಕು ಪಡೆದ ಹಾರ್ದಿಕ್, ಬ್ಯಾಟಿಂಗ್ ನಲ್ಲಿ 71 ರನ್ ಗಳಿಸಿದರು.
ಏಕದಿನ ಕ್ರಿಕೆಟ್ ನಲ್ಲಿ ಹಾರ್ದಿಕ್ ಅವರ ಬೆಸ್ಟ್ ಫರ್ಪಾಮೆನ್ಸ್ ಆಗಿದೆ.
ಇನ್ನು ಮ್ಯಾಚ್ ನಲ್ಲಿ ಆಲ್ ರೌಂಡ್ ಪ್ರದರ್ಶನ ನೀಡಿದ ಪಾಂಡ್ಯ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ಹಾರ್ದಿಕ್ ಪಾಂಡ್ಯ ದಾಖಲೆಗಳು :
ಮೂರು ಮಾದರಿ ಕ್ರಿಕೆಟ್ ನಲ್ಲಿ ಒಟ್ಟಾರೆ ಒಂದೇ ಪಂದ್ಯದಲ್ಲಿ ನಾಲ್ಕು ವಿಕೆಟ್ ತೆಗೆದು 50 ಪ್ಲಸ್ ರನ್ ಗಳಿಸಿದ ಮೊದಲ ಭಾರತ ಕ್ರಿಕೆಟರ್
ಟೆಸ್ಟ್ 52 ರನ್ಸ್ ಅಂಡ್ ಐದು ವಿಕೆಟ್ – 2018
ಏಕದಿನ 71 ರನ್ಸ್ ಅಂಡ್ ನಾಲ್ಕು ವಿಕೆಟ್ 2022
ಟಿ 20 51 ರನ್ಸ್ ಅಂಡ್ 4 ವಿಕೆಟ್ 2022
ವಿಶ್ವ ಕ್ರಿಕೆಟ್ ನಲ್ಲಿ ಈ ಘಟನೆ ಸಾಧಿಸಿದ ಎರಡನೇ ಕ್ರಿಕೆಟರ್ ಹಾರ್ದಿಕ್ ಪಾಂಡ್ಯ.
ಇದಕ್ಕೂ ಮೊದಲು ಪಾಕಿಸ್ತಾನದ ಆಲ್ ರೌಂಡರ್ ಮೊಹ್ಮದ್ ಹಾಫಿಜ್ ಈ ದಾಖಲೆ ಮಾಡಿದ್ದರು.
ಇನ್ನು ಏಕದಿನ ಕ್ರಿಕೆಟ್ ನಲ್ಲಿ ಫಿಫ್ಟಿ ಪ್ಲಸ್ ರನ್ ಗಳೊಂದಿಗೆ ನಾಲ್ಕು ವಿಕೆಟ್ ತೆಗೆದ ಐದನೇ ಟೀಂ ಇಂಡಿಯಾದ ಆಟಗಾರ.
ಇದಕ್ಕೂ ಮುನ್ನಾ ಕೃಷ್ಣಮಾಚಾರಿ ಶ್ರೀಕಾಂತ್, ಸಚಿನ್ ತೆಂಡುಲ್ಕರ್, ಸೌರವ್ ಗಂಗೂಲಿ, ಯುವರಾಜ್ ಸಿಂಗ್ ಈ ಸಾಧನೆ ಮಾಡಿದ್ದರು.
ಮ್ಯಾಂಚೆಸ್ಟರ್ ನಲ್ಲಿ ಏಕದಿನ ಕ್ರಿಕೆಟ್ ನಲ್ಲಿ ಅತ್ಯುತ್ತಮ ಬೌಲಿಂಗ್ ಅಂಕಿಅಂಶಗಳನ್ನು ನಮೂದಿಸಿದ ಮೂರನೇ ಟೀಂ ಇಂಡಿಯಾದ ಹಾರ್ದಿಕ್ ಪಾಂಡ್ಯ