Facebook : ಫೇಸ್ ಆಬುಕ್ ಆಕೆಗಾಗಿ ಪತ್ನಿಗೆ ವಿಷ ಕೊಟ್ಟ…!!!
ಕೋಲಾರ : Facebook ನಲ್ಲಿ ಪರಿಚಯವಾದವಳಿಗಾಗಿ ವ್ಯಕ್ತಿಯೊಬ್ಬ ತನ್ನ ಪತ್ನಿಗೆ ವಿಷ ಪ್ರಾಶನ ಮಾಡಿಸಿರುವ ಘಟನೆ ಕೋಲಾರದಲ್ಲಿ ನಡೆದಿದೆ..
ಶಶಿ ಕುಮಾರ್ ಹೆಂಡತಿಗೆ ವಿಷವಿಟ್ಟ ಆರೋಪಿಯಾಗಿದ್ದಾನೆ..
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕು ಕಾನಗಮಾಕಲಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ವಿಷ ಸೇವಿಸಿ ತೀವ್ರ ಅಸ್ವಸ್ಥಗೊಂಡಿರುವ ಪತ್ನಿ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾರೆ..
9 ವರ್ಷಗಳ ಹಿಂದೆ ಹಿರಿಯರ ಸಮ್ಮುಖದಲ್ಲಿ ಈ ಇಬ್ಬರೂ ಕೂಡ ಮದುವೆಯಾಗಿದ್ದರು..
ಈ ನಡುವೆ ಫೇಸ್ ಬುಕ್ ನಲ್ಲಿ ಓರ್ವ ಮಹಿಳೆಯ ಪರಿಚಯ ಮಾಡಿಕೊಂಡಿದ್ದಾತ ಾಕೆಯ ಜೊತೆಗೆ ಸಂಬಂಧ ಬೆಳೆಸಿದ್ದಾನೆ..
ಇತ್ತೀಚೆಗೆ ಪತ್ನಿಯನ್ನ ತವರು ಮನೆಗೆ ಕಳುಹಿಸಿದ್ದ ಈತ ಅಲ್ಲಿಯೇ ಪತ್ನಿಗೆ ವಿಷ ವಿಟ್ಟಿದ್ದಾನೆ. ಇದ್ರಿಂದಾಗಿ ತೀವ್ರ ಅಸ್ವಸ್ಥಗಲೊಂಡಿದ್ದ ಪತ್ನಿ ಆಶಾರಾಣಿಯನ್ನ ಶ್ರೀನಿವಾಸಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗ್ತಿದೆ..
ಆಶಾರಾಣಿ ಸದ್ಯ ಸಾವು ಬದುಕಿನ ಹೋರಾಟ ನಡೆಸುತ್ತಿದ್ದು , ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು , ಪತಿಯನ್ನ ಬಂಧಿಸಲಾಗಿದೆ ಎಂಬ ಮಾಹಿತಿ ಸಿಕ್ಕಿದೆ..
Facebook , husband poisoned wife because of other women he met in facebook