ಯೂರೋ ಕಪ್ 2021- ಸೆಮೀಸ್ ನಲ್ಲಿ ಇಂಗ್ಲೆಂಡ್ ಗೆ ಸವಾಲು ಹಾಕಲಿದೆ ಡೆನ್ಮಾರ್ಕ್…!

1 min read
denmark euro cup saakshatv

ಯೂರೋ ಕಪ್ 2021- ಸೆಮೀಸ್ ನಲ್ಲಿ ಇಂಗ್ಲೆಂಡ್ ಗೆ ಸವಾಲು ಹಾಕಲಿದೆ ಡೆನ್ಮಾರ್ಕ್…!

england ukraine euro cup saakshatv25 ವರ್ಷಗಳ ಬಳಿಕ ಇಂಗ್ಲೆಂಡ್ ತಂಡ ಯೂರೋ ಕಪ್ ಫುಟ್ ಬಾಲ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದೆ. 2021ರ ಯೂರೋ ಕಪ್ ಫುಟ್ ಬಾಲ್ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ 4-0 ಗೋಲುಗಳಿಂದ ಉಕ್ರೇನ್ ತಂಡವನ್ನು ಪರಾಭವಗೊಳಿಸಿತು.
1996ರ ನಂತರ ಇದೇ ಮೊದಲ ಬಾರಿ ಇಂಗ್ಲೆಂಡ್ ತಂಡ ಪ್ರತಿಷ್ಠಿತ ಯೂರೋ ಕಪ್ ನಲ್ಲಿ ಸೆಮಿ ಫೈನಲ್ ಪ್ರವೇಶಿಸಿದೆ. ಪ್ರಶಸ್ತಿ ಹಂತ ಪ್ರವೇಶಿಸಲು ಇಂಗ್ಲೆಂಡ್ ಸೆಮೀಸ್ ನಲ್ಲಿ ಡೆನ್ಮಾರ್ಕ್ ತಂಡದ ವಿರುದ್ಧ ಹೋರಾಟ ನಡೆಸಲಿದೆ.
ಇಂಗ್ಲೆಂಡ್ ತಂಡದ ಆಕ್ರಮಕಾರಿ ಆಟದ ಮುಂದೆ ಡೆನ್ಮಾರ್ಕ್ ತಂಡ ತಲ್ಲಣಗೊಂಡಿತು. ಇಂಗ್ಲೆಂಡ್ ತಂಡದಿಂದ ಹ್ಯಾರಿ ಕಾನೆ 4 ಮತ್ತು 50ನೇ ನಿಮಿಷದಲ್ಲಿ ಗೋಲು ದಾಖಲಿಸಿದ್ರೆ, ಹ್ಯಾರಿ ಮಗ್ಯುರೇ 46ನೇ ನಿಮಿಷ ಹಾಗೂ ಜೊರ್ಡಾನ್ ಹೆಂಡರ್ಸನ್ 63ನೇ ನಿಮಿಷದಲ್ಲಿ ಗೋಲು ದಾಖಲಿಸಿ ತಂಡದ ಗೆಲುವಿನ ಅಂತರವನ್ನು ಹೆಚ್ಚಿಸಿದ್ರು.
ಇನ್ನೊಂದು ಕ್ವಾರ್ಟರ್ ಫೈನಲ್ ನಲ್ಲಿ ಡೆನ್ಮಾರ್ಕ್ 2-1 ಗೋಲುಗಳಿಂದ ಚೆಕ್ ಗಣರಾಜ್ಯ ತಂಡವನ್ನು ಸೋಲಿಸಿತು. ಪಂದ್ಯದ ಆರಂಭದಲ್ಲೇ ಡೆನ್ಮಾರ್ಕ್ ಮುನ್ನಡೆ ಸಾಧಿಸಿತ್ತು. ಪಂದ್ಯದ 5ನೇ ನಿಮಿಷದಲ್ಲಿ ಥಾಮಸ್ ಡೆಲಾನೆ ಮೊದಲ ಗೋಲು ದಾಖಲಿಸಿದ್ರೆ, 42ನೇ ನಿಮಿಷದಲ್ಲಿ ಕಾಸ್ಪರ್ ಡೊಲ್ಬೆರ್ಗ್ ಎರಡನೇ ಗೋಲು ದಾಖಲಿಸಿದ್ರು. ಆದ್ರೆ ದ್ವಿತಿಯಾರ್ಧದಲ್ಲಿ ಚೆಕ್ ಗಣರಾಜ್ಯದ ಪ್ಯಾಟ್ರಿಕ್ ಸ್ಚಿಕ್ ಏಕೈಕ ಗೋಲು ದಾಖಲಿಸಿದ್ರು.
ಮೊದಲ ಸೆಮಿಫೈನಲ್ ನಲ್ಲಿ ಸ್ಪೇನ್ ಮತ್ತು ಇಟಲಿ ಮುಖಾಮುಖಿಯಾದ್ರೆ, ಎರಡನೇ ಸೆಮೀಸ್ ನಲ್ಲಿ ಇಂಗ್ಲೆಂಡ್ ಮತ್ತು ಡೆನ್ಮಾರ್ಕ್ ತಂಡಗಳು ಕಾದಾಟ ನಡೆಸಲಿವೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd