ಸದ್ಯಕ್ಕೆ ನೋ ಲಾಕ್ ಡೌನ್ ಎಂದ ಕೇಂದ್ರ ಸರ್ಕಾರ.. ಆದ್ರೆ

1 min read
kodagu

ಸದ್ಯಕ್ಕೆ ನೋ ಲಾಕ್ ಡೌನ್ ಎಂದ ಕೇಂದ್ರ ಸರ್ಕಾರ

ನವದೆಹಲಿ : ದೇಶದಲ್ಲಿ ಕೊರೊನಾ ಎರಡನೇ ಅಲೆ ಕಂಟ್ರೋಲ್ ತಪ್ಪಿದ್ದು, ಪ್ರತಿ ದಿನ ಮೂರು ಲಕ್ಷಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗುತ್ತಿವೆ.

ಈ ಹಿನ್ನೆಲೆಯಲ್ಲಿ ದೇಶದಾದ್ಯಂತ ಮತ್ತೊಮ್ಮೆ ಲಾಕ್ ಡೌನ್ ಮಾಡಲು ಕೇಂದ್ರಕ್ಕೆ ತಜ್ಞರು ಸಲಹೆ ನೀಡಿದ್ದರು. ದೇಶದಲ್ಲಿ ಮತ್ತೆ ಲಾಕ್ ಡೌನ್ ಮಾಡಲಾಗುತ್ತದೆ ಎಂದು ಹೇಳಲಾಗಿತ್ತು.

ಆದ್ರೆ ಕೇಂದ್ರ ಸರ್ಕಾರ ಇದೀಗ ಸದ್ಯಕ್ಕೆ ದೇಶದಲ್ಲಿ ಯಾವುದೇ ಲಾಕ್ ಡೌನ್ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

Lockdown

ಇಂದು ಕೇಂದ್ರ ಸಚಿವ ಸಂಪುಟದ ಹೈ – ವೋಲ್ಟೇಜ್ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ನಡೆಯಿತು. ಇಲ್ಲಿ ಲಾಕ್ ಡೌನ್ ನ ಸಾಧಕ ಬಾಧಕಗಳನ್ನು ಚರ್ಚೆ ಮಾಡಲಾಯಿತು. ಬಳಿಕ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ದೇಶಾದ್ಯಂತ ಮತ್ತೆ ಲಾಕ್ ಡೌನ್ ಜಾರಿ ಮಾಡಿದ್ರೆ, ಎಕಾನಾಮಿಗೆ ನೆಗಟಿವ್ ಇಂಪ್ಯಾಕ್ಟ್ ಆಗುತ್ತೆ ಎಂಬುವುದನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಸದ್ಯಕ್ಕೆ ಲಾಕ್ ಡೌನ್ ಮಾಡದಿರಲು ನಿರ್ಧರಿಸಿದೆ.

ಆದ್ರೆ ರಾಜ್ಯದಲ್ಲಿ ಲಾಕ್ ಡೌನ್ ಜಾರಿ ಮಾಡುವ ತೀರ್ಮಾನ ರಾಜ್ಯ ಸರ್ಕಾರಗಳಿಗೆ ಬಿಟ್ಟಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd