ಬೆಂಗಳೂರು : ರಾಜ್ಯ ವಿಧಾನ ಪರಿಷತ್ ಗೆ 5 ಸ್ಥಾನಗಳನ್ನು ನಾಮ ನಿರ್ದೇಶನ ಮಾಡುವ ತವಕದಲ್ಲಿ ರಾಜ್ಯ ಬಿಜೆಪಿಯಿದೆ. ವಿಧಾನ ಪರಿಷತ್ ಗೆ 9 ಸ್ಥಾನಗಳನ್ನು ತುಂಬ ಕೆಲಸ ಬಿಜೆಪಿ ಪಾಲಾಗಿದೆ ಬಂದಿದೆ. ಅದರಲ್ಲಿ 4 ಸ್ಥಾನಗಳು ಚುನಾವಣೆ ಮೂಲಕ ಮತ್ತು 5 ಸ್ಥಾನಗಳನ್ನು ನಾಮ ನಿರ್ದೇಶನದ ಮೂಲಕ ಕಳಿಸುವ ಜವಾಬ್ದಾರಿ ಬಿಜೆಪಿ ಪಕ್ಷದ್ದಾಗಿತ್ತು. ಅದರಂತೆ ನಾಲ್ಕು ಸ್ಥಾನಗಳಿಗೆ ಟಿಕೆಟ್ ನೀಡಲಾಗಿದೆ. ಇನ್ನೂಳಿದ ಐದು ಸ್ಥಾನಗಳಿಗೆ ನಾಮ ನಿರ್ದೇಶನ ಮಾಡಬೇಕಿದೆ. ಆದ್ದರಿಂದ ಬಿಜೆಪಿಯಿಂದ ಯಾರು ನಾಮ ನಿರ್ದೇಶನವಾಗುತ್ತಾರೆ ಎಂಬ ಕುತೂಹಲ ಕೆರಳಿಸಿದೆ.
ವಿಧಾನ ಪರಿಷತ್ ಗೆ ನಾಮನಿರ್ದೇಶನ ಮಾಡಬೇಕಾಗಿರುವ ಕಾರಣಕ್ಕಾಗಿ ಬಿಜೆಪಿ ಹೈಕಮಾಂಡ್ ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಮತ್ತು ರಾಜಕೀಯದಿಂದ ದೂರವಿರುವ ವ್ಯಕ್ತಿಗಳಿಗೆ ಅವಕಾಶ ಕಲ್ಪಿಸಲು ನಿರ್ಧರಿಸಿದೆ ಎಂಬ ಮಾತು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿದೆ.
ಇನ್ನೊಂದೆಡೆ ವಿಧಾನ ಪರಿಷತ್ ಗೆ ಟಿಕೆಟ್ ಸಿಗದೆ ಅಸಮಾಧಾನಗೊಂಡಿದ್ದ ಹಳ್ಳಿ ಹಕ್ಕಿ ಎಚ್. ವಿಶ್ವನಾಥ್ ಅವರನ್ನು ಸಾಹಿತ್ಯ ಕ್ಷೇತ್ರದಿಂದ ಆಯ್ಕೆ ಮಾಡಲಾಗುತ್ತಿದೆ. ಇವರ ಹೆಸರುಗಳ ಜೊತೆ ಎಸ್.ಎಲ್. ಭೈರಪ್ಪ, ಗುರುರಾಜ ಕರಜಗಿ, ಚಕ್ರವರ್ತಿ ಸೂಲಿಬೆಲೆ, ಗೀತಕ್ಕ, ರಹೀಂ ಉಚ್ಚಿಲ ಹಾಗೂ ಅನ್ವರ್ ಮಾಣಿಪ್ಪಾಡಿ ಹೆಸರುಗಳು ಕೇಳಿ ಬರುತ್ತಿದೆ.
ಚಕ್ರವರ್ತಿ ಸೂಲಿಬೆಲೆ ಈ ಹಿಂದೆ ಲೋಕಸಭಾ ಚುನಾವಣೆ ಸಮಯದಲ್ಲಿ ಟಿಕೆಟ್ ಆಕಾಂಕ್ಷಿ ಆಗಿದ್ದರು ಎನ್ನಲಾಗಿದೆ. ಆದರೆ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಗೆ ನಾಮನಿರ್ದೇಶನ ಮಾಡುವ ಸಾದ್ಯತೆಯಿದೆ ಎಂದು ಹೇಳಾಗುತ್ತಿದೆ.