ಕರುನಾಡಿಗೆ ಮತ್ತೆ ಬೀಗ… ಲಾಕ್ ಡೌನ್ ಗೆ ತಜ್ಞರ ಸಲಹೆ..!? lock down saaksha tv
ಮತ್ತೊಂದು ಲಾಕ್ ಡೌನ್ ಗೆ ಸಾಕ್ಷಿಯಾಗ್ತಾರಾ ಕರ್ನಾಟಕದ ಮಂದಿ..? ರಾಜ್ಯದಲ್ಲಿ ಕೊರೊನಾ ಹೆಚ್ಚಾದ್ರೆ ಆಗೋದು ಕಂಪ್ಲೀಟ್ ಲಾಕಾ..? ಅಥವಾ ಆಫ್ ಲಾಕಾ…? ಸದ್ಯ ಕನ್ನಡಿಗರಲ್ಲಿ ಆತಂಕ ಮೂಡಿಸಿರುವ ಪ್ರಶ್ನೆಗಳಿವೆ.
ಯಾಕಂದರೇ ಕನ್ನಡಿಗರು ಈಗಾಗಲೇ ಎರಡೆರಡು ಲಾಕ್ ಡೌನ್ ಗಳನ್ನು ಅನುಭವಿಸಿದ್ದಾರೆ. ಲಾಕ್ ಡೌನ್ ಸಂಕಷ್ಠದಿಂದ ಹೊರ ಬರುವ ಮುನ್ನವೇ ಕೊರೊನಾ ಹೆಚ್ಚಳ ಕನ್ನಡಿಗರ ಎದೆ ಬಡಿತ ಹೆಚ್ಚಾಗುವಂತೆ ಮಾಡಿದೆ.
ಸದ್ಯ ರಾಜ್ಯದಲ್ಲಿ ಕೊರೊನಾ ಹೈ ಸ್ಪೀಡ್ ನಲ್ಲಿ ಹರಡುಕೊಳ್ಳುತ್ತಿದೆ. ಸಿಕ್ಕ ಸಿಕ್ಕವರ ದೇಹ ಹೊಕ್ಕಿ ಮುನ್ನುಗ್ಗುತ್ತಿರುವ ಕೊರೊನಾಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ತಜ್ಞರ ಮೊರೆ ಹೋಗಿದೆ.
ಮೂಲಗಳ ಪ್ರಕಾರ ಕಳೆದ ವರ್ಷದ ವೈಫಲ್ಯವನ್ನು ಮತ್ತೆ ಈ ಬಾರಿ ಮರುಕಳಿಸದಂತೆ ನೋಡಿಕೊಳ್ಳಲು ಸರ್ಕಾರ ತುಸು ಮುತುವರ್ಜಿ ವಹಿಸಿಯೇ ಕೊರೊನಾ ಕಂಟ್ರೋಲ್ ಗೆ ಮುಂದಾಗಲಿದೆಯಂತೆ.
ಆದಷ್ಟು ಬೇಗ ರಾಜ್ಯದಲ್ಲಿ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಸರ್ಕಾರ ಚಿಂತನೆ ನಡೆಸಿದೆ ಎಂದು ಹೇಳಲಾಗುತ್ತಿದೆ.
ಇದಕ್ಕೆ ಪುಷ್ಠಿ ನೀಡುವಂತೆ ರಾಜ್ಯ ಸರ್ಕಾರದ ಸಚಿವರು ಕೂಡ ಲಾಕ್ ಡೌನ್ ಅನಿವಾರ್ಯ ಎಂಬ ಮಾತುಗಳೇ ಹೆಚ್ಚಾಗಿ ಹೇಳುತ್ತಿದ್ದಾರೆ. ಕೊರೊನಾ ಕಂಟ್ರೋಲ್ ಗೆ ಬರದೇ ಇದ್ದರೇ ಲಾಕ್ ಡೌನ್ ಅತ್ಯವಶ್ಯಕವಾಗಲಿದೆ ಎಂದು ಸಚಿವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಇತ್ತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ತಜ್ಞರ ಸಲಹೆ ಪಡೆದು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿ ಕಠಿಣ ಕ್ರಮಗಳಿಗೆ ಕೈ ಹಾಕಲಿದ್ದಾರೆ ಎಂದು ಹೇಳಲಾಗುತ್ತಿದೆ.
ಗುರುವಾರ ಸಂಪುಟ ಸಭೆ ನಡೆಯಲಿದ್ದು, ಅಂದೇ ಲಾಕ್ ಡೌನ್ ನಿರ್ಧಾರವಾಗಲಿದೆ. ತಜ್ಞರು ಕೂಡ ಕೊರೊನಾಗೆ ಕಡಿವಾಣ ಹಾಕಲು ಲಾಕ್ ಡೌನ್ ನಂತಹ ಕ್ರಮಗಳನ್ನ ಸಲಹೆ ನೀಡಿದ್ದಾರಂತೆ. ಹೀಗಾಗಿ ಗುರುವಾರದ ಸಭೆಯ ಬಳಿಕ ರಾಜ್ಯದಲ್ಲಿ ಯಾವ ರೀತಿಯ ನಿಯಮಗಳು ಜಾರಿಗೆ ಬರುತ್ತೆ ಎಂದು ಕಾದು ನೋಡಬೇಕಾಗಿದೆ.









