ಜನಾಂಗಿಯ ನಿಂದನೆ – ಇಂಗ್ಲೆಂಡ್ ವೇಗಿ ರಾಬಿನ್ಸನ್ ಒಲೆಯ್ ಅಮಾನತು…!

1 min read
Ollie Robinson england saakshatv

ಜನಾಂಗಿಯ ನಿಂದನೆ – ಇಂಗ್ಲೆಂಡ್ ವೇಗಿ ರಾಬಿನ್ಸನ್ ಒಲೆಯ್ ಅಮಾನತು…!

Ollie Robinson england saakshatvಇಂಗ್ಲೆಂಡ್ ನ ವೇಗದ ಬೌಲರ್ ರಾಬಿನ್ಸನ್ ಒಲೆಯ್ ಅವರನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಿಂದ ಅಮಾನತು ಮಾಡಲಾಗಿದೆ.
ಐತಿಹಾಸಿಕ ಲಾಡ್ಸ್ ್ ಮೈದಾನದಲ್ಲಿ ನ್ಯೂಜಿಲೆಂಡ್ ವಿರುದ್ಧ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡಿದ್ದರು. ಅಲ್ಲದೆ ಏಳು ವಿಕೆಟ್ ಹಾಗೂ 42 ರನ್ ಕೂಡ ದಾಖಲಿಸಿದ್ದರು. ಈ ಖುಷಿಯನ್ನು ಹಂಚಿಕೊಳ್ಳುವ ಸಮಯದಲ್ಲೇ ರಾಬಿನ್ಸನ್ ಅವರಿಗೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಶಾಕ್ ನೀಡಿದೆ.
2012 ಮತ್ತು 2013ರಲ್ಲಿ ರಾಬಿನ್ಸ್ ಮಾಡಿರುವ ಎರಡು ಟ್ವಿಟ್ ಗಳು ಈಗ ಮುಳುವಾಗಿ ಪರಿಣಮಿಸಿದೆ. ಜನಾಂಗೀಯ ನಿಂದನೆ ಮತ್ತು ಲೈಂಗಿಕತೆಗೆ ಸಂಬಂಧಪಟ್ಟಂತೆ ರಾಬಿನ್ಸನ್ ಅವರು ಎಂಟು ವರ್ಷಗಳ ಹಿಂದೆ ಟ್ವಿಟರ್ ನಲ್ಲಿ ತನ್ನ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದರು.
ಇದು ಈಗ ಚಾಲ್ತಿಗೆ ಬಂದಿದ್ದು, ಮೊದಲ ಟೆಸ್ಟ್ ಪಂದ್ಯದ ಬಳಿಕ ರಾಬಿನ್ಸನ್ ಅವರಿಗೆ ನಿಷೇಧವನ್ನು ಹೇರಲಾಗಿದೆ.
ರಾಬಿನ್ಸನ್ ಅವರನ್ನು ಶಿಸ್ತು ಸಮಿತಿ ತನಿಖೆಗೆ ಒಳಪಡಿಸಿದೆ. ತನಿಖೆ ಪೂರ್ಣಗೊಂಡ ಬಳಿಕವೇ ರಾಬಿನ್ಸನ್ ಅವರ ಭವಿಷ್ಯ ನಿರ್ಧಾರವಾಗಿದೆ.
Ollie Robinson england saakshatvಈಗಾಗಲೇ ತಾನು ಮಾಡಿರುವ ಟ್ವಿಟ್ ಬಗ್ಗೆ ಕ್ಷಮೆಯಾಚಿಸಿದ್ದಾರೆ. ಅಲೋಚನಾ ರಹಿತ ಮತ್ತು ಬೇಜವಾಬ್ದಾರಿತನದಿಂದಾಗಿ ಟ್ವಿಟ್ ಮಾಡಿರುವುದಾಗಿ ತನ್ನ ತಪ್ಪಿನ ಬಗ್ಗೆ ವಿಷಾದವನ್ನು ವ್ಯಕ್ತಪಡಿಸಿದ್ದಾರೆ.
ನನ್ನ ಬದುಕಿನ ಸ್ಮರಣೀಯ ದಿನವಾಗಿತ್ತು. ಚೊಚ್ಚಲ ಟೆಸ್ಟ್ ಪಂಂದ್ಯವನ್ನಾಡಿದ್ದೆ. ಆದ್ರೆ ನಾನು ಎಂಟು ವರ್ಷಗಳ ಹಿಂದೆ ಮಾಡಿರುವ ಟ್ವಿಟ್ ಇಂದು ಸಾರ್ವಜನಿಕವಾಗಿ ಕಾಣಿಸಿಕೊಂಡಿದೆ. ಇದು ಇಷ್ಟೊಂದು ಪರಿಣಾಮಕಾರಿಯಾಗುತ್ತದೆ ಅಂತ ಆಗ ಅಂದುಕೊಂಡಿರಲಿಲ್ಲ. ನಾನು ಅಲೋಚನಾ ರಹಿತವಾಗಿ ಮತ್ತು ಬೇಜವಾಬ್ದಾರಿಯಿಂದ ಮಾಡಿದ್ದೆ. ಅದು ಈಗ ನನ್ನನ್ನು ಮುಜುಗರಕ್ಕೀಡುಮಾಡಿದೆ. ನಾನು ಬೇಕಂತ ಮಾಡಿಲ್ಲ. ನನಗೆ ಜನಾಂಗೀಯ ನಿಂದನೆ ಮಾಡುವ ಉದ್ದೇಶವಿರಲಿಲ್ಲ. ನಾನು ಆ ರೀತಿಯ ವ್ಯಕ್ತಿಯಲ್ಲ. ಈ ಬಗ್ಗೆ ನನಗೆ ವಿಷಾಧವಿದೆ. ಈ ಬಗ್ಗೆ ಕ್ಷಮೆ ಯಾಚಿಸುತ್ತೇನೆ ಎಂದು ರಾಬಿನ್ಸನ್ ಹೇಳಿದ್ದಾರೆ.

ಆದ್ರೆ ಇಂಗ್ಲೆಂಡ್ ಮಂಡಳಿಯು ಇದನ್ನು ಗಂಭೀರವಾಗಿ ಪರಿಗಣಿಸಿದೆ. ತಕ್ಷಣವೇ ಇಂಗ್ಲೆಂಡ್ ತಂಡದ ಕ್ಯಾಂಪ್ ನಿಂದ ಹೊರನಡೆಯಬೇಕು. ಎರಡನೇ ಪಂದ್ಯಕ್ಕೆ ರಾಬಿನ್ಸನ್ ಲಭ್ಯವಿರುವುದಿಲ್ಲ ಎಂದು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd