ESIC ನೇಮಕಾತಿ 2025: ಭಾರತದೆಲ್ಲೆಡೆ 558 ಸ್ಪೆಷಲಿಸ್ಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ESIC (ಕಾರ್ಮಿಕರ ರಾಜ್ಯ ನೌಕರರ ವಿಮಾ ನಿಗಮ) ಹೊಸ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದೆ. ಒಟ್ಟು 558 ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ.
ನೇಮಕಾತಿ ವಿವರ
ಸಂಸ್ಥೆಯ ಹೆಸರು ಕಾರ್ಮಿಕರ ರಾಜ್ಯ ನೌಕರರ ವಿಮಾ ನಿಗಮ (ESIC)
ಹುದ್ದೆಯ ಹೆಸರು ಸೀನಿಯರ್ ಮತ್ತು ಜೂನಿಯರ್ ಸ್ಪೆಷಲಿಸ್ಟ್
ಒಟ್ಟು ಹುದ್ದೆಗಳ ಸಂಖ್ಯೆ 558
ಉದ್ಯೋಗ ಸ್ಥಳ ಭಾರತಾದ್ಯಂತ
ಅರ್ಜಿ ಸಲ್ಲಿಕೆ ವಿಧಾನ ಅಫ್ಲೈನ್ (ಅಂಚೆ ಮೂಲಕ ಅರ್ಜಿ ಕಳುಹಿಸಬೇಕು)
ಹುದ್ದೆಗಳ ವಿವರ
ಸೀನಿಯರ್ ಸ್ಪೆಷಲಿಸ್ಟ್ ಹುದ್ದೆಗಳು 155
ಜೂನಿಯರ್ ಸ್ಪೆಷಲಿಸ್ಟ್ ಹುದ್ದೆಗಳು 403
ಒಟ್ಟು ಹುದ್ದೆಗಳ ಸಂಖ್ಯೆ 558
ವಿದ್ಯಾರ್ಹತೆ
ಈ ಹುದ್ದೆಗಳಿಗೆ ಅರ್ಜಿ ಹಾಕುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಎಂಎ, ಎಂಎಸ್, ಎಂಎಸ್ಸಿ, ಡಿಎಸ್ಸಿ, ಡಿಎ, ಎಂ.ಸಿ.ಎಚ್, ಡಿಪಿಎಂ, ಡಿಎಂಆರ್ಡಿ, ಡಿಎಂ ಅಥವಾ ಪಿಎಚ್ಡಿ ಪದವಿಗಳು ಪಡೆದಿರಬೇಕು.
ವಯೋಮಿತಿ
ಅಭ್ಯರ್ಥಿಯ ಗರಿಷ್ಠ ವಯಸ್ಸು 45 ವರ್ಷಗಳೊಳಗೆ ಇರಬೇಕು (2025ರ ಮೇ 26ಕ್ಕೆ.)
ವಯೋಮಿತಿಯಲ್ಲಿ ಸಡಿಲಿಕೆಗಳು – ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ, ಅಂಗವಿಕಲ (ಸಾಮಾನ್ಯ) 10 ವರ್ಷ, ಅಂಗವಿಕಲ (ಒಬಿಸಿ ) 13 ವರ್ಷ, ಅಂಗವಿಕಲ (ಎಸ್ಸಿ/ಎಸ್ಟಿ) 15 ವರ್ಷ
ವೇತನದ ಮಾಹಿತಿ
ಸೀನಿಯರ್ ಸ್ಪೆಷಲಿಸ್ಟ್ ಹುದ್ದೆಗೆ ಮಾಸಿಕ ರೂ. 78,800/-
ಜೂನಿಯರ್ ಸ್ಪೆಷಲಿಸ್ಟ್ ಹುದ್ದೆಗೆ ಮಾಸಿಕ ರೂ. 67,700/-
ಅರ್ಜಿ ಶುಲ್ಕ
ಮಹಿಳಾ, ಎಸ್ಸಿ/ಎಸ್ಟಿ, ಅಂಗವಿಕಲ, ಮಾಜಿ ಸೈನಿಕರು ಮತ್ತು ESIC ನ ನೌಕರರಿಗೆ ಶುಲ್ಕವಿಲ್ಲ
ಇತರ ಎಲ್ಲಾ ಅಭ್ಯರ್ಥಿಗಳಿಗೆ ರೂ. 500/-
ಪಾವತಿ ವಿಧಾನ ಡಿಮ್ಯಾಂಡ್ ಡ್ರಾಫ್ಟ್ ಅಥವಾ ಬ್ಯಾಂಕರ್ ಚೆಕ್
ಆಯ್ಕೆ ವಿಧಾನ
ಅಭ್ಯರ್ಥಿಗಳ ಆಯ್ಕೆ ಲೇಖಿತ ಪರೀಕ್ಷೆ ಮತ್ತು ಸಂದರ್ಶನದ ಆಧಾರದಲ್ಲಿ ನಡೆಯಲಿದೆ.
ಅರ್ಜಿ ಸಲ್ಲಿಸುವ ವಿಧಾನ
ಅರ್ಜಿಯನ್ನು Speed Post/Registered Post ಮೂಲಕ ನಿಗದಿತ ವಿಳಾಸಕ್ಕೆ ಕಳುಹಿಸಿ. ಅರ್ಜಿ ಕಳುಹಿಸಲು ಕೊನೆಯ ದಿನಾಂಕ 26-ಮೇ-2025.
ದೂರದ ಪ್ರದೇಶದ ಅಭ್ಯರ್ಥಿಗಳಿಗೆ ಕೊನೆಯ ದಿನಾಂಕ 02-ಜೂನ್-2025.
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆ ಪ್ರಾರಂಭ 08 ಏಪ್ರಿಲ್ 2025
ಕೊನೆಯ ದಿನಾಂಕ 26 ಮೇ 2025