ಕಿಚ್ಚ ಸುದೀಪ್ ಗೆ ಬ್ಯಾಟ್ ಉಡುಗೊರೆಯಾಗಿ  ನೀಡಿದ  ಜೋಸ್ ಬಟ್ಲರ್

1 min read

ಕಿಚ್ಚ ಸುದೀಪ್ ಗೆ ಬ್ಯಾಟ್ ಉಡುಗೊರೆಯಾಗಿ  ನೀಡಿದ  ಜೋಸ್ ಬಟ್ಲರ್

IPL 2022  ರಾಜಸ್ಥಾನ ರಾಯಲ್ಸ್  ತಂಡದ ಬ್ಯಾಟರ್​ ಜೋಸ್​ ಬಟ್ಲರ್​  ಬ್ಯಾಟಿಂಗ್ ನಿಂದ ರನ್ ಮಳೆಯನ್ನೇ ಹರಿಸಿದ ವಿಚಾರ ನಿಮಗೆಲ್ಲ ಗೊತ್ತಿರುವುದೇ.  ತಾವು ಆಡಿರುವ ಒಟ್ಟು 15 ಪಂದ್ಯಗಳಿಂದ 718ರನ್ ​​​ಗಳಿಸಿ ಪ್ರಸಕ್ತ ಸಾಲಿನ ಆರೆಂಜ್​ ಕ್ಯಾಪ್​ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಇದರ ಮಧ್ಯೆ ಸ್ಯಾಂಡಲ್​​​ವುಡ್​​ನ  ನಟ ಕಿಚ್ಚ ಸುದೀಪ್​​​ ಅವರಿಗೆ ವಿಶೇಷ ಗಿಫ್ಟ್​ ನೀಡಿ, ಕನ್ನಡಿಗರ ಮನ ಗೆದ್ದಿದ್ದಾರೆ ಬಟ್ಲರ್

2022ರ ಐಪಿಎಲ್​​ನಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನ ಫೈನಲ್​ಗೆ ಕರೆದೊಯ್ಯುವಲ್ಲಿ ಜೋಸ್ ಬಟ್ಲರ್ ಯಶಸ್ವಿಯಾಗಿದ್ದರು.  ಐಪಿಎಲ್​​ನಲ್ಲಿ ತಾವು ಬಳಕೆ ಮಾಡಿರುವ ಬ್ಯಾಟ್​​ ಅನ್ನ ಸುದೀಪ್​​​ ಅವರಿಗೆ ಉಡುಗೊರೆಯಾಗಿ ನೀಡಿದ್ದು, ಅದರ ಮೇಲೆ ಸಹಿ ಮಾಡಿದ್ದಾರೆ.  ಇದಕ್ಕೆ ಸಂಬಂಧಿಸಿದಂತೆ ಟ್ವಿಟರ್​​ನಲ್ಲಿ ನಟ ಸುದೀಪ್​​ ವಿಡಿಯೋ ಪೋಸ್ಟ್​ ಮಾಡಿ ಖುಷಿ ಹಂಚಿಕೊಂಡಿದ್ದಾರೆ.

“ನಿಜಕ್ಕೂ ನನಗೆ ತುಂಬಾ ಅಚ್ಚರಿಯಾಯಿತು. ನಿಜಕ್ಕೂ ಇದನ್ನು ನಿರೀಕ್ಷೆ ಮಾಡಿರಲಿಲ್ಲ. ಇದನ್ನ ಸಾಧ್ಯವಾಗಿಸಿದ ನನ್ನ ಸ್ನೇಹಿತ ಕೆಸಿ ಕಾರ್ಯಪ್ಪಗೂ ಥ್ಯಾಂಕ್ಸ್ ಹೇಳುತ್ತೇನೆ. ಆದರೆ, ಈ ವಿಡಿಯೋ ವಿಶೇಷವಾಗಿ ಜೋಸ್ ಬಟ್ಲರ್ ಸಲುವಾಗಿ. ವೈಯಕ್ತಿಕವಾಗಿ ನೀವು ಸಹಿ ಮಾಡಿರುವ ಬ್ಯಾಟ್​ ನನಗೆ ನೀಡಿರುವುದಕ್ಕೆ ಥ್ಯಾಂಕ್ಸ್​ ಎಂದು ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd