ಭಾರತದ ವಿಶೇಷ ಭದ್ರತಾ ಪಡೆ ಪ್ಯಾರಾ ಕಮಾಂಡೋಗಳ ತರಬೇತಿ ಎಷ್ಟು ಭಯಾನಯಕ ಅನ್ನೋದನ್ನ ನೀವು ತಿಳಿಯಲೇಬೇಕು..!
ಸಾಮಾನ್ಯರನ್ನು ಸೈನಿಕರನ್ನಾಗಿ ಮಾಡುವ ಅವಧಿ ರೋಚಕ. ಸರಿಯಾಗಿ ಊಟ ನಿದ್ರೆಯನ್ನೂ ಮಾಡದೇ ಮಾನಸಿಕವಾಗಿ, ದೈಹಿಕವಾಗಿ ಹೈರಾಣಾದರೂ ದೇಶರಕ್ಷಣೆಗೆ ಎದೆ ಸೆಟೆದು ನಿಲ್ಲುವಂತೆ ಮಾಡುವ ತರಬೇತಿ ಹೇಗಿರುತ್ತದೆ ಎಂಬುದು ಬಹುತೇಕರಿಗೆ ತಿಳಿದಿಲ್ಲ.
ದೇಶಾದ್ಯಂತ ಸೈನಿಕರನ್ನು ಮಾನಸಿಕ ಮತ್ತು ದೈಹಿಕವಾಗಿ ಹುರಿಗೊಳಿಸಲೆಂದೇ ತರಬೇತಿ ಕೇಂದ್ರಗಳಿವೆ. ಸಾಮಾನ್ಯನೊಬ್ಬ ಸೈನಿಕನಾಗುವ ಹಾದಿ ಸಾಕಷ್ಟು ರೋಚಕತೆಯಿಂದ ಕೂಡಿರುತ್ತದೆ. ಅದರಲ್ಲೂ ವಿಶೇಷ ಭದ್ರತಾ ಪಡೆ ಪ್ಯಾರಾ ಕಮಾಂಡೋಗಳನ್ನು ತರಬೇತಿಗೊಳಿಸುವ ಬಗ್ಗೆ ನೀವು ತಿಳಿಯಲೇಬೇಕು.
ನಾವೆಲ್ಲ ಬೆಚ್ಚನೆಯ ನಿದ್ದೆಯ ಸುಖ ಅನುಭವಿಸುವಾಗ ಈ ಧೀರರು ತರಬೇತಿಗಾಗಿ ಮೈದಾನಕ್ಕಿಳಿದಿರುತ್ತಾರೆ. ಮಧ್ಯರಾತ್ರಿ ೨ ಗಂಟೆಗೆಲ್ಲಾ ಇವರ ದಿನಚರಿ ಆರಂಭವಾಗುತ್ತದೆ. ತರಬೇತುದಾರರು ನೀಡುವ ಒಂದೇ ಒಂದು ಕೂಗಿಗೆ ಅಚ್ಚುಕಟ್ಟಾಗಿ ಸಮವಸ್ತ್ರ ಧರಿಸಿ ಕೆಲವೇ ನಿಮಿಷಗಳಲ್ಲಿ ತರಬೇತಿಗೆ ಹಾಜರಾಗಬೇಕು.
‘RAW’ ರಣಧೀರರು..!! ಮಣ್ಣಲ್ಲಿ ಮಣ್ಣಾದ್ರೂ ದೇಶದ ಸೀಕ್ರೆಟ್ ಬಿಟ್ಟುಕೊಡದ ನಿಸ್ಸೀಮರು… ‘RAW’ ಬಗ್ಗೆ ಇಂಟರೆಸ್ಟಿಂಗ್ ಮಾಹಿತಿ..!
ಹೀಗೆ ಮಾಡದವರಿಗೆ ತರಬೇತುದಾರರು ಕಠಿಣ ಶಿಕ್ಷೆ ವಿಧಿಸುತ್ತಾರೆ. ಯಾಕೆಂದರೆ ಕೇವಲ ೩೬ ತಾಸುಗಳಲ್ಲಿ ತರಬೇತುದಾರಿ ಅಧಿಕಾರಿಗಳು ಪ್ಯಾರಾ ಕಮಾಂಡೋಗಳನ್ನು ತಯಾರು ಮಾಡುವ ಜವಾಬ್ದಾರಿ ಹೊಂದಿರುತ್ತಾರೆ. ಈ ಅವಧಿಯಲ್ಲಿ ಅವರಿಗೆ ಸಾಕಷ್ಟು ಪ್ರಮಾಣದಲ್ಲಿ ಮಾನಸಿಕ ಮತ್ತು ದೈಹಿಕ ಒತ್ತಡ ಹೇಳಲಾಗುತ್ತದೆ.
ಇದೇ ಕಾರಣಕ್ಕೆಂದೇ ಸಾಕಷ್ಟು ಜನ ಅರ್ಧಕ್ಕೆ ತರಬೇತಿಯಿಂದ ಹೊರನಡೆಯುತ್ತಾರೆ. ಬೆನ್ನಿಗೆ ೨೦-೩೦ ಕಿಲೋ ತೂಕ ಕಟ್ಟಿಕೊಂಡು ತರಬೇತುದಾರರು ನೀಡುವ ದೂರವನ್ನು ಕ್ರಮಿಸುವುದು ಸುಲಭ ಅಲ್ಲವೇ ಅಲ್ಲ. ಇದಾದ ಬಳಿಕ ಒಬ್ಬರನ್ನೊಬ್ಬರು ಹೊತ್ತುಕೊಂಡು ನಡೆಯುವುದು, ಶಸ್ತ್ರಾಸ್ತ್ರಗಳನ್ನು ಹಿಡಿದು ತೆವಳುವುದು, ಮರದ ಕೊಂಬೆಗಳನ್ನು ಹೊತ್ತು ಸಾಗುವುದು, ಅತಿ ತಂಪು ನೀರಿನಲ್ಲಿ ಧುಮುಕಿ ಸರ್ವೈವ್ ಆಗುವುದು, ಒಂದು ಹನಿ ನೀರು ಸೇವೆಸದೇ ೧೪ ತಾಸುಗಳ ಕಾಲಈ ಎಲ್ಲ ಕಸರತ್ತನ್ನು ಪ್ಯಾರಾ ಕಮಾಂಡೋಗಳಾಗ ಬಯಸುವ ಸೈನಿಕರು ಮಾಡಬೇಕು.
ಈ ಎಲ್ಲ ಕಠಿಣ ತರಬೇತಿಯ ನಂತರವಷ್ಟೇ ಸೈನಿಕರು ಪ್ಯಾರಾ ಕಮಾಂಡೋಗಳಾಗುತ್ತಾರೆ. ಇಷ್ಟೆಲ್ಲ ಪರಿಶ್ರಮ ಪಟ್ಟು ಜೀವದ ಹಂಗು ತೊರೆದು ನಮ್ಮ ನೆಮ್ಮದಿಗಾಗಿ ಹೋರಾಡುವ ಪ್ಯಾರಾ ಕಮಾಂಡೋ ಗಳಿಗೆ ಅದೆಷ್ಟು ಕೃತಜ್ಞತೆ ಸಲ್ಲಿಸಿದರೂ ಕಡಿಮೆಯೇ…..