Dakshina Kannada | ಕಬಡ್ಡಿ ಆಟಗಾರ ಉದಯ ಚೌಟ ಇನ್ನಿಲ್ಲ..!!
ಏಕಲವ್ಯ ಪ್ರಶಸ್ತಿ ವಿಜೇತ ಕಬ್ಬಡ್ಡಿ ಆಟಗಾರ ಬಂಟ್ವಾಳ ತಾಲೂಕಿನ ಮಾಣಿ ಬದಿಗುಡ್ಡೆ ನಿವಾಸಿ ಉದಯ ಚೌಟ ಕೊನೆಯುಸಿರೆಳೆದಿದ್ದಾರೆ.
ಅವರು ಅನಾರೋಗ್ಯದಿಂದ ಇಹಲೋಕ ತ್ಯಜಿಸಿದ್ದಾರೆ ಎಂದು ವರದಿಯಾಗಿದೆ.
ಸುಮಾರು 20 ವರ್ಷಗಳ ಕಾಲ ಕಬಡ್ಡಿ ಕಣದಲ್ಲಿ ತಮ್ಮದೇಯಾದ ಛಾಪು ಮೂಡಿಸಿದ್ದ ಉದಯ 300 ಪಂದ್ಯಗಳನ್ನಾಡಿದ್ದಾರೆ.
2007ರ ದ್ವಿತೀಯ ವಿಶ್ವಕಪ್ ಕಬಡ್ಡಿಯಲ್ಲಿ ಗೆಲುವು ಸಾಧಿಸಿದ್ದ ತಂಡದ ಸದಸ್ಯರಾಗಿದ್ದರು.
ಪ್ರಸ್ತುತ ಸುರತ್ಕಲ್ ನಲ್ಲಿರುವ ಬ್ಯಾಂಕ್ ಆಫ್ ಬರೋಡದಲ್ಲಿ ಉದ್ಯೋಗದಲ್ಲಿದ್ದ ಉದಯ್ ಚೌಟ ಅವರ ಅಕಾಲಿಕ ನಿಧನಕ್ಕೆ ಕಬಡ್ಡಿ ಪ್ರೇಮಿಗಳು ಕಂಬನಿ ಮಿಡಿದಿದ್ದಾರೆ. ex-indian-kabaddi-player-uday-chowta-passed-away