ಯೂರೋ ಕಪ್ 2021- ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಬೆಲ್ಜಿಯಂ – ಡೆನ್ಮಾರ್ಕ್
ಯೂರೋ ಕಪ್ ಫುಟ್ ಬಾಲ್ ಟೂರ್ನಿಯ ಬಿ ಗುಂಪಿನ ಪಂದ್ಯದಲ್ಲಿ ಬಲಿಷ್ಠ ಬೆಲ್ಜಿಯಂ ಮತ್ತು ಡೆನ್ಮಾರ್ಕ್ ತಂಡಗಳು ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿವೆ.
ಬಿ ಗುಂಪಿನ ಪಂದ್ಯದಲ್ಲಿ ಡೆನ್ಮಾರ್ಕ್ ತಂಡ 4-1 ಗೋಲುಗಳಿಂದ ರಷ್ಯಾ ತಂಡವನ್ನು ಸೋಲಿಸಿತು. ಈ ಮೂಲಕ ಬಿ ಗುಂಪಿನ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡ ಡೆನ್ಮಾರ್ಕ್ 16ರ ಘಟ್ಟ ತಲಪಿತು. ಗೆಲ್ಲಲೇಬೇಕಾದ ಪಂದ್ಯದಲ್ಲಿ ಸೊಲು ಅನುಭವಿಸಿದ್ದ ರಷ್ಯಾ ಕೊನೆಯ ಸ್ಥಾನ ಪಡೆದು ನಿರಾಸೆ ಅನುಭವಿಸಿತ್ತು.
ಬಿ ಗುಂಪಿನ ಇನ್ನೊಂದು ಪಂದ್ಯದಲ್ಲಿ ಬೆಲ್ಚಿಯಂ ತಂಡ 2-0 ಗೋಲುಗಳಿಂದ ಫಿನ್ ಲೆಂಡ್ ತಂಡವನ್ನು ಮಣಿಸಿತು. ಮೊದಲಾರ್ಧದಲ್ಲಿ ಬೆಲ್ಜಿಯಂ ತಂಡಕ್ಕೆ ಫಿನ್ ಲೆಂಡ್ ತೀವ್ರ ಪ್ರತಿರೋಧವನ್ನೇ ಒಡ್ಡಿತ್ತು. ಆದ್ರೆ ದ್ವಿತಿಯಾರ್ಧದಲ್ಲಿ ಬೆಲ್ಜಿಯಂ ತಂಡ ಲುಕಾಸ್ ಮತ್ತು ರೊಮೆಲು ಲುಕಾಕ್ ಗೋಲು ದಾಖಲಿಸಿ ತಂಡದ ಗೆಲುವಿನ ರೂವಾರಿಗಳಾದ್ರು. ಇದ್ರೊಂದಿಗೆ ಬಿ ಗುಂಪಿನಲ್ಲಿ ಬೆಲ್ಜಿಯಂ ಅಗ್ರಸ್ಥಾನ ಕಾಯ್ದುಕೊಂಡಿತ್ತು.
ಇನ್ನು ಸಿ ಗುಂಪಿನ ಪಂದ್ಯದಲ್ಲಿ ನೆದರ್ಲೆಂಡ್ ಗೆಲುವಿನ ಅಭಿಯಾನವನ್ನು ಮುಂದುವರಿಸಿ ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.
ಲೀಗ್ ನ ಮೂರನೇ ಪಂದ್ಯದಲ್ಲಿ ನೆದರ್ಲೆಂಡ್ ತಂಡ 3-0 ಗೋಲುಗಳಿಂದ ನಾರ್ತ್ ಮೆಕ್‍ಡೋನಿಯಾ ತಂಡವನ್ನು ಸೋಲಿಸಿತು.
ನೆದರ್ಲೆಂಡ್ ತಂಡದ ಪರ ಮೆಂಫೀಸ್ ಡೆಪೇಯ್ 24ನೇ ನಿಮಿಷದಲ್ಲಿ ಮೊದಲ ಗೋಲು ದಾಖಲಿಸಿದ್ರೆ, ಜಾರ್ಗೊನಿಯೊ ಜೆನಾಲ್ಡಮ್ 51 ಮತ್ತು 58ನೇ ನಿಮಿಷದಲ್ಲಿ ಗೋಲು ದಾಖಲಿಸಿದ್ರು.
ಸಿ ಗುಂಪಿನ ಮೂರು ಪಂದ್ಯಗಳಲ್ಲೂ ಜಯ ಸಾಧಿಸಿರುವ ನೆದರ್ಲೆಂಡ್ ತಂಡ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡಿದೆ. ಹಾಗೇ ಆಸ್ಟ್ರೀಯಾ ತಂಡ ಎರಡನೇ ಸ್ಥಾನದೊಂದಿಗೆ ಪ್ರೀ ಕ್ವಾರ್ಟರ್‍ಗೆ ಲಗ್ಗೆ ಇಟ್ಟಿದೆ. ಉಳಿದಂತೆ ಉಕ್ರೇನ್ ಮತ್ತು ನಾರ್ತ್ ಮೆಕ್‍ಡೋನಿಯಾ ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನಕ್ಕೆ ಸಮಾಧಾನಪಟ್ಟುಕೊಂಡಿದೆ.
ಇಂದಿನ ಪಂದ್ಯದಲ್ಲಿ ಕ್ರೊವೇಶಿಯಾ – ಸ್ಕಾಟ್ ಲೆಂಡ್, ಚೆಕ್ ಗಣರಾಜ್ಯ – ಇಂಗ್ಲೆಂಡ್, ಸ್ವೀಡನ್ – ಪೋಲೆಂಡ್ ಹಾಗೂ ಸ್ಲೋವೇಕಿಯಾ -ಸ್ಪೇನ್ ತಂಡಗಳು ಹೋರಾಟ ನಡೆಸಲಿವೆ.