ನೌಕಾಪಡೆಯ ಐಎನ್ ಎಸ್ ರಣವೀರನಲ್ಲಿ ಸ್ಪೋಟ | 3 ಯೋಧರು ಹತಾತ್ಮ Saaksha Tv
ಮುಂಬೈ: ನೌಕಾಪಡೆಯ ನಾವೆಲ್ ಡಾಕ್‌ಯಾರ್ಡ್ ಐಎನ್‌ಎಸ್ ರಣವೀರ್ ನ ಆತಂರಿಕ ವಿಭಾಗದಲ್ಲಿ ಮಂಗಳವಾರ ಸ್ಫೋಟಗೊಂಡಿದೆ. ಈ ಘಟನೆಯಲ್ಲಿ ನೌಕಾಪಡೆಯ ಮೂವರು ಯೋಧರು ಹುತಾತ್ಮರಾಗಿದ್ದಾರೆ. ಮತ್ತು 11 ಜನರಿಗೆ ಗಾಯಗಳಾಗಿವೆ ಎಂದು ಎ ಎನ್ ಐ ವರದಿ ಮಾಡಿದೆ.
ವಿಶಾಖಪಟ್ಟಣಂನ ಪೂರ್ವ ನೌಕಾ ಕಮಾಂಡ್‌ನಿಂದ ಕರಾವಳಿಯ ನಿಯೋಜನೆಯಲ್ಲಿದ್ದ ನೌಕೆಯು ಆಂತರಿಕ ವಿಭಾಗದಲ್ಲಿ ಸಂಜೆ ಸುಮಾರು 4.30 ಕ್ಕೆ ಸ್ಫೋಟ ಸಂಭವಿಸಿದೆ. ಸ್ಪೋಟ ಸಂಭವಿಸುತ್ತಿದ್ದಂತೆ ಕೂಡಲೆ ಸಿಬ್ಬಂದಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಈ ಅಪಘಾತದಲ್ಲಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳಿಗೆ ಹಾನಿಯಾಗಿಲ್ಲಾ. ಮತ್ತು ಘಟನೆಯ ಕುರಿತು ತಿನಿಕಾ ತಂಡವನ್ನು ರಚಿಸಲು ಆದೇಶಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
“ಐಎನ್‌ಎಸ್ ರಣವೀರ್ ಪೂರ್ವ ನೌಕಾ ಕಮಾಂಡ್‌ನಿಂದ ಕ್ರಾಸ್-ಕೋಸ್ಟ್ ಕಾರ್ಯಾಚರಣೆಯ ನಿಯೋಜನೆಯಲ್ಲಿದೆ ಮತ್ತು ಶೀಘ್ರದಲ್ಲೇ ಬೇಸ್ ಪೋರ್ಟ್‌ಗೆ ಮರಳಲಿದೆ” ಎಂದು ನೌಕಾಪಡೆ ಕಚೇರಿ ತಿಳಿಸಿದೆ .