ಯೂರೋ ಕಪ್ – ಜರ್ಮನಿ ವಿರುದ್ಧ ಸೋತು ಹೋದ ಪೋರ್ಚ್‍ಗಲ್..!
ಯೂರೋ ಕಪ್ ಫುಟ್ ಬಾಲ್ ಟೂರ್ನಿಯ ಎಫ್ ಗುಂಪಿನಲ್ಲಿ ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಲು ಜಿದ್ದಾಜಿದ್ದಿನ ಹೋರಾಟ ನಡೆಯಲಿದೆ. ಫ್ರಾನ್ಸ್, ಜರ್ಮನಿ ಮತ್ತು ಪೊರ್ಚ್‍ಗಲ್ ತಂಡಗಳು ಲೀಗ್ ನ ಮೊದಲ ಎರಡು ಸ್ಥಾನ ಪಡೆದುಕೊಳ್ಳಲು ಅಂತಿಮ ಲೀಗ್ ಪಂದ್ಯದಲ್ಲಿ ಗೆಲುವು ದಾಖಲಿಸಲೇಬೇಕಾದ ಅನಿವಾರ್ಯತೆಗಳಿವೆ.
ಎಫ್ ಗುಂಪಿನ ಪಂದ್ಯದಲ್ಲಿ ಜರ್ಮನಿ ತಂಡ 4-2 ಗೋಲುಗಳಿಂದ ಬಲಿಷ್ಠ ಪೋರ್ಚ್‍ಗಲ್ ತಂಡವನ್ನು ಪರಾಭವಗೊಳಿಸಿದೆ. ಅಲ್ಲದೆ ಗುಂಪಿನ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ. ಮೊದಲ ಸ್ಥಾನದಲ್ಲಿ ಫ್ರಾನ್ಸ್ ಇದೆ. ಜರ್ಮನಿ ವಿರುದ್ಧ ಸೋಲಿನಿಂದ ಪೋರ್ಚ್‍ಗಲ್ ಸದ್ಯ ಮೂರನೇ ಸ್ಥಾನದಲ್ಲಿದೆ.
ಪಂದ್ಯದ ಆರಂಭದಲ್ಲೇ ಪೋರ್ಚ್ ಗಲ್ ತಂಡಕ್ಕೆ ನಾಯಕ ಕ್ರಿಸ್ಟಿಯಾನೊ ರೋನಾಲ್ಡೊ ಅವರು ಮುನ್ನಡೆ ಒದಗಿಸಿದ್ರು. ಪಂದ್ಯದ 15ನೇ ನಿಮಿಷದಲ್ಲಿ ರೊನಾಲ್ಡೊ ಮೊದಲ ಗೋಲು ದಾಖಲಿಸಿದ್ರು.
ಬಳಿಕ ಜರ್ಮನಿ ತಂಡಕ್ಕೆ ದಿಟ್ಟ ಹೋರಾಟವನ್ನು ನೀಡಿತ್ತು. ಅಲ್ಲದೆ ಪೋರ್ಚ್‍ಗಲ್ ತಂಡದ ರಕ್ಷಣಾ ಕೋಟೆಯನ್ನು ಮುರಿಯಲು ಸಫಲವಾಯ್ತು. ಪಂದ್ಯದ 35ನೇ ನಿಮಿಷದಲ್ಲಿ ಜರ್ಮನಿಯ ರುಬೆನ್ ಡಯಾಸ್,, 39ನೇ ನಿಮಿಷದಲ್ಲಿ ರಫೇಲ್ ಗ್ಯುರೇರೊ, 51ನೇ ನಿಮಿಷದಲ್ಲಿ ಕೈ ಹಾವೆಟ್ಜ್ ಹಾಗೂ 60ನೇ ನಿಮಿಷದಲ್ಲಿ ರಾಬಿನ್ ಗೊಸೆನ್ಸ್ ಅವರು ಸತತ ಗೋಲು ದಾಖಲಿಸಿ ಪೋರ್ಚ್‍ಗಲ್ ತಂಡಕ್ಕೆ ಆಘಾತದ ಮೇಲೆ ಆಘಾತ ನೀಡಿದ್ರು.
ಈ ನಡುವೆ, 67ನೇ ನಿಮಿಷದಲ್ಲಿ ಪೋರ್ಚ್ ಗಲ್ ನ ಡಿಯಾಗೊ ಜೋಟಾ ಅವರು ಗೋಲು ದಾಖಲಿಸಿ ಸೋಲಿನ ಅಂತರವನ್ನು 4-2ಕ್ಕಿಳಿಸಿದ್ರು.
ಎಫ್ ಗುಂಪಿನ ಇನ್ನೊಂದು ಪಂದ್ಯದಲ್ಲಿ ಫ್ರಾನ್ಸ್ ತಂಡ 1-1ರಿಂದ ಹಂಗೇರಿ ವಿರುದ್ಧ ಡ್ರಾ ಮಾಡಿಕೊಂಡಿತ್ತು.
ಇನ್ನು ಇ ಗುಂಪಿನ ಇನ್ನೊಂದು ಪಂದ್ಯದಲ್ಲಿ ಪ್ರಬಲ ಸ್ಪೇನ್ ತಂಡ 1-1ರಿಂದ ಪೋಲೆಂಡ್ ವಿರುದ್ಧ ಡ್ರಾಗೆ ಸಮಾಧಾನಪಟ್ಟುಕೊಂಡಿತ್ತು.
ಹೀಗಾಗಿ ಸ್ಪೇನ್ ತಂಡ ಒತ್ತಡಕ್ಕೆ ಸಿಲುಕಿದೆ. ಆಡಿರುವ ಎರಡು ಪಂದ್ಯಗಳನ್ನು ಡ್ರಾ ಮಾಡಿಕೊಂಡಿರುವ ಸ್ಪೇನ್ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.








