ADVERTISEMENT
Monday, May 25, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

Siddaramaiah | ಪ್ರಧಾನಿಗಳೇ ಮನ್ ಕಿ ಬಾತ್ ಬಿಡಿ… ಮಹಿಳೆಯರಿಗೆ ಮೀಸಲಾತಿ ನೀಡಿ

Mahesh M Dhandu by Mahesh M Dhandu
August 20, 2022
in Newsbeat, Politics, ರಾಜಕೀಯ
Siddaramaiah

Siddaramaiah

Share on FacebookShare on TwitterShare on WhatsappShare on Telegram

ಪ್ರಧಾನಿಗಳೇ ಮನ್ ಕಿ ಬಾತ್ ಬಿಡಿ… ಮಹಿಳೆಯರಿಗೆ ಮೀಸಲಾತಿ ನೀಡಿ
ದಿ. ರಾಜೀವ್ ಗಾಂಧಿ ಮತ್ತು ದಿ. ಡಿ.ದೇವರಾಜ್ ಅರಸು ಜನ್ಮ ದಿನಾಚರಣೆ
ಪ್ರಜಾಪ್ರಭುತ್ವ, ಸಂವಿಧಾನ ಉಳಿದರೇ ನಾವು ಉಳಿಯುತ್ತೇವೆ : ಸಿದ್ದರಾಮಯ್ಯ

ಬೆಂಗಳೂರು : ಪ್ರಜಾಪ್ರಭುತ್ವ ಸಂವಿಧಾನಕ್ಕೆ ಇಂದು ಅಪಾಯ ಬಂದಿದೆ. ಇವೆರಡು ಉಳಿದರೆ ನಾವು ಉಳಿಯುತ್ತೇವೆ. ಇದಕ್ಕೆ ಕಾಂಗ್ರೆಸ್ ಬದ್ದವಾಗಿದ್ರೆ, ಬಿಜೆಪಿಯವರು ವಿರುದ್ಧವಾಗಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

Related posts

ಕೇಂದ್ರ ಮಾದರಿ ವೇತನ ಮತ್ತು OPS ಮರು ಜಾರಿ ಗ್ಯಾರಂಟಿ! ರಾಜ್ಯ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರದಿಂದ ಬಂಪರ್ ಕೊಡುಗೆ

ಕೇಂದ್ರ ಮಾದರಿ ವೇತನ ಮತ್ತು OPS ಮರು ಜಾರಿ ಗ್ಯಾರಂಟಿ! ರಾಜ್ಯ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರದಿಂದ ಬಂಪರ್ ಕೊಡುಗೆ

May 25, 2026
ಎಸ್‌ಬಿಐ ನೇಮಕಾತಿ: 7,150 ಹುದ್ದೆಗಳಿಗೆ ಅರ್ಜಿ ಆಹ್ವಾನ, ಪದವೀಧರರಿಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸುವರ್ಣಾವಕಾಶ!

ಎಸ್‌ಬಿಐ ನೇಮಕಾತಿ: 7,150 ಹುದ್ದೆಗಳಿಗೆ ಅರ್ಜಿ ಆಹ್ವಾನ, ಪದವೀಧರರಿಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸುವರ್ಣಾವಕಾಶ!

May 25, 2026

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಶನಿವಾರ ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿ ಮತ್ತು ಮಾಜಿ ಮುಖ್ಯಮಂತ್ರಿ ದಿ. ಡಿ.ದೇವರಾಜ್ ಅರಸು ಅವರ ಜನ್ಮ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಮಹಾತ್ಮ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಚಾಲನೆ ನೀಡಿದರು.

ex cm siddaramaiah-slams narendra modi Bangalore saaksha tv
ex cm siddaramaiah-slams narendra modi Bangalore saaksha tv

ಬಳಿಕ ರಾಜೀವ್ ಗಾಂಧಿ, ದೇವರಾಜ ಅರಸು ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ರಾಜೀವ್ ಗಾಂಧಿ ಚಿಕ್ಕ ವಯಸ್ಸಿನಲ್ಲಿ ದೇಶಸ ಪ್ರಧಾನಿ ಆದರು. ದೇಶವನ್ನು 21ನೇ ಶತಮಾನಕ್ಕೆ ತೆಗೆದುಕೊಂಡು ಹೋಗುವ ನಿರ್ಧಾರ ಮಾಡಿದರು. ವಿಜ್ಞಾನ, ತಂತ್ರಜ್ಞಾನ ಸಂಪರ್ಕ ಎಲ್ಲಾ ಕ್ಷೇತ್ರದಲ್ಲಿ ಬೆಳವಣಿಗೆಗೆ ಕಾರಣಕರ್ತರಾದರು. ಜಗತ್ತು ಭಾರತದತ್ತ ನೋಡುವಂತೆ ಮಾಡಿದರು. ಇತಿಹಾಸ ತಿಳಿದವರು ಮಾತ್ರ ಭವಿಷ್ಯ ನಿರ್ಮಾನ ಮಾಡಲು ಸಾಧ್ಯ. ಅದಕ್ಕೆ ಬಿಜೆಪಿ ದೇಶವನ್ನು ಇತಿಹಾಸವನ್ನು ತಿರುಚುತ್ತಿದ್ದಾರೆ. ಕುವೆಂಪು, ಅಂಬೇಡ್ಕರ್, ನಾರಾಯಣ ಗುರು, ಭಗತ್ ಸಿಂಗ್ ಸೇರಿದಂತೆ ಅನೇಕ ಜನರ ಚರಿತ್ರೆ ಬದಲಾವಣೆ ಪ್ರಯತ್ನ ಮಾಡುತ್ತಿದ್ದಾರೆ. ಅದಕ್ಕೆ ಯುವಕರು ಚರಿತ್ರೆಯನ್ನು ತಿಳಿದುಕೊಳ್ಳಬೇಕು. ಅವಾಗ ಸರಿಯಾದ ತೀರ್ಮಾನ ಭವಿಷ್ಯದಲ್ಲಿ ಮಾಡಲು ಸಾಧ್ಯ ಎಂದು ಹೇಳಿದರು.

ಇದೇ ವೇಳೆ ಜಾತಿ ಧರ್ಮದ ಹೆಸರಿನಲ್ಲಿ ಯುವಕರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ಆಗುತ್ತಿದೆ ಎಂದು ಆರೋಪಿಸಿದ ಸಿದ್ದರಾಮಯ್ಯ, ಈ ನಿಟ್ಟಿನಲ್ಲಿ ಯುವಕರು ವಿದ್ಯಾರ್ಥಿಗಳು ಇತಿಹಾಸ ಅರ್ಥ ಮಾಡಿಕೊಳ್ಳಬೇಕು. ಅದಕ್ಕಾಗಿ 21 ವರ್ಷಕ್ಕೆ ಇದ್ದ ಮತದಾನದ ವಯಸ್ಸನ್ನು 18 ಕ್ಕೆ ರಾಜೀವ್ ಗಾಂಧಿ ಇಳಿಸಿದರು ಎಂದು ವಿವರಿಸಿದರು.

ರಾಜೀವ್ ಗಾಂಧಿ ಸಂವಿಧಾನದಲ್ಲಿ 73, 74 ನೇ ತಿದ್ದುಪಡಿ ಮಾಡಿದರು. ಹಿಂದುಳಿದ ವರ್ಗದವರಿಗೆ ರಾಜಕೀಯ ಮೀಸಲಾತಿ ಇರಲಿಲ್ಲ, ಅವರಿಗೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ರಾಜಕೀಯದಲ್ಲಿ ಸಕ್ರಿಯವಾಗಿ ಭಾಗಿಯಾಗಲು ಸಾಧ್ಯವಾಯಿತು. ಹಿಂದುಳಿದ ವರ್ಗಗಳಿಗೆ 33% ಮೀಸಲಾತಿ ನೀಡಿದ್ದು ರಾಜೀವ್ ಗಾಂಧಿ ಕೊಡುಗೆ ಎಂದರು.

ex cm siddaramaiah-slams narendra modi Bangalore saaksha tv
ex cm siddaramaiah-slams narendra modi Bangalore saaksha tv

ಬಿಜೆಪಿಗೆ ಹಿಂದುಳಿದವರಿಗೆ ಮಹಿಳೆಯರಿಗೆ ಮೀಸಲಾತಿ ಕೊಡುವ ಬದ್ಧತೆ ಇಲ್ಲ. ರಾಮಾಜೋಯಿಸ್ ಮಹಿಳಾ ಮೀಸಲಾತಿ ವಿರುದ್ಧ ನ್ಯಾಯಾಲಯಕ್ಕೆ ಹೋಗಿದ್ದರು. ಆದೇ ಯಡಿಯೂರಪ್ಪ, ಈಶ್ವರಪ್ಪ,ಅನಂತ್ ಕುಮಾರ್ ರಾಮಾಜೋಯಿಸ್ ಅವರನ್ನು ತಡೆದಿದ್ರಾ? ಎಂದು ಪ್ರಶ್ನಿಸಿದರು.

ಇವಾಗ ಮತ್ತೆ ಅಪಾಯ ಬಂದಿದೆ. ಸುಪ್ರೀಂ ಕೋರ್ಟ್ ಮಹಾರಾಷ್ಟ್ರ ಮಧ್ಯಪ್ರವೇಶ ಕೊಟ್ಟ ಮೀಸಲಾತಿಯನ್ನು ಸಂವಿಧಾನ ಬಾಹಿರ ಎಂದಿದ್ದಾರೆ. ಮೀಸಲಾತಿ ನೀಡುವಾಗ ನಿಖರವಾದ ಅಂಕಿ ಅಂಶಗಳನ್ನು ನೀಡಿ ಮಾಡಿಲ್ಲ ಎಂದಿದೆ. ಅದಕ್ಕೆ ನಮ್ಮ ಸರ್ಕಾರದ ಅವಧಿಯಲ್ಲಿ ಜಾತಿ ಗಣತಿ ಮಾಡಲಾಗಿತ್ತು. ಆದರೆ ಅದನ್ನು ಮಾಜಿ ಸಿಎಂ ಎಚ್. ಕುಮಾರಸ್ವಾಮಿ ಹಾಗೂ ಬಿಜೆಪಿ ಒಪ್ಪಿಲ್ಲ ಎಂದರು. ಇದನ್ನು ಜನರಿಗೆ ತಿಳಿಸುವ ಕಾರ್ಯ ನಾವು ಮಾಡಬೇಕು ಎಂದರು.

ಹಿಂದುಳಿದವರಿಗೆ ಮಹಿಳೆಯರಿಗೆ ಅಲ್ಪಸಂಖ್ಯಾತರಿಗೆ ಮೀಸಲಾತಿ ಮುಂದುವರಿಯಬೇಕು ಎಂಬ ಬದ್ಧತೆ ಇರುವುದು ಕಾಂಗ್ರೆಸ್ ಗೆ ಮಾತ್ರ. ಭಕ್ತವತ್ಸಲ ಸಮಿತಿ ಎರಡು ತಿಂಗಳಲ್ಲಿ ವರದಿ ಕೊಟ್ಟಿದೆ. ಅದು ಸುಪ್ರೀಂ ಕೋರ್ಟ್ ಒಪ್ಪಲಿಲ್ಲ ಎಂದರೆ ಮೀಸಲಾತಿ ಸಿಗಲ್ಲ. ಎಲ್ಲರೂ ಜನರಲ್ ಕೆಟಗರಿಯಲ್ಲಿ ನಿಲ್ಲಬೇಕಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಮನ್ ಕಿ ಬಾತ್ ಮಾತನಾಡುತ್ತಾರೆ. ಲೋಕಸಭೆ, ರಾಜ್ಯಸಭೆಯಲ್ಲಿ ಮಹಿಳೆಯರಿಗೆ 33 ಶೇ ರಾಜಕೀಯ ಮೀಸಲಾತಿ ನೀಡಲಿ. ಅದಕ್ಕೆ ಮಹಿಳೆಯರು ಒತ್ತಾಯ ಮಾಡಲಿ ಎಂದು ಆಗ್ರಹಿಸಿದರು.

ಮಾಜಿ ಮುಖ್ಯಮಂತ್ರಿ ದೇವರಾಜ್ ಅರಸು ಅವರ ಬಗ್ಗೆ ಮಾತನಾಡಿ, ಹಿಂದುಳಿದವರಿಗೆ ಶಿಕ್ಷಣ ಉದ್ಯೋಗದಲ್ಲಿ ಮೀಸಲಾತಿ ನೀಡಿದರು. ಹಾವನೂರು ವರದಿ 1951 ನೇ ಇಸವಿಯಲ್ಲಿ ಮೊದಲ ಬಾರಿಗೆ ಸಂವಿಧಾನಕ್ಕೆ ಮೀಸಲಾತಿ ವಿಚಾರವಾಗಿ ತಿದ್ದುಪಡಿ ಆದರೂ 1977 ನೇ ಇಸವಿಯಲ್ಲಿ ಕರ್ನಾಟಕದಲ್ಲಿ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಹಿಂದುಳಿದ ಜಾತಿಗಳಿಗೆ ಮೀಸಲಾತಿ ನೀಡಲಾಯಿತು. ಅದು ಸಾಧ್ಯವಾಗಿದ್ದು ದೇವರಾಜ್ ಅರಸು ಅವರಿಂದ. ಉಳುವವನೇ ಭೂಮಿಯ ಒಡೆಯ ಮಾಡಿದ್ದರು, ಆದರೆ ಇವಾಗ ಉಳ್ಳವರೇ ಭೂಮಿಯ ಒಡೆಯ ಎಂಬಂತಾಗಿದೆ. ಬಿಜೆಪಿಗೆ ಬಡವರ ಬಗ್ಗೆ ಹಿಂದುಳಿದವರ ಬಗ್ಗೆ ಮಾತನಾಡುವ ನೈತಿಕತೆ ಎಲ್ಲಿದೆ? ಎಂದು ಪ್ರಶ್ನಿಸಿದರು.

Tags: #Saaksha TVbangaloreCongressSiddaramaiah
ShareTweetSendShare
Join us on:

Related Posts

ಕೇಂದ್ರ ಮಾದರಿ ವೇತನ ಮತ್ತು OPS ಮರು ಜಾರಿ ಗ್ಯಾರಂಟಿ! ರಾಜ್ಯ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರದಿಂದ ಬಂಪರ್ ಕೊಡುಗೆ

ಕೇಂದ್ರ ಮಾದರಿ ವೇತನ ಮತ್ತು OPS ಮರು ಜಾರಿ ಗ್ಯಾರಂಟಿ! ರಾಜ್ಯ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರದಿಂದ ಬಂಪರ್ ಕೊಡುಗೆ

by Shwetha
May 25, 2026
0

ಬೆಂಗಳೂರು: ರಾಜ್ಯದ ಲಕ್ಷಾಂತರ ಸರ್ಕಾರಿ ನೌಕರರಿಗೆ ಶೀಘ್ರದಲ್ಲೇ ಅತ್ಯಂತ ಸಂತಸದ ಸುದ್ದಿಯೊಂದು ಸಿಗುವ ಲಕ್ಷಣಗಳು ದಟ್ಟವಾಗಿವೆ. ರಾಜ್ಯ ಸರ್ಕಾರಿ ನೌಕರರು ಇನ್ನು ಮುಂದೆ ಕೇಂದ್ರ ಸರ್ಕಾರದ ಮಾದರಿಯಲ್ಲಿ...

ಎಸ್‌ಬಿಐ ನೇಮಕಾತಿ: 7,150 ಹುದ್ದೆಗಳಿಗೆ ಅರ್ಜಿ ಆಹ್ವಾನ, ಪದವೀಧರರಿಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸುವರ್ಣಾವಕಾಶ!

ಎಸ್‌ಬಿಐ ನೇಮಕಾತಿ: 7,150 ಹುದ್ದೆಗಳಿಗೆ ಅರ್ಜಿ ಆಹ್ವಾನ, ಪದವೀಧರರಿಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸುವರ್ಣಾವಕಾಶ!

by Shwetha
May 25, 2026
0

ಬೆಂಗಳೂರು: ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿಜೀವನ ಆರಂಭಿಸಬೇಕು ಎಂದು ಬಯಸುವ ಉದ್ಯೋಗಾಕಾಂಕ್ಷಿಗಳಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಭರ್ಜರಿ ಸಿಹಿ ಸುದ್ದಿ ನೀಡಿದೆ. ದೇಶಾದ್ಯಂತ ಖಾಲಿ ಇರುವ...

ಪಿಎಫ್ ಚಂದಾದಾರರಿಗೆ ಭರ್ಜರಿ ಸಿಹಿ ಸುದ್ದಿ: ವಾಟ್ಸಾಪ್‌ನಲ್ಲಿ ಹಲೋ ಎಂದರೆ ಸಾಕು, ಕ್ಷಣಾರ್ಧದಲ್ಲಿ ಸಿಗಲಿದೆ ನಿಮ್ಮ ಖಾತೆಯ ಸಂಪೂರ್ಣ ವಿವರ!

ಪಿಎಫ್ ಚಂದಾದಾರರಿಗೆ ಭರ್ಜರಿ ಸಿಹಿ ಸುದ್ದಿ: ವಾಟ್ಸಾಪ್‌ನಲ್ಲಿ ಹಲೋ ಎಂದರೆ ಸಾಕು, ಕ್ಷಣಾರ್ಧದಲ್ಲಿ ಸಿಗಲಿದೆ ನಿಮ್ಮ ಖಾತೆಯ ಸಂಪೂರ್ಣ ವಿವರ!

by Shwetha
May 25, 2026
0

ಬೆಂಗಳೂರು: ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್ ಆರ್ಗನೈಸೇಶನ್ (EPFO) ತನ್ನ ಕೋಟ್ಯಂತರ ಚಂದಾದಾರರಿಗೆ ಅತ್ಯಂತ ಸುಲಭ ಮತ್ತು ಡಿಜಿಟಲ್ ಸ್ನೇಹಿ ಸೇವೆಯನ್ನು ಒದಗಿಸಲು ಮುಂದಾಗಿದೆ. ಇನ್ಮುಂದೆ ನಿಮ್ಮ ಪಿಎಫ್...

ಕೇರಳದಲ್ಲಿ ಚುನಾವಣಾ ಅಧಿಕಾರಿಗೆ ಸರ್ಕಾರದ ಹುದ್ದೆ: ಕಾಂಗ್ರೆಸ್ ವಿರುದ್ಧ ಬಿಜೆಪಿ, ಸಿಪಿಎಂ ಜಂಟಿ ವಾಗ್ದಾಳಿ

ಕೇರಳದಲ್ಲಿ ಚುನಾವಣಾ ಅಧಿಕಾರಿಗೆ ಸರ್ಕಾರದ ಹುದ್ದೆ: ಕಾಂಗ್ರೆಸ್ ವಿರುದ್ಧ ಬಿಜೆಪಿ, ಸಿಪಿಎಂ ಜಂಟಿ ವಾಗ್ದಾಳಿ

by Shwetha
May 25, 2026
0

ತಿರುವನಂತಪುರಂ: ಕೇರಳ ಸರ್ಕಾರವು ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿಯಾಗಿದ್ದ ರತನ್ ಯು ಕೇಳ್ಕರ್ ಅವರನ್ನು ಪ್ರಮುಖ ಸರ್ಕಾರಿ ಹುದ್ದೆಗೆ ನೇಮಕ ಮಾಡಿರುವುದು ಈಗ ದೊಡ್ಡ ರಾಜಕೀಯ ಗದ್ದಲಕ್ಕೆ...

ಕಾಂಗ್ರೆಸ್ ಎಂದರೆ ಆಧುನಿಕ ಮುಸ್ಲಿಂ ಲೀಗ್: ಸತ್ತವರಿಂದಲೂ ಲೂಟಿ ಮಾಡುತ್ತಿದೆ ದರೋಡೆಕೋರ ಸರ್ಕಾರ : ಪ್ರಲ್ಹಾದ್ ಜೋಶಿ ವಾಗ್ದಾಳಿ

ಕಾಂಗ್ರೆಸ್ ಅಸ್ತಿತ್ವಕ್ಕೇ ಸಂಚಕಾರ ತಂದಿದೆಯೇ ಕಾಕ್ರೋಚ್ ಜನತಾ ಪಾರ್ಟಿ? : ಪ್ರಲ್ಹಾದ್ ಜೋಶಿ

by Shwetha
May 25, 2026
0

ಹುಬ್ಬಳ್ಳಿ: ಕಾಕ್ರೋಚ್ ಜನತಾ ಪಾರ್ಟಿ ಎಂಬ ವಿವಾದಾತ್ಮಕ ಹೆಸರಿನ ವಿಚಾರವಾಗಿ ಈಗ ರಾಜಕೀಯ ವಲಯದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ಈ ಹೊಸ ಬೆಳವಣಿಗೆಯಿಂದ ಬಿಜೆಪಿ ವಿಚಲಿತವಾಗಿದೆ ಎಂಬ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram