ಇಂಗ್ಲೆಂಡ್ -ವೆಸ್ಟ್ ಇಂಡೀಸ್ ಫಸ್ಟ್ ಟೆಸ್ಟ್ ಮ್ಯಾಚ್ಗೆ ಮಳೆ ಅಡ್ಡಿ
ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಟೆಸ್ಟ್ ಪಂದ್ಯಕ್ಕೆ ಆರಂಭದಲ್ಲೇ ವರುಣದೇವ ಅಡ್ಡಿಯನ್ನುಂಟು ಮಾಡಿದ್ದಾನೆ. ಕೊರೋನಾ ವೈರಸ್ನಿಂದಾಗಿ ಸುಮಾರು ಮೂರು ತಿಂಗಳಿಂದ ಯಾವುದೇ ಕ್ರಿಕೆಟ್ ಪಂದ್ಯಗಳು ನಡೆದಿಲ್ಲ. ಆದ್ರೆ ಕೋವಿಡ್ -19 ಸೋಂಕು ಕಡಿಮೆಯಾದ ಹಿನ್ನೆಲೆಯಲ್ಲಿ ಇಂಗ್ಲೆಂಡ್ನಲ್ಲಿ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ತಂಡಗಳು ಕ್ರಿಕೆಟ್ ಆಡಲು ಸನ್ನದ್ಧವಾಗಿದ್ದವು. ಕ್ವಾರೆಂಟೈನ್ ನಿಯಮಗಳನ್ನು ಪಾಲಿಸಿಕೊಂಡು ಉಭಯ ತಂಡಗಳು ಕ್ರಿಕೆಟ್ ಆಟಕ್ಕೆ ಮತ್ತೆ ಚಾಲನೆ ನೀಡಲಿವೆ.
ಆದ್ರೆ ಮಳೆಯಿಂದಾಗಿ ಇನ್ನೂ ಟಾಸ್ ನಡೆದಿಲ್ಲ. ಹೀಗಾಗಿ ಇಂದಿನಿಂದ ಆರಂಭವಾಗುವ ಮೊದಲ ಟೆಸ್ಟ್ ಪಂದ್ಯ ತಡವಾಗಿ ಶುರುವಾಗಲಿದೆ. ಸೌತಂಪ್ಟನ್ ನಲ್ಲಿ ನಡೆಯುತ್ತಿರುವ ಈ ಟೆಸ್ಟ್ ಪಂದ್ಯಕ್ಕೆ ಉಭಯ ತಂಡಗಳು ರೆಡಿಯಾಗಿವೆ. ಅಲ್ಲದೆ ಕೆಲವೊಂದು ಹೊಸ ನಿಯಮಗಳು ಕೂಡ ಸೇರಿಕೊಂಡಿವೆ. ಮತ್ತೊಂದೆಡೆ ಇಂಗ್ಲೆಂಡ್ ತಂಡದ ಪಕ್ಕಾ ಅಭಿಮಾನಿ ಬಳಗವಾಗಿರುವ ಬಾರ್ಮಿ ಆರ್ಮಿಗೂ ಎಂಟ್ರಿ ಇಲ್ಲ. ಇನ್ನೂ ಪ್ರೇಕ್ಷಕರಿಗಂತೂ ನೋ ಎಂಟ್ರಿ. ಹೀಗಾಗಿ ಪ್ರೇಕ್ಷಕರಿಲ್ಲದೆ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ತಂಡಗಳು ಕಣಕ್ಕಿಳಿದಿವೆ.
ಹೆಚ್ಚುವರಿ ಡಿಆರ್ಎಸ್, ಚೆಂಡಿಗೆ ಎಂಜಲು ಹಾಕುವಂತಿಲ್ಲ. ಪರಸ್ಪರ ಶೇಕ್ ಹ್ಯಾಂಡ್ ಮಾಡುವಂತಿಲ್ಲ. ಒಬ್ಬರಿಗೊಬ್ಬರು ಅಪ್ಪಿಕೊಂಡು ಸಂಭ್ರಮಿಸುವಂತಿಲ್ಲ. ಮೈದಾನದಲ್ಲಿ ಪ್ರೇಕ್ಷಕರಿಲ್ಲ. ತಟಸ್ಥ ಅಂಪೈರ್ಗಳಿಲ್ಲ. ಹೀಗೆ ಕೆಲವೊಂದು ಹೊಸ ನಿಯಮದೊಂದಿಗೆ ಈ ಸರಣಿಯನ್ನು ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡಗಳು ಆಡಲಿವೆ.
ಇಂಗ್ಲೆಂಡ್ ಸಂಭವನೀಯ ತಂಡ – ರೋರಿ ಬನ್ರ್ಸ್, ಡಾಮ್ ಸಿಬ್ಲೆ, ಜೊಯ್ ಡಿನ್ಲೆ, ಝಾಕ್ ಕ್ರಾವ್ಲೇ, ಬೆನ್ ಸ್ಟೋಕ್ಸ್ (ನಾಯಕ), ಒಲಿ ಪಾಪೆ, ಜೋಸ್ ಬಟ್ಲರ್ (ವಿಕೆಟ್ ಕೀಪರ್)ಮ ಡಾಮ್ ಬೆಸ್, ಜೊಫ್ರಾ ಆರ್ಚೆರ್, ಕ್ರಿಸ್ ವೋಕ್ಸ್, ಜೇಮ್ಸ್ ಆಂಡೆರ್ಸನ್.
ವೆಸ್ಟ್ ಇಂಡೀಸ್ ಸಂಭವನೀಯ ತಂಡ -ಜಾನ್ ಕ್ಯಾಂಬೆಲ್, ಕ್ರೇಗ್ ಬ್ರಾಥ್ ವೈಟ್, ಶಾಮ್ರಾಹ್ ಬ್ರೂಕ್ಸ್, ಶಾಯ್ ಹೋಪ್, ರೋಸ್ಟನ್ ಚೇಸ್, ಶೇನ್ ಡೌರಿಚ್ (ವಿಕೆಟ್ ಕೀಪರ್), ಜೇಸನ್ ಹೋಲ್ಡರ್ (ನಾಯಕ)ಮ ರಕೀಮ್ ಕಾರ್ನ್ವಾಲ್, ಅಲ್ಝಾರಿ ಜೊಸೇಫ್, ಕೇಮರ್ ರಾಷಚ್, ಶಾನನ್ ಗ್ಯಾಬ್ರಿಯಲ್.