ರಾಜಕೀಯಕ್ಕೆ ಗುಡ್ ಬೈ ಹೇಳಿದ ಶಶಿಕಲಾ ನಟರಾಜನ್ !

1 min read

ರಾಜಕೀಯಕ್ಕೆ ಗುಡ್ ಬೈ ಹೇಳಿದ ಶಶಿಕಲಾ ನಟರಾಜನ್ !

ಚೆನ್ನೈ, ಮಾರ್ಚ್03: ಆಡಳಿತಾರೂಢ ಎಐಎಡಿಎಂಕೆ ಯ ಮಾಜಿ ಮುಖ್ಯಸ್ಥೆ ವಿ.ಕೆ.ಶಶಿಕಲಾ ನಟರಾಜನ್, ರಾಜಕೀಯಕ್ಕೆ ಗುಡ್ ಬೈ ಹೇಳುವುದಾಗಿ ಘೋಷಿಸಿದ್ದಾರೆ
ಜನವರಿಯಲ್ಲಿ ಬೆಂಗಳೂರು ಜೈಲಿನಿಂದ ಬಿಡುಗಡೆಯಾದ ಶಶಿಕಲಾ ಮುಂದಿನ ತಿಂಗಳ ಚುನಾವಣೆಯಲ್ಲಿ ಪಕ್ಷದ ನೇತೃತ್ವ ವಹಿಸುವ ಮತ್ತು ಮುಖ್ಯಮಂತ್ರಿ ಹುದ್ದೆ ಅಭ್ಯರ್ಥಿ ಎಂದು ನಿರೀಕ್ಷಿಸಲಾಗಿತ್ತು. ‌ಇದೀಗ ರಾಜಕೀಯಕ್ಕೆ ಗುಡ್ ಬೈ ಹೇಳುವ ಮೂಲಕ ತಮಿಳುನಾಡಿನ ಆಡಳಿತಾರೂಢ ಎಐಎಡಿಎಂಕೆ ಯ ಮಾಜಿ ಮುಖ್ಯಸ್ಥೆ ವಿ.ಕೆ.ಶಶಿಕಲಾ ಅವರು ರಾಜಕೀಯ ಮತ್ತು ಸಾರ್ವಜನಿಕ ಜೀವನವನ್ನು ತೊರೆದಿದ್ದಾರೆ.
Sasikala
“ಜಯ ಜೀವಂತವಾಗಿರುವಾಗಲೂ ನಾನು ಅಧಿಕಾರ ಅಥವಾ ಸ್ಥಾನದ ಆಸೆ ಪಡಲಿಲ್ಲ. ಅವಳು ಮೃತಪಟ್ಟ ನಂತರವೂ ನನಗೆ ಅದು ಬೇಕಿಲ್ಲ. ನಾನು ರಾಜಕೀಯದಿಂದ ದೂರವಿರುತ್ತೇನೆ” ಎಂದು ದಿವಂಗತ ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಅಪ್ತೆ ಶಶಿಕಲಾ ನಟರಾಜನ್‌ ಪತ್ರದಲ್ಲಿ ಬರೆದಿದ್ದಾರೆ.

ಎಐಎಡಿಎಂಕೆ ವಿಜಯಕ್ಕಾಗಿ ನಾನು ದೇವರು ಮತ್ತು ನನ್ನ ಸಹೋದರಿ ಜಯಲಲಿತಾ ಗೆ ಪ್ರಾರ್ಥನೆ ಸಲ್ಲಿಸುತ್ತೇನೆ. ಎಐಎಡಿಎಂಕೆ ಬೆಂಬಲಿಗರು ಒಟ್ಟಾಗಿ ಕೆಲಸ ಮಾಡಿ ಡಿಎಂಕೆ ಯನ್ನು ಸೋಲಿಸೋಣ. ಈ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಕೆಲಸ ಮಾಡಬೇಕೆಂದು ನಾನು ಒತ್ತಾಯಿಸುತ್ತೇನೆ ಎಂದು ಬರೆದಿದ್ದಾರೆ.

ಎಐಎಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿಗೆ ಎಂ.ಎಸ್.ಶಶಿಕಲಾ ಅವರು 2019 ರ ಚುನಾವಣೆಯಂತೆ ಮತಗಳು ವಿಭಜನೆಯಾಗದಂತೆ ಎಐಎಡಿಎಂಕೆ ಒಗ್ಗೂಡಿಸಲು ಕೆಲಸ ಮಾಡುತ್ತಿರುವುದಕ್ಕೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
Sasikala

ತಮಿಳುನಾಡಿನಲ್ಲಿ ಚಿನ್ನಮ್ಮ ಎಂದೇ ಪ್ರಖ್ಯಾತಿ ಪಡೆದಿರುವ ಶಶಿಕಲಾ ನಟರಾಜನ್ ತಮಿಳುನಾಡಿನಲ್ಲಿ ಅಪಾರ ಜನಮನ್ನಣೆ ಗಳಿಸಿದ್ದಾರೆ. ಅಕ್ರಮ ಆಸ್ತಿ ಸಂಪಾದನೆ ಆರೋಪದಡಿಯಲ್ಲಿ ಆರೋಪಿಯಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಜೈಲು ಶಿಕ್ಷೆ ಅನುಭವಿಸಿದ್ದ ಶಶಿಕಲಾ ಜನವರಿಯಲ್ಲಿ ಜೈಲಿನಿಂದ ಬಿಡುಗಡೆಯಾಗಿದ್ದರು.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd