ಪ್ರೀತಿ ನಿರಾಕರಿಸಿದಕ್ಕೆ ಆಕೆಯ ಸ್ಕೂಟಿ ಸುಟ್ಟುಹಾಕಿದ..!
ಯುವಕನೋರ್ವ ಮಾಜಿ ಪ್ರಿಯತಮೆ ತನ್ನ ಪ್ರೀತಿ ನಿರಾಕರಿಸಿದ ಹಿನ್ನೆಲೆ ಆಕೆ ಹಾಗೂ ಆಕೆ ತಾಯಿಗೆ ಜೀವ ಬೆದರಿಕೆ ಹಾಕಿದ್ದಾನೆ. ಅಲ್ದೇ ಆಕೆಯ ಸ್ಕೂಟಿಯನ್ನ ಸುಟ್ಟುಹಾಕಿದ್ದು, ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಇದೀಗ ಕಾಲೇಜು ವಿದ್ಯಾರ್ಥಿನಿ ತನ್ನ ಮಾಜಿ ಪ್ರಿಯಕರನಿಂದ ಜೀವ ಬೆದರಿಕೆ ಇದೆ ಎಂದು ಆರೋಪಿಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಬೆಂಗಳೂರಿನಲ್ಲಿ ಈ ಘಟನೆ ನಡೆದಿದೆ.
ವ್ಯಾಲೆಂಟೈನ್ಸ್ ಡೇ | ವೆರೈಟಿ ಆಫರ್ ಕೊಟ್ಟ ಲಾ ಕಂಪನಿ
ಖಾಸಗಿ ಕಂಪನಿ ಉದ್ಯೋಗಿಯಾಗಿರುವ ಸಂಜಯ್ ಮೂರ್ತಿ ವಿದ್ಯಾರ್ಥಿನಿಯನ್ನ ಪ್ರೀತಿಸುತ್ತಿದ್ದ. ಆದರೆ ಒಂದು ವರ್ಷದ ಹಿಂದೆ ಯುವತಿ ತನ್ನ ತಾಯಿ ಮದುವೆಗೆ ಒಪ್ಪುತ್ತಿಲ್ಲ ಎಂಬ ಕಾರಣ ನೀಡಿ ಬ್ರೇಕಪ್ ಮಾಡಿಕೊಂಡಿದ್ದಳು.
ಆದರೆ ಪ್ರೀತಿಯನ್ನ ಕೊನೆಗಾಣಿಸುವ ನಿರ್ಧಾರಕ್ಕೆ ಒಪ್ಪದ ಸಂಜಯ್ , ಆಕೆಗೆ ಕಿರುಕುಳ ನೀಡಲು ಶುರುಮಾಡಿದ್ದಾನೆ. ಸಾಲದಕ್ಕೆ ವಿದ್ಯಾರಣ್ಯಪುರದಲ್ಲಿರುವ ಆಕೆಯ ನಿವಾಸಕ್ಕೆ ಜನವರಿ 12ರಂದು ಬಂದು ಆಕೆ ಹಾಗೂ ಆಕೆಯ ತಾಯಿಗೆ ಜೀವ ಬೆದರಿಕೆಯನ್ನೂ ಹಾಕಿದ್ದಾನೆ.
ವ್ಯಾಲೆಂಟೈನ್ಸ್ ಡೇ | ವೆರೈಟಿ ಆಫರ್ ಕೊಟ್ಟ ಲಾ ಕಂಪನಿ
ಇಷ್ಟಕ್ಕೆ ಸುಮ್ಮನಾಗದೇ ಫೆಬ್ರವರಿ 2 ರಂದು ಆಕೆಯ ಸ್ಕೂಟಿಯನ್ನ ಸುಟ್ಟು ಹಾಕಿಸಿದ್ದಾನೆ. ಮೊದಲಿಗೆ ಈ ಕೃತ್ಯದ ಹಿಂದೆ ಯಾರಿರಬಹುದು ಎಂಬುದು ಗೊತ್ತಾಗಿರಲಿಲ್ಲ. ಬಳಿಕ ಸಿಸಿ ಟಿವಿ ಪರಿಶೀಲಿಸಿದ ವೇಳೆ ಆತನ ಕೃತ್ಯ ಗೊತ್ತಾಗಿದ್ದು, ಇದೀಗ ಆತನನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಲವ್ – ಸೆಕ್ಸ್- ದೋಖಾ : 2 ಬಾರಿ ಅಬಾರ್ಷನ್ ಬಳಿಕ ಯುವತಿಗೆ ಕೈಕೊಟ್ಟ ಲೆಕ್ಚರರ್ ಮಗ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








