ಭಾರತದ ಮಾರ್ಕೊಸ್ ಕಮಾಂಡೋ ಪಡೆಯ ಭಯಾನಕ ತರಬೇತಿ ಬಗ್ಗೆ ನಿಮಗೆಷ್ಟು ಗೊತ್ತು…!

1 min read

ನಾವುನೆಮ್ಮದಿಯಿಂದ ಇರಲು ನಮ್ಮ ದೇಶದ ಭದ್ರತಾ ಪಡೆಗಳು ಬಹುಮುಖ್ಯ ಪಾತ್ರ ವಹಿಸುತ್ತವೆ. ಅದರಲ್ಲೂ ದೇಶದ ವಿಶೇಷ ಭದ್ರತಾ ಪಡೆಗಳ ಕಾರ್ಯ ಮೈ ನವಿರೇಳುವಂತೆ ಮಾಡುತ್ತದೆ.

ಇಂಥದ್ದೇ ವಿಶೇಷ ಭದ್ರತಾ ಪಡೆಗಳಲ್ಲೊಂದು ಮಾರ್ಕೊಸ್ ಕಮಾಂಡೋ ಫೋರ್ಸ್, ಈ ಪಡೆಯು ಭಯಾನಕವಾದ ಪಡೆಗಳಲ್ಲಿ ಒಂದಾಗಿದೆ. ಮಾರ್ಕೊಸ್ ಪಡೆ ಆಧುನಿಕ ರೀತಿಯ ಎಲ್ಲ ತರಬೇತಿಯನ್ನೂ ಹೊಂದಿವೆ. ಮಾರ್ಕೊಸ್ ಫೋರ್ಸ್ ನಲ್ಲಿ ಸೇರುವುದು ಸುಲಭವಾದ ಕೆಲಸವಲ್ಲ.

ಏಕೆಂದರೆ ಇದರ ತರಬೇತಿ ಜಗತ್ತಿನಲ್ಲಿ ಎಲ್ಲ ತರಬೇತಿಗಳಿಗಿಂತ ತುಂಬಾ ಭಯಾನಕವಾಗಿದೆ. ಇಲ್ಲಿ ಕಮಾಂಡೋಗಳಿಗೆ ಮಾನಸಿಕ ಮತ್ತು ಶಾರೀರಿಕ ಕ್ರೂರತೆಗೆ ಹೆಚ್ಚು ಒತ್ತು ನೀಡಿ ತರಬೇತಿ ನೀಡಲಾಗುತ್ತೆ. ಇದರಿಂದ ಎಂಥ ಕಠಿಣ ಪರಿಸ್ಥಿತಿ ಬಂದರೂ ಮುನ್ನುಗ್ಗುವ ಮನಸ್ಸು ಕಮಾಂಡೋಗಳಿಗೆ ಸಾಧ್ಯವಾಗುತ್ತದೆ.

ಇದು ಭಾರತದ ವಿಶೇಷವಾದ ಮತ್ತು ಶಕ್ತಿಶಾಲಿ ಪಡೆಯಾಗಿದೆ. ಮಾರ್ಕೋಸ್ ಫೋರ್ಸ್ ಭಾರತೀಯ ನೌಕಾಪಡೆಯ ವಿಶೇಷ ಭದ್ರತಾ ಪಡೆ. ಭಾರತದ ಹೆಮ್ಮೆಯ ಮಾರ್ಕೋಸ್ ಪಡೆ ವಿಶ್ವದ ೧೦ ವಿಶೇಷ ಭದ್ರತಾ ಪಡೆಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಈ ಪಡೆಯನ್ನು‌ ಮೊದಲು‌ ಮರೈನ್ ಕಮಾಂಡೋ ಎಂದು ಕರೆಯಲಾಗುತ್ತಿತ್ತು.

ದಿ ಫೆವ್ ದಿ ಫಿಯರ್ಲೆಸ್ ಎಂಬುದು ಮಾರ್ಕೋಸ್ ಪಡೆಯ ಧ್ಯೇಯವಾಕ್ಯ. ಅತಿ ಕಠಿಣ ತರಬೇತಿ ಪಡೆದ ಬಳಿಕವಷ್ಟೇ ಇವರನ್ನು ಸೇವೆಗೆ ನಿಯೋಜಿಸಲಾಗುತ್ತದೆ. ಮೈ‌ನವಿರೇಳಿಸುವ ಕಠಿಣ ತರಬೇತಿಯಲ್ಲಿ ಕೆಲವರು‌ ಮಾತ್ರ ಆಯ್ಕೆಯಾಗುತ್ತಾರೆ.

ಮಾರ್ಕೋಸ್ ಪಡೆಯ ಕಾರ್ಯಾಚರಣೆ ಗುಪ್ತವಾಗಿರುತ್ತದೆ. ಇನ್ನೂ ಅಚ್ಚರಿ ಎನಿಸುವ ವಿಚಾರವಂದ್ರೆ ಮಾರ್ಕೋಸ್ ಸೈನಿಕರ ಮನೆಯವರಿಗೆ ಸಹ ಅವರು ಮಾರ್ಕೋಸ್ ಪಡೆಯಲ್ಲಿರುವುದು ತಿಳಿದಿರುವುದಿಲ್ಲ.

ಮುಂಬೈ, ಕೊಚ್ಚಿನ್ ಮತ್ತು ವಿಶಾಖಪಟ್ಟಣಂ ಮತ್ತಯ ಪೋರ್ಟ್ ಬ್ಲೇರ್ ನಲ್ಲಿರುವ ಭಾರತೀಯ ನೌಕಾಸೇನೆಯ ನೆಲೆಯಲ್ಲಿ ಇವರು ನೆಲೆಸಿರುತ್ತಾರೆ. ಕಠಿಣ ಪರಿಸ್ಥಿತಿ ಎದುರಾದ ಕೆಲವೇ ನಿಮಿಷಗಳಲ್ಲಿ ಆ ಸ್ಥಳ ತಲುಪಿ ಪ್ರಾಣ ಪಣಕ್ಕಿಟ್ಟು ದೇಶಕ್ಕಾಗಿ ಹೋರಾಡುತ್ತಾರೆ. ಇವರು ಅದೆಷ್ಟರ ಮಟ್ಟಿಗೆ ಗಟ್ಟಿಗರಾಗಿರುತ್ತಾರೆಂದರೆ, ಇವರ ಕೈ ಕಾಲು ಕಟ್ಟಿ ಸಮುದ್ರಕ್ಕೆಸೆದರೂ ಕಟ್ಟು ಬಿಚ್ಚಿಕೊಂಡು ಕೆಲವೇ ಕ್ಷಣಗಳಲ್ಲಿ ಮೇಲಕ್ಕೆ ಬರುತ್ತಾರೆ.

ಇವರನ್ನು ಎಲ್ಲ ತರಹದ ಕಾರ್ಯಾಚರಣೆಗೆ ಬಳಸಲಾಗುತ್ತದೆ. ಮಾರ್ಕೋಸ್ ಪಡೆ ಪಾಲ್ಗೊಂಡ ಕಾರ್ಯಾಚರಣೆ ಫೇಲ್ ಆಗುವುದರಲ್ಲಿ ಛಾನ್ಸೇ ಇಲ್ಲ. ಈ ಪಡೆ ನಮ್ಮ ದೇಶದ ಹೆಮ್ಮೆ ಎಂದರೆ ತಪ್ಪಾಗಲಾರದು. ಇತ್ತೀಚೆಗಷ್ಟೇ ನಡೆದ ಭಾರತ-ಚೀನಾ ಗಡಿ ಗಲಾಟೆಯಲ್ಲಿ ಮಾರ್ಕೋಸ್ ಪಡೆಯನ್ನು ಪ್ಯಾಂಗಾಂಗ್ ಸರೋವರದ ಬಳಿ ನಿಯೋಜಿಸಲಾಗಿತ್ತು.

ಮುಂಬೈ ಭಯೋತ್ಪಾದನಾ ದಾಳಿ ಸೇರಿದಂತೆ ಬಹುತೇಕ ಕಡೆಗಳಲ್ಲಿ ಈ ಪಡೆ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದೆ. ಇನ್ನು ನಿಮಗೆ ಮಾರ್ಕೋಸ್ ಕಮಾಂಡೋ ಆಗಿ ದೇಶ ಸೇವೆ ಮಾಡುವ ಆಸೆಯಿದ್ದಲ್ಲಿ ಮೊದಲು ಭಾರತೀಯ ನೌಕಾಸೇನೆ ಸೇರಬೇಕು. ನಾಲ್ಕು ಹಂತಗಳಲ್ಲಿ ಮಾರ್ಕೋಸ್ ಕಮಾಂಡೋ ಆಯ್ಕೆ ನಡೆಯುತ್ತದೆ. ಮೊದಲ ಹಂತದಲ್ಲಿ ಆಪ್ಟಿಟ್ಯೂಡ್ ಮತ್ತು ಫಿಸಿಕಲ್ ಟೆಸ್ಟ್ ನಲ್ಲಿ ತೇರ್ಗಡೆಯಾಗಬೇಕು.

ಇದರಲ್ಲಿ ಆಯ್ಕೆಯಾದವರಿಗೆ ಎರಡನೇ ಹಂತದಲ್ಲಿ ಐದು ವಾರಗಳ ಕಠಿಣ ತರಬೇತಿ ಇರುತ್ತದೆ. ಈ ಹಂತದಲ್ಲಿ ಕೆಡೆಟ್ಗಳಿಗೆ ಕೇವಲ ೨-೩ ತಾಸು‌ ನಿದ್ರಿಸಲು ಅವಕಾಶ ನೀಡಿ ಕಠಿಣ ತರಬೇತಿ ನೀಡಲಾಗುತ್ತದೆ. ಈ ತರಬೇತಿಯನ್ನು ಯಶಸ್ವಿಯಾಗಿ ಪೂರೈಸುವ ಕೆಲವೇ ಕೆಡೆಟ್ ಗಳನ್ನು‌ ಮುಂದಿನ ಹಂತದ ತರಬೇತಿಗಾಗಿ ಕೊಚ್ಚಿನ್ ನಲ್ಲಿರುವ ಡೈವಿಂಗ್ ಸ್ಕೂಲ್ ಗೆ ಕಳಿಸಲಾಗುತ್ತದೆ.

ಇದಾದ ಬಳಿಕ ಶಸ್ತ್ರಾಸ್ತ್ರಗಳನ್ನು ಬಳಕೆ ಮಾಡುವುದರ ಬಗ್ಗೆಯೂ ತರಬೇತಿ ನೀಡಲಾಗುತ್ತದೆ. ನಂತರ ಭಾರತೀಯ ಭೂಸೇನೆಯಲ್ಲಿ ಪ್ಯಾರಾಶೀಟ್ ತರಬೇತಿಗಾಗಿ ಕಳಿಸಲಾಗುತ್ತದೆ. ಕೊನೆಗೆ ಜಂಗಲ್ ವಾರ್ ಟೆಕ್ನಿಕ್ಸ್ ಟ್ರೇನಿಂಗ್ ನೀಡಲಾಗುತ್ತದೆ. ಮೈ ಝುಂ‌ಎನ್ನಿಸುವ ಕಠಿಣ ತರಬೇತಿಯನ್ನು ಪಡೆದು ಪ್ರಾಣವನ್ನು ಪಣಕ್ಕಿಟ್ಟು ದೇಶಕ್ಕಾಗಿ ಹೋರಾಡುವ ಈ ವಿಶೇಷ ಭದ್ರತಾ ಪಡೆ ನಮ್ಮ ಹೆಮ್ಮೆ. ಮುಂದಿನ‌ಸಂಚಿಕೆಯಲ್ಲಿ ಮತ್ತೊಂದು ವಿಶೇಷ ಭದ್ರತಾ ಪಡೆಯ ಬಗ್ಗೆ ತಿಳಿಯೋಣ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd