Fact Check : Facebook ನಲ್ಲಿ ಮತ್ತೆ ಹೊಸ ನಾಲ್ಕು ಭಾಷೆಗಳಲ್ಲಿ ಸಿಗಲಿದೆ ಈ ಫೀಚರ್
ಮೆಟಾ ಕಂಪಿಯ ಅಡಿಯಲ್ಲಿ ಫೇಸ್ ಬುಕ್ , ವಾಟ್ಸಾಪ್ , ಇನ್ಸ್ಟಾಗ್ರಾಮ್ ನಂತಹ ಸೋಷಿಯಲ್ ಮೀಡಿಯಾ ಫ್ಲಾಟ್ ಫಾರ್ಮ್ ಗಳು ಇಂದು ಇಂದು ಜಗತ್ತಿನಾದ್ಯಂತ ಮಿಲಿಯಮ್ ಗಟ್ಟಲೆ ಬಳಕೆದಾರರನ್ನ ಹೊಂದಿದೆ..
ಮೆಟಾ ಆಗಾಗ ಬಳಕೆದಾರರಿಗೆ ಹೊಸ ಹೊಸ ಫೀಚರ್ ಗಳನ್ನ ಪರಿಚಯಿಸುತ್ತಲೇ ಇರುತ್ತೆ.. ಇದೀಗ ಮತ್ತೆ 4 ಭಾರತೀಯ ಪ್ರಾದೇಶಿಕ ಭಾಷೆಗಳಲ್ಲಿ ಫ್ಯಾಕ್ಟ್ ಚೆಕಿಂಗ್ ಸೌಲಭ್ಯವನ್ನು ಮೆಟಾ ವಿಸ್ತರಿಸಲು ಕ್ರಮ ಕೈಗೊಂಡಿದೆ.
ಹೌದು..! ಕಾಶ್ಮೀರಿ, ಭೋಜಪುರಿ, ಒಡಿಯಾ ಹಾಗೂ ನೇಪಾಳಿ ಭಾಷೆಗಳಲ್ಲಿ ಫ್ಯಾಕ್ಟ್ ಚೆಕಿಂಗ್‌ನ ಸೌಲಭ್ಯಗಳನ್ನ ಬಳಕೆದಾರರಿಗೆ ಒದಗಿಸಲು ಮೆಟಾ ಸಂಸ್ಥೆಯು ಮುಂದಾಗಿದೆ..
ಈಗಾಗಲೇ ಇಂಗ್ಲಿಷ್, ಕನ್ನಡ, ಹಿಂದಿ, ತೆಲುಗು, ತಮಿಳು ಸೇರಿದಂತೆ 11 ಭಾಷೆಗಳಲ್ಲಿ ಫ್ಯಾಕ್ಟ್ ಚೆಕ್ ಸೌಲಭ್ಯವನ್ನು ಮೆಟಾ ನೀಡಿತ್ತು. ಇದೀಗ 15 ಭಾಷೆಗಳಲ್ಲಿ ಈ ಸೌಲಭ್ಯ ಸಿಕ್ಕಂತಾಗಿದೆ.
ಮಾಹಿತಿ ತಂತ್ರಜ್ಞಾನ ಕ್ರಾಂತಿಯಿಂದ ದಾರಿತಪ್ಪಿಸುವ ಹಾಗೂ ಸುಳ್ಳು ಸುದ್ದಿಗಳು ಇತ್ತೀಚೆಗೆ ಹೆಚ್ಚಾಗುತ್ತಿದ್ದು ಇವುಗಳ ಕಡಿವಾಣಕ್ಕೆ ಈ ಕ್ರಮ ತೆಗೆದುಕೊಳ್ಳಲಾಗ್ತಿದೆ..
ವಿಶೇಷವಾಗಿ ದಕ್ಷಿಣ ಭಾರತದದಿಂದ ಹರಡುವ ಫೇಕ್ ನ್ಯೂಸ್ ತಡೆಗಟ್ಟಲು ಫ್ಯಾಕ್ಟ್ ಚೆಕಿಂಗ್‌ನಲ್ಲಿ ಮುಂಚೂಣಿಯಲ್ಲಿರುವ ಹೈದರಾಬಾದ್ ಮೂಲದ NewsMeter ನೊಂದಿಗೆ ಮೆಟಾ ಒಪ್ಪಂದ ಮಾಡಿಕೊಂಡಿದೆ.
ಪ್ರಪಂಚದಾದ್ಯಂತ 80 ವಿಶ್ವಾಸಾರ್ಹ ಸಂಸ್ಥೆಗಳ ಜೊತೆ ಮೆಟಾ, ಸುಳ್ಳು ಸಂಗತಿ ಹಾಗೂ ಆಕ್ಷೇಪಾರ್ಹ ಸಂಗತಿಗಳನ್ನು ತಡೆಗಟ್ಟಲು ಒಪ್ಪಂದ ಮಾಡಿಕೊಂಡಿದೆ.
ಮೆಟಾ ಕಂಪನಿಯ ಸಹಭಾಗಿತ್ವ ವಿಭಾಗದ ನಿರ್ದೇಶಕ ಮನೀಶ್ ಚೋಪ್ರಾ ಅವರು , ಫ್ಯಾಕ್ಟ್ ಚೆಕ್ ನಲ್ಲಿ ಬಹಿರಂಗಗೊಂಡ ತಪ್ಪು ಮಾಹಿತಿ ಹಾಗೂ ಸುಳ್ಳು ಸುದ್ದಿಗಳನ್ನು ಕೂಡಲೇ ಪ್ರಸಾರ ಮಾಡುವುದನ್ನು ನಾವು ನಿಲ್ಲಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.