ADVERTISEMENT
Wednesday, August 5, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಟೀಮ್ ಇಂಡಿಯಾ ಗರ್ಭಗುಡಿಯಿಂದ ಹೊರ ಬಂದ ಚೌಕಿದಾರ..!

admin by admin
August 16, 2020
in Newsbeat, Sports, ಕ್ರೀಡೆ
Share on FacebookShare on TwitterShare on WhatsappShare on Telegram

ಟೀಮ್ ಇಂಡಿಯಾ ಗರ್ಭಗುಡಿಯಿಂದ ಹೊರ ಬಂದ ಚೌಕಿದಾರ..!

ಮಹೇಂದ್ರ ಸಿಂಗ್ ಧೋನಿ ಯಾವಾಗ ನಿವೃತ್ತರಾಗುತ್ತಾರೆ..? ಇದು ಕಳೆದ ಒಂದು ವರ್ಷದಿಂದ ಚರ್ಚೆಯಾಗುತ್ತಿದ್ದ ವಿಚಾರ. ಇದಕ್ಕೆ ಧೋನಿ ಸಿಂಪಲ್ ಆಗಿ ಉತ್ತರ ನೀಡಿದ್ದಾರೆ. ಆಗಸ್ಟ್ 15, ರಾತ್ರಿ ಗಂಟೆ 17.29ರ ನಂತರ ಇದ್ರ ಬಗ್ಗೆ ಚರ್ಚೆ ಬೇಡ. ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಕ್ಕಿಯಾಗಿದೆ ಎಂಬ ರೀತಿಯಲ್ಲೇ ಧೋನಿ ತನ್ನ ನಿವೃತ್ತಿಯನ್ನು ಇನ್‍ಸ್ಟಾಗ್ರಾಂ ಖಾತೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ನಿಮ್ಮ ಪ್ರೀತಿಗೆ ಮತ್ತು ಬೆಂಬಲಕ್ಕೆ ಧನ್ಯವಾದಗಳು.. 1729ರಿಂದ ನನ್ನನ್ನು ನಿವೃತ್ತನೆಂದು ಪರಿಗಣಿಸಿ… ಹಾಗಂತ ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ತನ್ನ ಸಂತೃಪ್ತಿಯ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದಾರೆ.
ಅಂದ ಹಾಗೇ ಧೋನಿ ಎಲ್ಲರಿಗೂ ಗೊತ್ತು.. ಆದ್ರೆ ಧೋನಿ ಏನು ಯಾರು ಎಂಬುದು ಮಾತ್ರ ಅವರಿಗೆ ಮಾತ್ರ ಗೊತ್ತು. ಯಾಕಂದ್ರೆ ಧೋನಿಯನ್ನು ಅರ್ಥ ಮಾಡಿಕೊಳ್ಳುವುದು ಅಂದುಕೊಂಡಷ್ಟು ಸುಲಭವಿಲ್ಲ. ನಿಗೂಢ ಹೆಜ್ಜೆಯ ಮೂಲಕ ಎದುರಾಳಿ ಆಟಗಾರರನ್ನು ದಂಗಬಡಿಸುವ ಧೋನಿ ವಿಶ್ವ ಕ್ರಿಕೆಟ್ ನ ಚಾಣಕ್ಯ. ಪಂದ್ಯದ ಗತಿಯನ್ನು ಕ್ಷಣ ಮಾತ್ರದಲ್ಲಿ ಅರಿತುಕೊಂಡು ಅದಕ್ಕೆ ತಕ್ಕಂತೆ ಪ್ಲಾನ್ ಮಾಡುವ ಮಾಸ್ಟರ್ ಮೈಂಡ್ ಧೋನಿಯವರದ್ದು. ಧೋನಿ ತೆಗೆದುಕೊಳ್ಳುವ ಪ್ರತಿಯೊಂದು ವಿಷ್ಯದಲ್ಲೂ ಒಂದೊಂದು ವಿಶೇಷತೆ ಇರುತ್ತೆ. ಹೀಗಾಗಿಯೇ ಧೋನಿ ಎಲ್ಲರಿಗಿಂತ ಡಿಫರೆಂಟ್. ಇದೀಗ ತನ್ನ ನಿವೃತ್ತಿಯನ್ನು ಡಿಫರೆಂಟ್ ಆಗಿಯೇ ಹೇಳಿದ್ದಾರೆ.
1976ರಲ್ಲಿ ಅಮಿತಾಬ್ ಬಚ್ಚನ್ ಅಭಿನಯದ ಕಭೀ.. ಕಭೀ..ಚಿತ್ರದ ಮೈನೆ ಪಾಲ್ ದೋ ಪಾಲ್ ಕಾ ಶಾಯಾರ್ ಹೂ.. ಪಾಲ್ ದೋ ಪಾಲ್ ಮೇರಿ ಕಹಾನಿ ಹೈನ್ ಹಾಡಿಗೆ ತನ್ನ ಕ್ರಿಕೆಟ್ ಬದುಕಿನ ಅಮೂಲ್ಯ ಕ್ಷಣಗಳ ಫೋಟೋಗಳನ್ನು ಹಾಕೊಂಡು ಇನ್‍ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡು ತನ್ನ ವಿದಾಯದ ಪದಗಳನ್ನು ಬರೆದುಕೊಂಡಿದ್ದಾರೆ.
ಕಭೀ.. ಕಭೀ..ಚಿತ್ರದ ಮೈನೆ ಪಾಲ್ ದೋ ಪಾಲ್ ಕಾ ಶಾಯಾರ್ ಹೂ.. ಪಾಲ್ ದೋ ಪಾಲ್ ಮೇರಿ ಕಹಾನಿ ಹೈನ್ ಹಾಡು ಧೋನಿಯವರ ಅಚ್ಚುಮೆಚ್ಚಿನ ಹಾಡು. ಹೀಗಾಗಿ ತನ್ನ ಕ್ರಿಕೆಟ್ ಬದುಕಿನಲ್ಲಿ ಮರೆಯಲಾಗದ ಕ್ಷಣಗಳನ್ನು ಈ ಹಾಡಿನ ಮೂಲಕ ಹೇಳಿಕೊಂಡಿದ್ದಾರೆ. ಹಾಡಿನಲ್ಲಿ ಕವಿ ತನ್ನ ಬಗ್ಗೆ ಹೇಳಿಕೊಂಡಿದ್ರೂ ಧೋನಿ ಅದಕ್ಕೆ ಕ್ರಿಕೆಟ್ ಸ್ಪರ್ಶ ನೀಡಿದ್ದಾರೆ.
ಹಾಡಿನಲ್ಲಿ ನಾನು ಒಂದು ಕ್ಷಣ ಅಥವಾ ಎರಡು ಕ್ಷಣದ ಕವಿ ಅಂತಿದ್ರೆ, ಧೋನಿಯೂ ಅಷ್ಟೇ,, ನಾನು ಒಂದು ಕ್ಷಣ ಅಥವಾ ಎರಡು ಕ್ಷಣದ ಕ್ರಿಕೆಟಿಗ ಎಂದು ಬಿಂಬಿಸಿಕೊಂಡಿದ್ದಾರೆ. ಇಲ್ಲಿ ಪ್ರತಿ ಕ್ಷಣಗಳನ್ನು ಒಂದೊಂದು ವರ್ಷ ಎಂದು ಪರಿಗಣಿಸಬಹುದು. ನನ್ನ ಕಥೆ, ನನ್ನ ಅಸ್ತಿತ್ವ, ನನ್ನ ಯೌವನ ಒಂದು ಅಥವಾ ಎರಡು ಕ್ಷಣ ಮಾತ್ರವಿರುತ್ತದೆ. ಅದೇ ರೀತಿ ಕ್ರಿಕೆಟಿಗನ ಬದುಕು ಕೂಡ. ಕ್ರಿಕೆಟಿಗರ ಸಾಧನೆ ಒಂದು ಕಥೆಯಾಗಿ ಅನೇಕರಿಗೆ ಸ್ಪೂರ್ತಿಯಾಗುತ್ತದೆ. ಹಾಗೇ ಧೋನಿಯ ಬದುಕಿನ ಕಥೆಯೂ ಹಾಗೇ ಇದೆ. ಅನೇಕ ಕ್ರಿಕೆಟಿಗರಿಗೆ ಇದು ಮಾದರಿಯಾಗಬಹುದು.
ಇನ್ನು ತಂಡದಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ಸಾಕಷ್ಟು ಹೋರಾಟ ನಡೆಸಬೇಕಾಗುತ್ತದೆ. ಯೌವನ ಇದ್ದಾಗ ಎಲ್ಲಾ ಸಂಘರ್ಷಗಳನ್ನು ಮೆಟ್ಟಿ ನಿಲ್ಲಬಹುದು. ಆದ್ರೆ ನನಗೆ ಈಗ ವಯಸ್ಸಾಗಿದೆ. ಮನಸ್ಸು ಕ್ರಿಕೆಟ್ ಆಡಬೇಕು ಅಂತ ಹೇಳುತ್ತಿದ್ರೂ ದೇಹ ಸ್ಪಂದಿಸುತ್ತಿಲ್ಲ. ಹೀಗಾಗಿ ನನ್ನ ನಿರ್ಧಾರವನ್ನು ತಿಳಿಸುತ್ತೇನೆ ಎಂದು ಧೋನಿಯು ಈ ಹಾಡನ್ನು ಕೇಳುತ್ತಾ ತನ್ನ ನಿರ್ಧಾರವನ್ನು ಪ್ರಕಟಿಸಿರಬಹುದು.
ಅನೇಕ ಕ್ರಿಕೆಟಿಗರು ಧೋನಿ ಮುಂದೆ ಬಂದಿದ್ದಾರೆ. ಹಾಗೇ ಕೆಲವರು ತೆರೆಮರೆಗೆ ಸರಿದ್ರು. ವಿದಾಯ ಹೇಳಿದಾಗ ಕಣ್ಣೀರು ಹಾಕಿದ್ದಾರೆ. ಇನ್ನು ಕೆಲವರು ಆಡುತ್ತಿದ್ದಾರೆ. ನಾನು ಇಷ್ಟು ದಿನ ನಿಮ್ಮ ಭಾಗವಾಗಿದ್ದೆ. ಈ ಕ್ಷಣದಿಂದ ನಾನು ಬೇರ್ಪಡುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಅನೇಕ ಕ್ರಿಕೆಟಿಗರು ಬರಲಿದ್ದಾರೆ. ಅದ್ರಲ್ಲಿ ನನಗಿಂತ ಚೆನ್ನಾಗಿ ಆಡುವವರು ಇರುತ್ತಾರೆ. ಹಾಗೇ ನನ್ನನ್ನು ನೆನಪಿಸಿಕೊಳ್ಳಬಹುದು ಎಂದು ನಾನು ಅಂದುಕೊಂಡಿದ್ದೇನೆ. ಟೀಮ್ ಇಂಡಿಯಾದಲ್ಲಿ ನನ್ನ ಸಮಯವನ್ನು ವ್ಯರ್ಥ ಮಾಡುವುದಿಲ್ಲ. ಹೊಸಬರಿಗೆ ಅವಕಾಶ ಸಿಗುತ್ತದೆ. ಅದಕ್ಕಾಗಿಯೇ ಈ ನನ್ನ ನಿರ್ಧಾರವನ್ನು ಹೇಳಿದ್ದೇನೆ. ಈಗ ನಾನು ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಎಂದು ಧೋನಿ ಈ ಹಾಡಿನ ಮೂಲಕ ತನ್ನ ಮನದಾಳದ ಮಾತುಗಳನ್ನು ಹೇಳಿಕೊಂಡಿದ್ದಾರೆ.

Related posts

ರಾಜೀನಾಮೆ ನೀಡಲು ಸಿಎಂ ಸೂಚನೆ: ಸಭಾಪತಿ ಸ್ಥಾನಕ್ಕೆ ಅವಮಾನ ಎಂದು ಗುಡುಗಿದ ಬಸವರಾಜ್ ಹೊರಟ್ಟಿ

ರಾಜೀನಾಮೆ ನೀಡಲು ಸಿಎಂ ಸೂಚನೆ: ಸಭಾಪತಿ ಸ್ಥಾನಕ್ಕೆ ಅವಮಾನ ಎಂದು ಗುಡುಗಿದ ಬಸವರಾಜ್ ಹೊರಟ್ಟಿ

August 5, 2026
‘ಮೋದಿ ನನ್ನ ಉತ್ತಮ ಸ್ನೇಹಿತರಲ್ಲಿ ಒಬ್ಬರು’: ನೆತನ್ಯಾಹು

‘ಮೋದಿ ನನ್ನ ಉತ್ತಮ ಸ್ನೇಹಿತರಲ್ಲಿ ಒಬ್ಬರು’: ನೆತನ್ಯಾಹು

August 5, 2026

ಅದೇನೇ ಇರಲಿ, ವಿಶ್ವ ಕ್ರಿಕೆಟ್ ನಲ್ಲಿ ಧೋನಿ ಯುಗ ಮುಗಿದಿದೆ. ಆದ್ರೆ ತನ್ನ ಕಟ್ಟ ಕಡೆಯ ಆಸೆಯೊಂದು ಈಡೇರಲಿಲ್ಲ. 2020ರ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಆಡುವ ಅವಕಾಶವನ್ನು ಕೋವಿಡ್ 19 ಸೋಂಕು ಕಸಿದುಕೊಂಡಿತ್ತು. ಆದ್ರೆ ಸಿಎಸ್‍ಕೆ ಪರ ಐಪಿಎಲ್ ನಲ್ಲಿ ಆಡುತ್ತಿದ್ದಾರೆ. ಬಹುಶಃ ಇದು ಧೋನಿಯವರ ಕೊನೆಯ ಐಪಿಎಲ್ ಟೂರ್ನಿಯಾದ್ರೂ ಆಗಬಹುದು.
ಈ ನಡುವೆ ಧೋನಿ ಕೃಷಿಯತ್ತ ಕೂಡ ಗಮನ ಹರಿಸುತ್ತಿದ್ದಾರೆ. ಕೋವಿಡ್ ಸೋಂಕು ಮತ್ತು ಲಾಕ್ ಡೌನ್ ಸಮಯದಲ್ಲಿ ಧೋನಿ ತನ್ನ ಫಾರ್ಮ್ ಹೌಸ್ ನಲ್ಲಿ ಸಾವಯವ ಕೃಷಿ ಮಾಡುತ್ತಿದ್ದರು. ಅಲ್ಲದೆ ರೈತರಿಗೆ ನೆರವಾಗಲು ಸಾವಯವ ಗೊಬ್ಬರವನ್ನು ತಯಾರು ಮಾಡುವ ಕಂಪೆನಿಯನ್ನು ಶುರು ಮಾಡಿದ್ದಾರೆ.
ಮತ್ತೊಂದೆಡೆ ಸೇನೆಯ ಲೆಫ್ಟಿನೆಂಟ್ ಕರ್ನಲ್ ಕೂಡ ಆಗಿದ್ದಾರೆ. ಸೇನೆ ಮತ್ತು ಸೈನಿಕರ ಬಗ್ಗೆ ಅಪಾರ ಗೌರವವನ್ನಿಟ್ಟುಕೊಂಡಿರುವ ಧೋನಿಯ ಮುಂದಿನ ನಡೆ ಕೂಡ ನಿಗೂಢವಾಗಿದೆ.
ಕೊನೆಯದಾಗಿ ಸರಿ ಸುಮಾರು 16 ವರ್ಷಗಳಿಂದ ಕ್ರಿಕೆಟ್ ಅಭಿಮಾನಿಗಳಿಗೆ ತನ್ನ ಬ್ಯಾಟಿಂಗ್ ವೈಖರಿಯ ಮೂಲಕ ರಂಜಿಸಿದ್ದ ಧೋನಿಗೆ ಸಲಾಂ..

Tags: bcciDHONIICCMahendra Singh DhoniMS DhoniSachin TendulkarSuresh Rainateam indiavirat kohli
ShareTweetSendShare
Join us on:

Related Posts

ರಾಜೀನಾಮೆ ನೀಡಲು ಸಿಎಂ ಸೂಚನೆ: ಸಭಾಪತಿ ಸ್ಥಾನಕ್ಕೆ ಅವಮಾನ ಎಂದು ಗುಡುಗಿದ ಬಸವರಾಜ್ ಹೊರಟ್ಟಿ

ರಾಜೀನಾಮೆ ನೀಡಲು ಸಿಎಂ ಸೂಚನೆ: ಸಭಾಪತಿ ಸ್ಥಾನಕ್ಕೆ ಅವಮಾನ ಎಂದು ಗುಡುಗಿದ ಬಸವರಾಜ್ ಹೊರಟ್ಟಿ

by Shwetha
August 5, 2026
0

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಸಂಘರ್ಷಕ್ಕೆ ವೇದಿಕೆ ಸಿದ್ಧವಾಗಿದ್ದು, ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅವರಿಗೆ ಮುಖ್ಯಮಂತ್ರಿಗಳು ದೂರವಾಣಿ ಕರೆ ಮಾಡಿ ರಾಜೀನಾಮೆ ನೀಡುವಂತೆ ಸೂಚಿಸಿರುವುದು...

‘ಮೋದಿ ನನ್ನ ಉತ್ತಮ ಸ್ನೇಹಿತರಲ್ಲಿ ಒಬ್ಬರು’: ನೆತನ್ಯಾಹು

‘ಮೋದಿ ನನ್ನ ಉತ್ತಮ ಸ್ನೇಹಿತರಲ್ಲಿ ಒಬ್ಬರು’: ನೆತನ್ಯಾಹು

by Shwetha
August 5, 2026
0

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಭಾರತ-ಇಸ್ರೇಲ್ ಸಂಬಂಧವನ್ನು ಮತ್ತಷ್ಟು ಬಲಪಡಿಸುವ ಬದ್ಧತೆಯನ್ನು ವ್ಯಕ್ತಪಡಿಸಿದ್ದು, ಪ್ರಧಾನಿ ನರೇಂದ್ರ ಮೋದಿ ತಮ್ಮ ಅತ್ಯುತ್ತಮ ಸ್ನೇಹಿತರಲ್ಲಿ ಒಬ್ಬರು ಎಂದು ಹೇಳಿದ್ದಾರೆ....

ಕಾವೇರಿ ವಿವಾದ: ರಾಜ್ಯಕ್ಕೆ ಅನ್ಯಾಯವಾಗಲು ಬಿಡಲ್ಲ – ಸಿಎಂ ಡಿಕೆಶಿ

ರಾಜೀನಾಮೆ ನೀಡುವ ಶಾಸಕರಿಗೆ ಸಿಎಂ ಡಿಕೆಶಿ ಖಡಕ್ ಎಚ್ಚರಿಕೆ

by Shwetha
August 5, 2026
0

ನೂತನ ಸಚಿವ ಸಂಪುಟ ರಚನೆಯ ಬಳಿಕ ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಕೆಲವು ಹಿರಿಯ ಶಾಸಕರ ಅಸಮಾಧಾನದ ನಡುವೆ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಖಡಕ್ ಸಂದೇಶ ರವಾನಿಸಿದ್ದಾರೆ....

ಅಧಿಕಾರ ಸಿಕ್ಕಾಗ ಮಾತ್ರ ಪಕ್ಷ ಬೇಕೆನ್ನುವುದು ಸರಿಯಲ್ಲ: ಅತೃಪ್ತ ಶಾಸಕರಿಗೆ ಸಿದ್ಧಾಂತದ ಪಾಠ ಮಾಡಿದ ಎಚ್ ಸಿ ಮಹದೇವಪ್ಪ

ಅಧಿಕಾರ ಸಿಕ್ಕಾಗ ಮಾತ್ರ ಪಕ್ಷ ಬೇಕೆನ್ನುವುದು ಸರಿಯಲ್ಲ: ಅತೃಪ್ತ ಶಾಸಕರಿಗೆ ಸಿದ್ಧಾಂತದ ಪಾಠ ಮಾಡಿದ ಎಚ್ ಸಿ ಮಹದೇವಪ್ಪ

by Shwetha
August 5, 2026
0

ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಸಚಿವ ಸ್ಥಾನ ಸಿಗದ ಕಾರಣಕ್ಕೆ ಅಸಮಾಧಾನಗೊಂಡು ಶಾಸಕ ಸ್ಥಾನ ಹಾಗೂ ಪಕ್ಷಕ್ಕೆ ರಾಜೀನಾಮೆ ನೀಡಲು ಮುಂದಾಗಿರುವ ನಾಯಕರಿಗೆ ಹಿರಿಯ ಮುಖಂಡ, ಮಾಜಿ ಸಚಿವ...

ದೇಶದ ಸಿರಿವಂತ ಮುಖ್ಯಮಂತ್ರಿಗಳ ಪಟ್ಟಿ ಬಿಡುಗಡೆ: 1413 ಕೋಟಿ ಒಡೆಯ ಡಿ ಕೆ ಶಿವಕುಮಾರ್ ನಂಬರ್ 1, ಜಮ್ಮು ಕಾಶ್ಮೀರದ ಒಮರ್ ಅಬ್ದುಲ್ಲಾ ಅತೀ ಬಡ ಸಿಎಂ

ಶಿಸ್ತು ಮೀರಿದರೆ ಮುಂದಿನ ಚುನಾವಣೆಗೆ ಟಿಕೆಟ್ ಕಟ್- ಬಂಡಾಯ ಎದ್ದರೆ 2 ನಿಮಿಷದಲ್ಲಿ ರಾಜೀನಾಮೆ ಓಕೆ: ಬ್ಲಾಕ್‌ಮೇಲ್ ತಂತ್ರಕ್ಕೆ ಡಿ ಕೆ ಶಿವಕುಮಾರ್ ಖಡಕ್ ಎಚ್ಚರಿಕೆ

by Shwetha
August 5, 2026
0

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆಯ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಎದ್ದಿರುವ ಅಸಮಾಧಾನದ ಕಿಚ್ಚನ್ನು ಆರಿಸಲು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಅತ್ಯಂತ ಕಠಿಣ ನಿಲುವು ತಳೆದಿದ್ದಾರೆ. ಸಂಪುಟದಲ್ಲಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram