ಧಾರವಾಡ : ಜ್ವಾಲಾಮುಖಿ ಏಳುವ ಮೊದಲು ಪೀರನವಾಡಿಯಲ್ಲಿ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಸ್ಥಾಪನೆ ಮಾಡಿ ಎಂದು ಶ್ರೀರಾಮ ಸೇವೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ.
ಬೆಳಗಾವಿ ಪೀರನವಾಡಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿವಾದ ಕುರಿತು ಧಾರವಾಡದಲ್ಲಿ ಮಾತನಾಡಿದ ಮುತಾಲಿಕ್, ಬೆಳಗಾವಿ ಪೀರನವಾಡಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ತೆಗೆದು ಅಕ್ಷಮ್ಯ ಅಪರಾಧ ಮಾಡಿದ್ದಾರೆ. ಸಂಗೊಳ್ಳಿ ರಾಯಣ್ಣ ಯಾವ ಜಾತಿಯವನು ಎಂಬುದು ಮುಖ್ಯ ಅಲ್ಲ, ಯಾವುದಕ್ಕೆ ಹೋರಾಟ ಮಾಡಿದ ಅನ್ನೋದು ಮುಖ್ಯ. ರಾಯಣ್ಣ ಜಾತಿಗಾಗಿ, ಗಡಿಗಾಗಿ ಹೋರಾಟ ಮಾಡಿದ್ದಲ್ಲ, ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ನಾಯಕ, ಅಂತಹವನಿಗೆ ಅಪಮಾನ ಮಾಡುತ್ತಿರುವುದು ದೇಶದ ಭಕ್ತರಿಗೆ ಅಪಮಾನ ಎಂದು ಆಕ್ರೋಶ ಹೊರಹಾಕಿದ್ದಾರೆ.
ಈ ರೀತಿಯ ಮಹಾಪುರುಷರಿಗೆ, ಜಾತಿ ಬಣ್ಣ ಬಳೆಯುವವರಿಗೆ ನಾಚಿಕೆಯಾಗಬೇಕು. ನಿಮ್ಮ ಸ್ವಾರ್ಥಕ್ಕಾಗಿ ಇವರನ್ನು ರಾಜಕೀಯ ದಾಳಕ್ಕೆ ಬಳಸಬೇಡಿ. ರಾಯಣ್ಣನನ ಪ್ರತಿಮೆಯನ್ನು ಮತ್ತೆ ಪ್ರತಿಷ್ಠಾಪನೆ ಮಾಡಬೇಕು, ಜ್ವಾಲಾಮುಖಿ ಏಳುವ ಮೊದಲು ಪ್ರತಿಮೆ ಸ್ಥಾಪನೆ ಮಾಡಬೇಕು. ನೀವು ಜಾತಿ, ರಾಜಕೀಯ ಬಣ್ಣ ಬಳಿದರೆ ನಾವು ನಂದಗಡದಿಂದ ಪೀರನವಾಡಿ ಚಲೋ ಕರೆ ಕೊಡಬೇಕಾಗುತ್ತೆ ಎಂದು ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ.