ENG vs IND : ಇಂಗ್ಲೆಂಡ್ ವಿರುದ್ಧ ಟೆಸ್ಟ್.. ಬೆವರಿಳಿಸುತ್ತಿರುವ ಟೀಂ ಇಂಡಿಯಾ..!!
ಇಂಗ್ಲೆಂಡ್ ವಿರುದ್ಧದ ಏಕೈಕ ಟೆಸ್ಟ್ ಪಂದ್ಯಕ್ಕೆ ಭಾರತ ಸಿದ್ಧತೆ ಆರಂಭಿಸಿದೆ.
ಇದರ ಭಾಗವಾಗಿ ಭಾರತವು ಜೂನ್ 24 ರಿಂದ 27 ರವರೆಗೆ ಲೀಸೆಸ್ಟರ್ ಶೈರ್ ನಲ್ಲಿ ನಾಲ್ಕು ದಿನಗಳ ಅಭ್ಯಾಸ ಪಂದ್ಯದಲ್ಲಿ ಕೌಂಟಿ ಕ್ಲಬ್ ವಿರುದ್ಧ ಸೆಣಸಲಿದೆ.
ಈ ಕ್ರಮದಲ್ಲಿ ಭಾರತ ತಂಡ ಲೀಸೆಸ್ಟರ್ಶೈರ್ ಗೆ ಆಗಮಿಸಿ ಅಭ್ಯಾಸ ಆರಂಭಿಸಿದೆ.
ನೆಟ್ಸ್ ನಲ್ಲಿ ಟೀಂ ಇಂಡಿಯಾ ಆಟಗಾರರು ಬೆವರು ಹರಿಸುತ್ತಿದ್ದಾರೆ.
ಲೀಸೆಸ್ಟರ್ಶೈರ್ ಕೌಂಟಿ ಕ್ಲಬ್ ಟ್ವಿಟರ್ ನಲ್ಲಿ ಟೀಂ ಇಂಡಿಯಾ ಪ್ರಾಕ್ಟೀಸ್ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಂಡಿದೆ.

ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಇಂಗ್ಲೆಂಡ್ಗೆ ಆಗಮಿಸಿದ ಬಳಿಕ ಮೊದಲ ಅಭ್ಯಾಸದಲ್ಲಿ ಪಾಲ್ಗೊಂಡಿದ್ದರು.
ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ, ರವೀಂದ್ರ ಜಡೇಜಾ, ಚೇತೇಶ್ವರ ಪೂಜಾರ ಮತ್ತು ಶಾರ್ದೂಲ್ ಠಾಕೂರ್ ಅವರ ಮೊದಲ ಬ್ಯಾಚ್ ಜೂನ್ 16 ರಂದು ಮುಂಬೈನಿಂದ ಲಂಡನ್ಗೆ ಆಗಮಿಸಿದ್ದರು.
ಆದರೆ, ಮೊದಲ ಬ್ಯಾಚ್ ಬಂದ ಒಂದು ದಿನದ ನಂತರ ನಾಯಕ ರೋಹಿತ್ ಶರ್ಮಾ ಇಂಗ್ಲೆಂಡ್ ಗೆ ಆಗಮಿಸಿದರು.
ಭಾರತ ಮತ್ತು ಇಂಗ್ಲೆಂಡ್ ನಡುವಿನ ನಿರ್ಣಾಯಕ ಟೆಸ್ಟ್ ಪಂದ್ಯ ಜುಲೈ 1 ರಿಂದ ಎಡ್ಜ್ ಬಾಸ್ಟನ್ನಲ್ಲಿ ನಡೆಯಲಿದೆ.
ಕಳೆದ ವರ್ಷ ನಡೆದ ಐದು ಟೆಸ್ಟ್ಗಳ ಸರಣಿಯ ಕೊನೆಯ ಪಂದ್ಯವನ್ನು ಕರೋನಾ ಕಾರಣ ಸ್ಥಗಿತಗೊಳಿಸಲಾಗಿತ್ತು.







