ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಇನ್ನು ಮುಂದೆ ಹೋಟೆಲ್ ಮತ್ತು ಬಾರ್ ಗಳು ಮಧ್ಯರಾತ್ರಿವರೆಗೂ ತೆರೆದಿರುತ್ತದೆ. ಈ ಕುರಿತು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಮಧ್ಯರಾತ್ರಿ ವರೆಗೂ ಬಾರ್, ಹೋಟೆಲ್‌ಗಳ ಓಪನ್ ಮಾಡಲು ಅವಕಾಶ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇಲ್ಲಿಯವರೆಗೆ ಹೋಟೆಲ್ ಮತ್ತು ಬಾರ್ ಅಂಗಡಿ ಮಾಲೀಕರು ಮಧ್ಯರಾತ್ರಿಯವರೆಗೂ ಗ್ರಾಹಕರು ಬರುತ್ತಾರೆ. ಗ್ರಾಹಕರಿಗೆ ಮಧ್ಯರಾತ್ರಿವರೆಗೂ ಬರಲು ಆಸಕ್ತಿ ಇದೆ. ಹೀಗಾಗಿ ಅವಕಾಶ ನೀಡಬೇಕೆಂದು ಮನವಿ ಮಾಡುತ್ತಿದ್ದರು. ಸದ್ಯ ಸರ್ಕಾರ ಹೋಟೆಲ್ ಮಾಲೀಕರ ಬೇಡಿಕೆಗೆ ಅಸ್ತು ಎಂದಿದ್ದು, ಅವಕಾಶ ನೀಡಿದೆ.
ಹೀಗಾಗಿ ಹೊಟೇಲ್, ಬಾರ್ ತೆರೆಯುವ ಸಮಯದ ಅವಧಿ ವಿಸ್ತರಿಸಿ ಸರ್ಕಾರದ ಅಧೀನ ಕಾರ್ಯದರ್ಶಿ ಲಕ್ಷ್ಮಿ ಸಾಗರ್ ಆದೇಶ ಹೊರಡಿಸಿದ್ದಾರೆ. ಲೈಸೆನ್ಸ್ ಸಿಎಲ್ 4 ಇರುವ ಬಾರ್ ಮತ್ತು ರೆಸ್ಟೋರೆಂಟ್ ಗಳು ಬೆಳಗ್ಗೆ 9 ರಿಂದ ಮಧ್ಯರಾತ್ರಿ 1 ಗಂಟೆವರೆಗೆ, ಸಿಎಲ್ 6(ಎ): ಬೆಳಗ್ಗೆ 9 ರಿಂದ ಮಧ್ಯರಾತ್ರಿ 1 ಗಂಟೆ, ಸಿಎಲ್ 7: ಬೆಳಗ್ಗೆ 9 ರಿಂದ ಮಧ್ಯರಾತ್ರಿ 1 ಗಂಟೆ, ಸಿಎಲ್ 7ಡಿ – ಬೆಳಗ್ಗೆ 9 ರಿಂದ ಮಧ್ಯರಾತ್ರಿ 1 ಗಂಟೆ ಸಿಎಲ್ 9 – ಬೆಳಗ್ಗೆ 10 ರಿಂದ ಮಧ್ಯರಾತ್ರಿ 1 ಗಂಟೆ ವರೆಗೆ ತೆರೆಯಲು ಅವಕಾಶ ಕಲ್ಪಿಸಲಾಗಿದೆ.