ರಾಜ್ ಕುಟುಂಬಕ್ಕೆ ಮುಳುವಾದ ವ್ಯಾಯಾಮ ಶಾಲೆ.
ಕನ್ನಡ ಚಿತ್ರರಂಗವಿಂದು ಶೋಕದ ಕಡಲಲ್ಲಿ ಮುಳುಗಿದೆ. ರಾಜ್ಯ ಸ್ಥಬ್ದವಾಗಿದೆ.ಅಬಾಲವೃದ್ದರಾಗಿ ಎಲ್ಲರೂ ಹೇಳುವುದೊಂದೆ ಇಂಥದೊಂದು ಘಟನೆ ನಡೆಯಬಾರದಿತ್ತು. ರಾಜ್ ಕುಟುಂಬದವರೆಲ್ಲರೂ ಫಿಟ್ನೆಸ್ ಗೆ ಮಹತ್ವ ಕೊಟ್ಟವರು ಯೋಗ ಜಿಮ್ ವರ್ಕೌಟ್ ಅಂತ ಬೆವರು ಹರಿಸುತ್ತಿದ್ದವರು….ಅದೇ ಅವರಿಗೆ ಶಾಪವಾಗಿ ಪರಿಣಮಿಸುತ್ತಿದೆಯ ಎಂಬ ಅನುಮಾನ ಈಗ ಶುರುವಾಗಿದೆ.
ರಾಘವೇಂದ್ರ ರಾಜ್ ಕುಮಾರ್ ಅವರು ಹಿಂದೊಮ್ಮೆ ವರ್ಕೌಟ್ ಮಾಡುವಾಗ ಕುಸಿದು ಬಿದ್ದು ಪಾರ್ಶ್ವವಾಯುಗೆ ಒಳಗಾಗಿದ್ದರು. ಪುನಿತ್ ಅವರಿಗೆ ಚಿಕಿತ್ಸೆ ಕೊಡಿಸಿದ್ದರು. ಈಗ ಚೇತರಿಸಿಕೊಂಡು ಚಿತ್ರಗಳಲ್ಲಿ ಸಹ ನಟಿಸುತ್ತಿದ್ದಾರೆ.
ಶಿವರಾಜ್ ಕುಮಾರ್ ಸಹಾ ಹಿಂದೊಮ್ಮೆ ಜಿಮ್ ಮಾಡುವಾಗ ಅಸ್ವಸ್ಥಗೊಂಡಿದ್ದರು.. ಆದರೆ ಹೆಚ್ಚಿನ ಸಮಸ್ಯೆ ಏನು ಆಗಲಿಲ್ಲ ಈಗ ಶಿವಣ್ಣ ಫಿಟ್ ಅಂಡ್ ಪೈನ್ ಆಗಿದ್ದಾರೆ.
ಆದರೆ ನಿನ್ನೆ ಪುನಿತ್ ಅವರು ಜಿಮ್ ನಲ್ಲಿ ಕಸರತ್ತು ಮಾಡುವಾಗ ಎದೆಯಲ್ಲಿ ನೋವು ಕಾಣಿಸಿಕೊಂಡಿದೆ. ಭಾರಿ ಹೃದಯಾಘಾತವಾಗಿದ್ದು ಅವರನ್ನ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ..ಇದೆಲ್ಲ ನೋಡಿದಾಗ ರಾಜ್ ಕುಟುಂಬಕ್ಕೆ ವ್ಯಾಯಾಮ ಶಾಲೆಯೇ ಕಂಟಕವಾಯ್ತಾ ? ಎನ್ನುವ ಪ್ರಶ್ನೆ ಕಾಡುತ್ತದೆ.
ಇನ್ನೂ ಇದರ ಬಗ್ಗೆ ಅನಂತ್ ನಾಗ್ ಸಹಾ ಮಾತನಾಡಿ ಜಿಮ್ ಮಾಡುವ ನಟರಿಗೆ ಸಲಹೆಯನ್ನ ಕೊಟ್ಟಿದ್ದಾರೆ.
ದೈಹಿಕವಾಗಿ ಶಕ್ತಿಶಾಲಿಯಾಗಿರಬೇಕೆಂಬುದು ಎಲ್ಲ ನಟರ ಬಯಕೆ ಅದಕ್ಕೆ ನನ್ನ ವಿರೋಧವಿಲ್ಲ ದರೆ ಚಿಕ್ಕ ವಯಸ್ಸಲ್ಲಿ ಹೀಗೆ ಆಗುವುದು ದುರಂತ. ನಟ ನಟಿಯರ ಮೇಲೆ ಸಾಕಷ್ಟು ಒತ್ತಡಗಲಿರುತ್ತವೆ.ಜಿಮ್ ಕಸರತ್ತು ಮಾಡುವ ನಟರು 6 ತಿಂಗಳಿಗೊಮ್ಮೆ ವೈದ್ಯರ ಬಳಿ ಪರಿಕ್ಷಿಸಿಕೊಳ್ಳುತ್ತಿರಬೇಕು. ಬಿ.ಪಿ ಪಲ್ಸ್ ರೇಟ್ ಇ ಸಿ ಜಿ ಮಾಡಿಸಿಕೊಳ್ಳುತ್ತಿರಬೇಕು ಎಂದು ಅನಂತನಾಗ್ ಅಭಿಪ್ರಾಯ ಪಟ್ಟರು.