Facebok : ಫೇಸ್ ಬುಕ್ ಒಡೆತನದ ಮೆಟಾ ತನ್ನ ಉದ್ಯೋಗಿಗಳಿಗೆ ಶಾಕ್…!!!
ಸಾಮಾಜಿಕ ಜಾಲತಾಣದ ದೈತ್ಯ ಎನಿಸಿಕೊಂಡಿರುವ ಫೇಸ್ ಬುಕ್ ತನ್ನ ಸಂಸ್ಥೆ ಹೆಸರನ್ನ ಇತ್ತೀಚೆಗೆ ಮೆಟಾ ಎಂದು ಬದಲಾಯಿಸಿಕೊಂಡಿದೆ.. ಈ ಸಂಸ್ಥೆ ತನ್ನ ಉದ್ಯೋಗಿಗಳಿಗೆ ಅನೇಕ ಸೌಲಭ್ಯಗಳನ್ನ ಒದಗಿಸುತಿತ್ತು..
ಈ ಪೈಕಿ ಫ್ರೀ ಲಾಂಡ್ರಿ ಮತ್ತೆ ಡ್ರೈ ಕ್ಲೀನಿಂಗ್ ಕೂಡ ಇದ್ದವು. ಆದ್ರೀಗ ಮೆಟಾ ತನ್ನ ಉದ್ಯೋಗಿಗಳಿಗೆ ಉಚಿತ ಲಾಂಡ್ರಿ ಹಾಗೂ ಡ್ರೈ ಕ್ಲೀನಿಂಗ್ ಸೇವೆಯನ್ನು ಕಕಡಿತಗೊಳಿಸಿದೆ..
ಹೌದು… ಮೆಟಾ ಈ ಹಿಂದೆ ತನ್ನ ಉದ್ಯೋಗಿಗಳಿಗೆ ಕಂಪನಿಯ ಪರವಾಗಿ ಉಚಿತ ಲಾಂಡ್ರಿ, ವ್ಯಾಲೆಟ್ ಸೇವೆ ಹಾಗೂ ಡ್ರೈ ಕ್ಲೀನಿಂಗ್ ಸೇವೆಯನ್ನು ಒದಗಿಸುತ್ತಿತ್ತು. ಆದರೆ ಇದೀಗ ಮೆಟಾ ತನ್ನ ಉದ್ಯೋಗಿಗಳಿಗೆ ಈ ಸೇವೆಯನ್ನು ಕಡಿತಗೊಳಿಸುತ್ತಿದೆ ಎಂದು ಈ-ಮೇಲ್ ಮೂಲಕ ತಿಳಿಸಿದೆ.
ಮೆಟಾ ಉಚಿತ ಲಾಂಡ್ರಿ, ವ್ಯಾಲೆಟ್ ಸೇವೆ ಹಾಗೂ ಡ್ರೈ ಕ್ಲೀನಿಂಗ್‌ನೊಂದಿಗೆ ತನ್ನ ಉದ್ಯೋಗಿಗಳಿಗೆ ಉಚಿತ ಊಟದ ಸವಲತ್ತನ್ನೂ ನೀಡುತ್ತಿತ್ತು. ಈ ಹಿಂದೆ ಸಂಜೆ 6 ಗಂಟೆಯ ಬಳಿಕ ನೀಡುತ್ತಿದ್ದ ಈ ಸೇವೆಯನ್ನು ಮೆಟಾ ಮುಂದೂಡಿದೆ. ಬದಲಿಗೆ ಸಂಜೆ 6:30ರ ಬಳಿಕ ಈ ಸೇವೆ ತನ್ನ ಉದ್ಯೋಗಿಗಳಿಗೆ ಲಭ್ಯವಾಗಿಸಿದೆ.
ಸದ್ಯ ವರ್ಕ್ ಫ್ರಮ್ ಹೋಮ್ ಮಾಡ್ತಿರುವ ಉದ್ಯೋಗಿಗಳನ್ನ ಮಾರ್ಚ್ 28ಕ್ಕೆ ಕಂಪನಿಗೆ ಕರೆಸಿಕೊಳ್ಳುವ ಸಾಧ್ಯತೆ ಇದೆ. ಉದ್ಯೋಗಿಗಳು ಕಂಪನಿಗೆ ಮರಳುವ ಮೊದಲು ಕೋವಿಡ್‌ನ ಬೂಸ್ಟರ್ ಡೋಸ್ ಪಡೆಯುವುದು ಅಗತ್ಯ ಎಂದು ಸೂಚನೆ ನೀಡಿದೆ.