ಬೆಂಗಳೂರು: ನಟ ಡಾಲಿ ಧನಂಜಯ್ (Daali Dhananjay) ಅವರು ವೈದ್ಯೆ ಧನ್ಯತಾ (Dhanyata) ಅವರೊಂದಿಗೆ ಇಂದು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಅರಸಿಕೆರೆ ತಾಲೂಕು ಕಾಳೇನಹಳ್ಳಿಯಲ್ಲಿರುವ ಧನಂಜಯ್ ನಿವಾಸದಲ್ಲಿ ಸರಳವಾಗಿ ಇಬ್ಬರೂ ಉಂಗುರ ತೊಡಿಸುವ ಮೂಲಕ ನಿಶ್ಚಿತಾರ್ಥ ಮಾಡಿಕೊಂಡಿದರು. ಅಲ್ಲದೇ, ಈ ವೇಳೆ ಲಗ್ನ ಪತ್ರ ಬರೆಯಿಸುವ ಶಾಸ್ತ್ರ ಕೂಡ ನಡೆಯಿತು. ಇಬ್ಬರು ಮೈಸೂರಿನಲ್ಲಿ ಫೆ.16 ರಂದು ಬಾಳಸಂಗಾತಿ ಆಗಲಿದ್ದಾರೆ.
ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಡಾಲಿ ತನ್ನ ಬಾಳಸಂಗಾತಿಯನ್ನು ಪರಿಚಯಿಸಿದ್ದರು. ಭಾವಿ ಪತ್ನಿ ಗೈನೋಕಾಲಾಜಿಸ್ಟ್ ಆಗಿರುವ ಧನ್ಯತಾ ಜೊತೆಗಿನ ಸುಂದರವಾದ ವಿಡಿಯೋ ಹಂಚಿಕೊಂಡಿದ್ದರು.
ಧನ್ಯತಾ ಮಿಡಲ್ ಕ್ಲಾಸ್ ಹುಡುಗಿ ಕಷ್ಟ ಪಟ್ಟು ಡಾಕ್ಟರ್ ಆಗಿದ್ದಾರೆ. ಅಲ್ಲದೆ ಅವರ ವರ್ಕ್ ಎಥಿಕ್ಸ್ ನನಗೆ ತುಂಬಾ ಇಷ್ಟ ಎಂದಿದ್ದರು.








