ನೈತಿಕ ಪೊಲೀಸ್ ಗಿರಿ | ಮಂಗಳೂರಲ್ಲಿ ಆರು ಮಂದಿ ಅರೆಸ್ಟ್

1 min read
Mangalore saaksha tv

ನೈತಿಕ ಪೊಲೀಸ್ ಗಿರಿ | ಮಂಗಳೂರಲ್ಲಿ ಆರು ಮಂದಿ ಅರೆಸ್ಟ್

ಮಂಗಳೂರು : ಕರಾವಳಿಯಲ್ಲಿ ನೈತಿಕ ಪೊಲೀಸ್ ಗಿರಿ ಮಾಡಿದ 6 ಮಂದಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಪ್ರಹ್ಲಾದ್, ಪ್ರಶಾಂತ್, ಗುರು ಪ್ರಸಾದ್, ಪ್ರತೀಶ್, ಭರತ್, ಸುಖೇಶ್ ಬಂಧಿತ ಆರೋಪಿಗಳಾಗಿದ್ದಾರೆ.

ಕೇರಳ ಮೂಲದ ಅನ್ಯ ಧರ್ಮದ ಯುವಕ ಹಾಗೂ ಯುವತಿ ಬೈಕಿನಲ್ಲಿ ಹೋಗುತ್ತಿದ್ದಾಗ ಈ ಯುವಕರ ತಂಡ ಫಾಲೋ ಮಾಡಿದೆ.

ಅಂತೆಯೇ ಜೋಡಿ ಸುರತ್ಕಲ್ ನ ಕಲ್ಯಾಣಿ ಸಿಟಿ ಪರ್ಲ್ ಅಪಾಟ್ಮೆರ್ಂಟ್ ಬಳಿ ಬರುತ್ತಿದ್ದಂತೆಯೇ ತಂಡ ಯುವಕನಿಗೆ ಥಳಿಸಿದೆ.

Mangalore saaksha tv

ಇತ್ತ ಅನ್ಯಧರ್ಮಿಯ ಯುವಕನ ಜೊತೆ ಓಡಾಡುತ್ತೀಯ ಅಂತಾ ಯುವತಿಗೂ ಧಮ್ಕಿ ಹಾಕಲಾಗಿದೆ.

ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಭೇಟಿ ನೀಡಿದ್ದಾರೆ.

ಅಲ್ಲದೆ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಇನ್ನು ಘಟನೆ ಸಂಬಂಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd