ನವದೆಹಲಿ: ಲೋಕಸಭಾ ಚುನಾವಣೆ ಮುಗಿದಿದ್ದು, ಎಲ್ಲರ ಚಿತ್ತ ಫಲಿತಾಂಶದತ್ತ ನೆಟ್ಟಿದೆ. ಇದರ ಮಧ್ಯೆ ಎಕ್ಸಿಟ್ ಪೋಲ್ ಹೊರ ಬಿದ್ದಿದ್ದು, ಬಿಜೆಪಿಗೆ ಮತ್ತೊಮ್ಮೆ ಅಧಿಕಾರದ ಗದ್ದುಗೆಗೆ ಏರಲಿದೆ ಎಂದು ಭವಿಷ್ಯ ನುಡಿದಿವೆ.
ಬಿಜೆಪಿ (BJP) ನೇತೃತ್ವದ ಎನ್‌ಡಿಎ (NDA) ಮತ್ತೆ ಅಧಿಕಾರಕ್ಕೆ ಏರಲಿದ್ದು ಮೂರನೇ ಬಾರಿ ನರೇಂದ್ರ ಮೋದಿ (Narendra Modi) ಅಧಿಕಾರಕ್ಕೆ ಏರಲಿದ್ದಾರೆ ಎಂದು ಚುನಾಣೋತ್ತರ ಸಮೀಕ್ಷೆ (Exit Polls) ಹೇಳಿವೆ.
ಇಂಡಿಯಾ ನ್ಯೂಸ್ ಎನ್‌ಡಿಎಗೆ 371 ಸ್ಥಾನ ಹೇಳಿದರೆ, INDIA ಒಕ್ಕೂಟ 125, ಇತರರಿಗೆ 47 ಸ್ಥಾನ ಗಳಿಸಬಹುದು ಎಂದು ಹೇಳಿದೆ.
ಪಿ ಮಾರ್ಕ್ ಎನ್‌ಡಿ 359 ಸ್ಥಾನ, INDIA ಒಕ್ಕೂಟ 154, ಇತರರು 30 ಸ್ಥಾನ ಗೆಲ್ಲಬಹುದು ಎಂದು ಹೇಳಿದೆ. ಮಾಟ್ರಿಜ್ ಎನ್‌ಡಿಎ 353-368, INDIA ಒಕ್ಕೂಟ 118-133, ಇತರರು 30 ಸ್ಥಾನ ಗೆಲ್ಲಬಹುದು ಎಂದು ಹೇಳಿದೆ. 2019ರ ಚುನಾವಣೆಯಲ್ಲಿ ಬಿಜೆಪಿ 303 ಪಡೆದಿದ್ದರೆ, ಎನ್‌ಡಿಎ 353 ಸ್ಥಾನ ಗೆದ್ದಿತ್ತು. ಕಾಂಗ್ರೆಸ್ 52 , ಯುಪಿಎ 91 ಸ್ಥಾನ ಗೆದ್ದುಕೊಂಡಿದ್ದವು.