ಪ್ರಪಂಚ 2021 ರಲ್ಲಿದೆ, ಆದ್ರೆ ಈ ದೇಶದಲ್ಲಿ ಮಾತ್ರ 2014 – ಇಲ್ಲಿ ಯಾರೂ ಕೂಡ 50 ವರ್ಷಕ್ಕಿಂತ ಹೆಚ್ಚು ಜೀವಿಸುವುದಿಲ್ಲ..!

1 min read

ಪ್ರಪಂಚ 2021 ರಲ್ಲಿದೆ, ಆದ್ರೆ ಈ ದೇಶದಲ್ಲಿ ಮಾತ್ರ 2014 – ಇಲ್ಲಿ ಯಾರೂ ಕೂಡ 50 ವರ್ಷಕ್ಕಿಂತ ಹೆಚ್ಚು ಜೀವಿಸುವುದಿಲ್ಲ..!

ಈಥೋಪಿಯಾ….. ಆಫ್ರಿಕಾ ಖಂಡದಲ್ಲಿ ಬರುವ ಈ ದೇಶ ಅನೇಕ ರಹಸ್ಯಗಳಿಂದಲೇ ಪ್ರಪಂಚದ ಜನರ ತಲೆಗೆ ಹುಳ ಬಿಟ್ಟಿದೆ. ಇಡೀ ಪ್ರಪಂಚವೇ ಒಂದ್ ದಾರಿ ಆದ್ರೆ… ಈ ದೇಶವೇ ಒoದ್ ದಾರಿ… ನಾವು ಪ್ರಸ್ತುತ 2021 ರಲ್ಲಿ ಜೀವಿಸುತ್ತಿದ್ದೇವೆ. ಆದ್ರೆ 10 ಕೋಟಿ ಜನಸಂಖ್ಯೆ ಇರುವ ಈ ದೇಶದಲ್ಲಿ 2014 ನಡೀತಿದೆ.. ಅಂದ್ರೆ ಇಡೀ ಜಗತ್ತಿಗಿಂತ 8 ವರ್ಷ ಹಿಂದೆ.. ಅಷ್ಟೇ ಅಲ್ಲ ಇನ್ನೂ ಹಲವಾರು ರಹಸ್ಯಗಳು ಈ ದೇಶದಲ್ಲಿವೆ.

ಈ ದೇಶದ ರಹಸ್ಯಗಳು / ವಿಚಿತ್ರಗಳು

1. ಈ ದೇಶದಲ್ಲಿ 48 -50 ವರ್ಷಕ್ಕಿಂತ ಹೆಚ್ಚು ಯಾರೂ ಕೂಡ ಜೀವಿಸುವುದಿಲ್ಲ..

2. ಕ್ಯಾಲೆಂಡರ್ – ಇಡೀ ವಿಶ್ವವನ್ನೇ ಆಶ್ಚರ್ಯಕ್ಕೆ ದೂಡಿರುವ ವಿಚಾರ ಅಂದ್ರೆ ಈ ದೇಶದ ಕ್ಯಾಲೆಂಡರ್.. ಈ ಕ್ಯಾಲೆಂಡರ್ ನಲ್ಲಿ 13 ತಿಂಗಳು ಇರುತ್ತೆ.. ಸಾಮ್ಯಾನ್ಯ ಕ್ಯಾಲೆಂಡರ್ ಗಿಂತ ಈ ದೇಶದ ಕ್ಯಾಲೆಂಡರ್ ಸುಮಾರು 8 ವರ್ಷ ಹಿಂದೆ ಇದೆ. ಇನ್ನೂ ವಿಚಿತ್ರ ಅಂದ್ರೆ ಈ ಕ್ಯಾಲೆಂಡರ್ ನ 13ನೇ ತಿಂಗಳಲ್ಲಿ ಒಟ್ಟು 5 ದಿನಗಳು ಮಾತ್ರವೇ ಇರುತ್ತೆ.

3. ಈಥೋಪಿಯನ್ನರು ಸೆಪ್ಟೆಂಬರ್ -11 ಕ್ಕೆ ನ್ಯೂಯಿರ್ ಆಚರಣೆ ಮಾಡ್ತಾರೆ.

4. ಅವಳಿ ಜವಳಿ ಮಕ್ಕಳು ಜನಿಸಿದ್ರೆ ಇಲ್ಲಿ ಅಪಶಕುನ ಅಂತ ಭಾವಿಸಲಾಗುತ್ತೆ. ಅಲ್ಲದೇ ಅವರು ರಾಕ್ಷಸರ ರೂಪ ಎಂದು ಪರಿಗಣಿಸಲಾಗುತ್ತೆ.

5. ಕತ್ತೆ ಮತ್ತು ಒಂಟೆಯನ್ನ ಮೊದಲು ಸಾಕಲು ಶುರು ಮಾಡಿದ ದೇಶವೂ ಈಥೋಪಿಯಾ

4. ಮೂಲಗಳ ಪ್ರಕಾರ ಕಾಫಿಯನ್ನ ಕಂಡುಹಿಡಿದಿದ್ದು ಕೂಡ ಈಥೋಪಿಯನ್ನರೇ ಎನ್ನಲಾಗಿದೆ. ಕುರಿಗಾಹಿ ಓರ್ವ ಕುರಿ ಮೇಯಿಸುತ್ತಿದ್ದ ಸಂದರ್ಭದಲ್ಲಿ ಆತನ ಮೇಕೆ ಕಾಫಿ ಗಿಡದಿಂದ ಹಣ್ಣನ್ನ ನುಂಗಿ ಜೋರಾಗಿ ಓಡಾಡೋದು ಕಿರುಚಾಡಲು ಶುರುಮಾಡಿತ್ತಂತೆ. ಇದನ್ನ ಗಮನಿಸಿಯೇ ಕಾಫಿಯನ್ನ ಆವಿಷ್ಕಾರ ಮಾಡಲಾಗಿದೆ ಎನ್ನಲಾಗಿದೆ.Coffee 6 health benefits saakshatv

5. ಈಥೋಪಿಯಾ ಇಡೀ ವಿಶ್ವದ 5ನೇ ಅತಿ ಬಡ ರಾಷ್ಟ್ರವಾಗಿದೆ.

6. ಟೈಮ್ – ಈ ದೇಶದಲ್ಲಿ 5 ಗಂಟೆಯಾಗಿದ್ರೆ ಅಲ್ಲಿನ ಜನರು ಅದನ್ನ 12 ಗಂಟೆಯೆoದು ಪರಿಗಣಿಸುತ್ತಾರೆ.

7. ಇಡೀ ವಿಶ್ವದ ಅತಿ ದೊಡ್ಡ ನದಿ ಈಥೋಪಿಯಾದಲ್ಲಿಯೇ ಇದೆ – ನೈಲ್ ನದಿ – ಆಫ್ರಿಕಾದ ಅನೇಕ ದೇಶಗಳಲ್ಲಿ ಹರಿಯುವ ನದಿ ಶೇ 86 ರಷ್ಟು ಹರಿಯುವುದು ಇದೇ ದೇಶದಲ್ಲಿ ಎನ್ನಲಾಗಿದೆ.

8. ಈಥೋಪಿಯಾದಲ್ಲಿ 13 % ರಷ್ಟು ಮಕ್ಕಳ ಪೋಷಕರು AIDS ಗೆ ತುತ್ತಾಗಿ ಮೃತಪಟ್ಟಿದ್ದಾರೆ.

9. ಆಫ್ರಿಕಾದ ಸುಮಾರು 70 % ಬೆಟ್ಟ ಗುಡ್ಡ ಪರ್ವತ ಪ್ರದೇಶ ಈಥೋಪಿಯಾದಲ್ಲಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd