ಈಶ್ವರಪ್ಪ ಓಪನ್ ಹಾರ್ಟ್ ಮನುಷ್ಯ : ರಮೇಶ್ ಜಾರಕಿಹೊಳಿ
ಬೆಂಗಳೂರು : ಈಶ್ವರಪ್ಪನವರು ಆ ರೀತಿಯ ಮನುಷ್ಯ ಅಲ್ಲ, ಅವರು ಓಪನ್ ಹಾರ್ಟ್ ಮನುಷ್ಯ, ನನ್ನಂತೆ ಮಾತನಾಡ್ತಾರೆ. ಕೆಲ ಮಾಧ್ಯಮಗಳು ಅವರ ಹೇಳಿಕೆಯನ್ನು ತಿರುಚಿದೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಹದಿನೇಳು ಶಾಸಕರು ಬಿಜೆಪಿಗೆ ಬಂದ ಮೇಲೆ ಪಕ್ಷದಲ್ಲಿ ಗೊಂದಲ ಉಂಟಾಗಿದೆ ಎಂಬ ಸಚಿವ ಕೆ.ಎಸ್ ಈಶ್ವರಪ್ಪನವರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಜಾರಕಿಹೊಳಿ, ಈಶ್ವರಪ್ಪನವರು ಆ ರೀತಿಯ ಮನುಷ್ಯ ಅಲ್ಲ, ಅವರು ಓಪನ್ ಹಾರ್ಟ್ ಮನುಷ್ಯ, ನನ್ನಂತೆ ಮಾತನಾಡ್ತಾರೆ.
ಕೆಲ ಮಾಧ್ಯಮಗಳು ಅವರ ಹೇಳಿಕೆಯನ್ನು ತಿರುಚಿದೆ. ಬಿಜೆಪಿಗೆ 104 ಸೀಟ್ ಬರದೆ ಬಹುಮತ ಬಂದಿದ್ದರೆ ಸಮಸ್ಯೆ ಆಗ್ತಿರಲಿಲ್ಲ ಎಂದು ಈಶ್ವರಪ್ಪನವರು ಹೇಳಿದ್ದಾರೆ. ಆದರೆ, ಅದನ್ನು ಮಾಧ್ಯಮವರು ತೋರಿಸಿಲ್ಲ ಎಂದು ಮಾಧ್ಯಮಗಳ ಮೇಲೆ ಗೂಬೆ ಕೂರಿಸಿದರು.
ಇನ್ನು ಈಶ್ವರಪ್ಪನವರಷ್ಟು ಒಳ್ಳೆಯ ಮನುಷ್ಯ ಯಾರೂ ಇಲ್ಲ. ವಲಸಿಗ ಶಾಸಕರಿಗೆ ಹೆಚ್ಚು ಮಹತ್ವ ಕೊಟ್ಟವರು. ನಿಮ್ಮ ಉಪಕಾರದಿಂದ ಈ ಖುರ್ಚಿ ಮೇಲೆ ಕುಂತಿದ್ದೀನಿ.
ನಿಮ್ಮ ಋಣ ತೀರಿಸಲು ಆಗುವುದಿಲ್ಲ ಎಂದು ಈಶ್ವರಪ್ಪರನ್ನು ಕೊಂಡಾಡಿದರು. ಕೆಲ ಮಾಧ್ಯಮಗಳು ಹಿಂದುಳಿದ ಸಮುದಾಯದ ನಾಯಕನನ್ನು ತುಳಿಯುವ ಪ್ರಯತ್ನ ಮಾಡುತ್ತಿದೆ ಎಂದರು.








