ENG vs IND : ಬುಮ್ರಾಗೆ ಟೆಸ್ಟ್ ಆಡೋದು ಸುಲಭ
ಎಡ್ಜ್‌ಬಾಸ್ಟನ್‌ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ಸ್ಟ್ಯಾಂಡ್ ಇನ್ ಕ್ಯಾಪ್ಟನ್ ಜಸ್ಪ್ರೀತ್ ಬುಮ್ರಾ ಅಬ್ಬರದ ಪ್ರದರ್ಶನ ನೀಡುತ್ತಿದ್ದಾರೆ.
ಬ್ಯಾಟಿಂಗ್ ನಲ್ಲಿ ಕೇವಲ 16 ಎಸೆತಗಳಲ್ಲಿ 31 ರನ್ ಗಳಿಸಿದ ಬುಮ್ರಾ, ಬೌಲಿಂಗ್‌ನಲ್ಲಿ 3 ವಿಕೆಟ್ ಗಳನ್ನು ಪಡೆಯುವ ಮೂಲಕ ಇಂಗ್ಲೆಂಡ್ ತಂಡದ ಎಡೆಮುರಿ ಕಟ್ಟಿದ್ದಾರೆ.
ಈ ಹಿನ್ನೆಲೆಯಲ್ಲಿ ಮಾಜಿ ಆಟಗಾರರು ಮತ್ತು ಅಭಿಮಾನಿಗಳು ಬುಮ್ರಾ ಅವರನ್ನು ಹೊಗಳುತ್ತಿದ್ದಾರೆ.
ಈ ಪಟ್ಟಿಗೆ ಟೀಂ ಇಂಡಿಯಾದ ಮಾಜಿ ವೇಗಿ ಅಜಿತ್ ಅಗರ್ಕರ್ ಕೂಡ ಸೇರಿಕೊಂಡಿದ್ದಾರೆ.

ನಾಯಕನಾಗಿ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಬುಮ್ರಾ ಅವರ ಅತ್ಯುತ್ತಮ ಪ್ರದರ್ಶನವನ್ನು ಅಗರ್ಕರ್ ಶ್ಲಾಘಿಸಿದರು.
“ಇದೇ ಸರಣಿಯಲ್ಲಿ ಲಾರ್ಡ್ಸ್ ಟೆಸ್ಟ್‌ನಲ್ಲಿ ಬುಮ್ರಾ ಮತ್ತು ಶಮಿ ಅವರ ಜೊತೆಯಾಟ ಭಾರತವನ್ನು ಗೆಲ್ಲಿಸಿತ್ತು.
ಈ ಪಂದ್ಯದಲ್ಲಿ ಸ್ಟುವರ್ಟ್ ಬ್ರಾಡ್ ಉತ್ತಮ ಬೌಲಿಂಗ್ ಮಾಡಲು ವಿಫಲರಾದರು. ಜಸ್ಪ್ರೀತ್ ಅದನ್ನು ಚೆನ್ನಾಗಿ ಉಪಯೋಗಿಸಿಕೊಂಡಿದ್ದಾರೆ.
ಈಗ ಬುಮ್ರಾಗೆ ವೈಟ್ ಬಾಲ್ ಕ್ರಿಕೆಟ್ ಗಿಂತ ಟೆಸ್ಟ್ ಕ್ರಿಕೆಟ್ ಆಡುವುದು ಸುಲಭ ಇದ್ದಂತ್ತಿದೆ ಎಂದು ಅಗರ್ಕರ್ ಹೇಳಿದರು.
ಮೊದಲ ಇನಿಂಗ್ಸ್ ನಲ್ಲಿ ಟೀ ಇಂಡಿಯಾ 416 ರನ್‌ಗಳಿಗೆ ಆಲೌಟ್ ಆಗಿದೆ.