ಯೂರೋ ಕಪ್ ಸುದ್ದಿಗೋಷ್ಠಿ- ಕೋಕಾ ಕೋಲಾ ಆಯ್ತು.. ಈಗ ಹೈನೆಕೆನ್ ಬಿಯರ್ ಬಾಟಲ್ ಸುದ್ದಿ..!
ಯೂರೋ ಕಪ್ ಫುಟ್ ಬಾಲ್ ಟೂರ್ನಿಯ ಸುದ್ದಿಗೋಷ್ಠಿಯಲ್ಲಿ ಮತ್ತೊಂದು ಘಟನೆ ನಡೆದಿದೆ. ನಿನ್ನೆ ಕ್ರಿಸ್ಟಿಯಾನೊ ರೋನಾಲ್ಟೊ ಅವರು ಸುದ್ದಿಗೋಷ್ಠಿಯ ಟೇಬಲ್ ನಲ್ಲಿದ್ದ ಕೋಕಾ ಕೋಲಾ ಬಾಟಲ್ ಅನ್ನು ಕೆಳಗಿಟ್ಟು ನೀರಿನ ಬಾಟಲ್ ಕುಡಿಯಿರಿ ಆರೋಗ್ಯಕ್ಕೆ ಒಳ್ಳೆಯದ್ದು ಎಂಬ ಸಂದೇಶವನ್ನು ರವಾನಿಸಿದ್ರು.
ಕ್ರಿಸ್ಟಿಯಾನೊ ರೋನಾಲ್ಡೊ ಅವರ ಈ ಒಂದು ಸಂದೇಶದಿಂದ ಕೋಕಾ ಕೋಲಾ ಕಂಪೆನಿಗೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ.
ಇದರ ಬೆನ್ನಲ್ಲೇ ಫ್ರಾನ್ಸ್ ತಂಡದ ಮಿಡ್ ಫೀಲ್ಡರ್ ಪಾಲ್ ಪೋಗ್ಬಾ ಅವರು ಬಿಯರ್ ಕುಡಿಯಬೇಡಿ ಎಂಬ ಸಂದೇಶವನ್ನು ರವಾನಿಸಿದ್ದಾರೆ.
ಜರ್ಮನಿ ವಿರುದ್ಧ 0-1ರಿಂದ ಫ್ರಾನ್ಸ್ ತಂಡ ಗೆಲುವು ಸಾಧಿಸಿತ್ತು. ಫ್ರಾನ್ಸ್ ತಂಡದ ಪರ ಪಾಲ್ ಪೋಗ್ಬಾ ಅವರು ಅದ್ಭುತ ಪ್ರದರ್ಶನ ನೀಡಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.
ನಂತರ ಸುದ್ದಿಗೋಷ್ಠಿಗೆ ಆಗಮಿಸಿದ್ದ ಪಾಲ್ ಪೋಗ್ಬಾ ಅವರು ಟೇಬಲ್ ಮೇಲೆ ಹೈನೆಕೆನ್ ಬಿಯರ್ ಬಾಟಲ್ ಕಣ್ಣಿಗೆ ಬಿತ್ತು. ತಕ್ಷಣವೇ ಪೋಗ್ಬಾ ಅವರು ಹೈನೆಕೆನ್ ಬಿಯರ್ ಬಾಟಲ್ ಅನ್ನು ಕೆಳಗಿಟ್ಟರು. ಮುಸ್ಲಿಂ ಅನುಯಾಯಿ ಆಗಿರುವುದರಿಂದ ಪೋಗ್ಬಾ ಅವರು ಬಿಯರ್ ಬಾಟಲ್ ಅನ್ನು ಕೆಳಗಿಟ್ಟಿದ್ದಾರೆ. ಆದ್ರೆ ಕೋಕಾ ಕೋಲಾ ಬಾಟಲ್ ನ ತಂಟೆಗೆ ಮಾತ್ರ ಹೊಗಲಿಲ್ಲ. ಸುದ್ದಿಗೋಷ್ಠಿಯ ಟೇಬಲ್ ಮೇಲೆ ಕೋಕಾ ಕೋಲಾ ಬಾಟಲ್ ಅನ್ನು ಇರಿಸಲಾಗಿತ್ತು.
ಒಟ್ಟಿನಲ್ಲಿ ಯುರೋ ಕಪ್ ಫುಟ್ ಬಾಲ್ ಟೂರ್ನಿಯಲ್ಲಿ ಆರೋಗ್ಯಕ್ಕೆ ಹಾನಿಕರವಾಗುವಂತಹ ಪಾನೀಯಗಳ ವಿರುದ್ಧ ಅಭಿಯಾನ ಶುರುವಾಗಿದೆ. ಇದು ಸಂಘಟಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಯಾಕಂದ್ರೆ ಪಾನೀಯ ಕಂಪೆನಿಗಳು ಟೂರ್ನಿಗೆ ಜಾಹೀರಾತುಗಳನ್ನು ಕೂಡ ನೀಡುತ್ತಿವೆ. ಆಟಗಾರರ ಜೊತೆ ಒಪ್ಪಂದ ಮಾಡಿಕೊಳ್ಳದೇ ಸಂಘಟಕರು ಮತ್ತು ಪಾನೀಯ ಕಂಪೆನಿಗಳ ನಡುವೆ ದೊಡ್ಡ ಸಂಘರ್ಷಕ್ಕೂ ಕಾರಣವಾಗುತ್ತಿದೆ.